ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗೆ 14 ಕೋಟಿ ಲಾಭ
Team Udayavani, Jul 2, 2021, 9:06 PM IST
ಬಳ್ಳಾರಿ: ಕಳೆದ 44 ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಸಕ್ತ ವರ್ಷವೂ 14 ಕೋಟಿ ರೂ.ಗಳಷ್ಟು ನಿವ್ವಳ ಲಾಭಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಶ್ರೀನಾಥ್ ಜೋಶಿ ಹೇಳಿದರು.
ಇಲ್ಲಿನ ಗಾಂಧಿ ನಗರದ ಪ್ರಾದೇಶಿಕ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 44 ವರ್ಷಗಳ ಹಿಂದೆ ತುಂಗಭದ್ರಾ ಗ್ರಾಮೀಣ ಬ್ಯಾಂಕ್ ಹೆಸರಲ್ಲಿ ಆರಂಭವಾಗಿ ಬಳಿಕ ಕಾವೇರಿ, ವಿಕಾಸ ಗ್ರಾಮೀಣ ಬ್ಯಾಂಕ್‌ಗಳು ವಿಲೀನವಾದ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಆಗಿ ಕಾರ್ಯನಿರ್ವಹಿಸುತ್ತಿದೆ.
ಆರಂಭದಲ್ಲಿ ಕೇವಲ 2 ಜಿಲ್ಲೆಗಳಲ್ಲಿ ಮಾತ್ರ ಇದ್ದ ಈ ಬ್ಯಾಂಕ್ ಇಂದು 22 ಜಿಲ್ಲೆಗಳಿಗೆ ವಿಸ್ತರಿಸಿದ್ದು, 1134 ಶಾಖೆಗಳನ್ನು ಹೊಂದಿದೆ. ಅಲ್ಲದೇ, ಪ್ರಸಕ್ತ ವರ್ಷ ಬ್ಯಾಂಕ್‌ನ ಒಟ್ಟು ವ್ಯವಹಾರ 55855 ಕೋಟಿ ರೂ. ಗಳಿಗೆ ಏರಿಕೆಯಾಗಿದ್ದು, ದಕ್ಷಿಣ ಭಾರತ ಮಾತ್ರವಲ್ಲದೇ, ದೇಶದ ಎರಡನೇ ಅತಿದೊಡ್ಡ ಗ್ರಾಮೀಣ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತಿಳಿಸಿದರು.
ಕಳೆದ ವರ್ಷ 28,435 ಕೋಟಿ ರೂ. ಇದ್ದ ಠೇವಣಿ ಪ್ರಸಕ್ತ ವರ್ಷ 31,068 ಕೋಟಿ ರೂ.ಗಳಿಗೆ ಏರಿಕೆಯಾಗಿದ್ದು, ಶೇ.9.26 ರಷ್ಟು ಉತ್ತಮ ಬೆಳವಣಿಗೆ ಸಾ ಸಿದೆ. ಕೋವಿಡ್ ಸೋಂಕಿನ ಒತ್ತಡದ ಸಮಯದಲ್ಲೂ ಬ್ಯಾಂಕ್‌ನ ಸಾಲ ಮತ್ತು ಮುಂಗಡಗಳು 24787 ಕೋಟಿಗಳಿಗೆ ಏರಿಕೆಯಾಗಿದ್ದು, 3002 ಕೋಟಿ ರೂ. ಗಳ ನಿವ್ವಳ ವೃದ್ದಿ ಹಾಗೂ ಶೇ.13.78ರಷ್ಟು ಬೆಳವಣಿಗೆ ಸಾ ಸುವ ಮೂಲಕ ರೈತಾಪಿ ಗ್ರಾಹಕರಿಗೆ ಹಣಕಾಸಿನ ನೆರವನ್ನು ನೀಡಲಾಗಿದೆ ಎಂದ ಅವರು, ಆದ್ಯತಾ ವಲಯಗಳಿಗೆ ಶೇ.15.05 ರಷ್ಟು 22,928 ಕೋಟಿ ರೂ.ಗಳ ಮಟ್ಟವನ್ನು ತಲುಪಿದ್ದು, ಒಟ್ಟು ಮುಂಗಡಗಳ ಶೇ.92.50 ರಷ್ಟು ಪಾಲನ್ನು ಹೊಂದಿದೆ ಎಂದು ಪ್ರತಿಪಾದಿಸಿದರು.
ಇನ್ನು ಕೃಷಿ ವಲಯಕ್ಕೆ ಶೇ.17.97 ಪ್ರಗತಿ ಸಾಧಿ ಸಿದ್ದು, 9011 ಕೋಟಿ ರೂ. ಸಾಲವನ್ನು ವಿತರಿಸಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಲ್ಲಿ ಶೇ.35.90 ರಷ್ಟು ಪ್ರಗತಿಯಾಗಿದ್ದು, ಚಿನ್ನಾಭರಣಗಳ ಮೇಲಿನ ಸಾಲ ವಿಭಾಗದಲ್ಲಿ ಶೇ.53.73 ರಷ್ಟು ಸಾಧನೆಗೈದಿದೆ. ಕೋವಿಡ್ ಸಂಕಷ್ಟದಲ್ಲೂ ಹೊಸ ಸಾಲ ಯೋಜನೆಯನ್ನು ಜಾರಿಗೆ ತಂದಿದ್ದು, 36567 ರೈತರಿಗೆ ಮತ್ತು ಸಣ್ಣ ವ್ಯಾಪಾರಸ್ಥ ಗ್ರಾಹಕರಿಗೆ 86.33 ಕೋಟಿ ರೂ. ಸಾಲವನ್ನು ವಿತರಿಸಲಾಗಿದೆ.
ಪ್ರಧಾನ ಮಂತ್ರಿ ಸ್ವ-ನಿ ಯೋಜನೆಯಡಿ 5876 ಬೀದಿಬದಿ ವ್ಯಾಪಾರಿಗಳಿಗೆ 5.87 ಕೋಟಿ ರು.ಗಳ ಸಾಲವನ್ನು ವಿತರಿಸಲಾಗಿದೆ. ಅಲ್ಲದೇ, ಕಳೆದ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಬ್ಯಾಂಕ್‌ನ ಎಲ್ಲ ಸಿಬ್ಬಂದಿಗಳು ನೀಡಿದ್ದ ಒಂದುದಿನದ ವೇತನದ ಮೊತ್ತ 85 ಲಕ್ಷ ರೂ.ಗಳನ್ನು ಪಿಎಂ ಕೇರ್ಸ್ ಫಂಡ್ ಮತ್ತು ಸಿಎಂ ರಿಲೀಫ್ ಫಂಡ್‌ಗೆ ನೀಡುವ ಮೂಲಕ ಬ್ಯಾಂಕಿನ ಸಾಮಾಜಿಕ ಕಳಕಳಿಯನ್ನು ತೋರಿಸುತ್ತದೆ ಎಂದು ವಿವರಿಸಿದರು.
ಒಟಿಎಸ್ ಪದ್ಧತಿ ವ್ಯವಸ್ಥೆ: ಬ್ಯಾಂಕ್‌ನಿಂದ ವಿತರಣೆಯಾದ ಸಾಲ ಮರುಪಾವತಿಯಲ್ಲಿ ಒಂದಷ್ಟು ಸಮಸ್ಯೆಯಿದೆ. ಮರುಪಾವತಿಸಲು ಸಮಸ್ಯೆಯಾದಲ್ಲಿ ಅಂತಹವರಿಗಾಗಿ ಓಟಿಎಸ್ (ಒನ್ ಟೈಮ್ ಸೆಟಿಲ್‌ಮೆಂಟ್) ಪದ್ಧತಿ ಜಾರಿಗೆ ತರಲಾಗಿದೆ. ಈ ಪದ್ಧತಿಯಲ್ಲಿ ಶೇ.25 ರಷ್ಟು ಸಾಲವನ್ನು ಪಾವತಿಸಿ ಇತ್ಯರ್ಥ ಪಡಿಸಿಕೊಳ್ಳಲು ಅವಕಾಶ ಕಲ್ಪಿಸಿದ್ದು, ಅಂತಹ ಗ್ರಾಹಕರು ಈ ಯೋಜನೆ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಕೋವಿಡ್‌ಗೆ 16 ಸಿಬ್ಬಂದಿ ಬಲಿ; ಪರಿಹಾರ ವಿತರಣೆ: ಕೋವಿಡ್ ಸೋಂಕಿಗೆ ರಾಜ್ಯಾದ್ಯಂತ ಬ್ಯಾಂಕ್‌ನ ಒಟ್ಟು 14 (ಮೊದಲ ಅಲೆಯಲ್ಲಿ 6, 2ನೇ ಅಲೆಯಲ್ಲಿ 8) ಸಿಬ್ಬಂದಿಗಳು ಮೃತಪಟ್ಟಿದ್ದು, ಅವರೆಲ್ಲರ ಕುಟುಂಬಗಳಿಗೆ ತಲಾ 20 ಲಕ್ಷ ರೂ. ಪರಿಹಾರ ನೀಡಲಾಗಿದೆ. ಇನ್ನು ಬ್ಯಾಂಕ್ ಸಿಬ್ಬಂದಿಗಳ ವೇತನ ಸಮಸ್ಯೆಗೆ 170 ಕೋಟಿ ರೂ.ಗಳ ಅರಿಯರ್ನ್ನು ವಿತರಿಸುವ ಮೂಲಕ ಇತ್ಯರ್ಥ ಪಡಿಸಲಾಗಿದೆ.
ಜತೆಗೆ ಮನೆ ನಿರ್ಮಾಣಕ್ಕೆ, ವಾಹನಗಳ ಖರೀದಿಗೆ ಸಾಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರಸಕ್ತ ವರ್ಷ 247 ಸಿಬ್ಬಂದಿಗಳನ್ನು ಭರ್ತಿ ಮಾಡುವ ಮೂಲಕ ಸಿಬ್ಬಂದಿ ಕೊರತೆ ನೀಗಿಸಲಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್‌ನ ಮಹಾ ಪ್ರಬಂಧಕರಾದ ಜಿ.ಪ್ರದೀಪ್ ವರ್ಮಾ, ಎ.ಎನ್ .ಪ್ರಸಾದ್, ಎ.ಪಿ. ಹೇಮಾದ್ರಿ, ನಿಂಗೇಗೌಡ ಸೇರಿದಂತೆ ಬ್ಯಾಂಕ್ ಸಿಬ್ಬಂದಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.