ಮಾನವೀಯ ಅಂತಃಕರಣದ ಹಣತೆ ಹಚ್ಚಿದ್ದ ಕವಿ


Team Udayavani, Jul 15, 2021, 10:10 PM IST

15-17

ಬಳ್ಳಾರಿ: ನಾಡೋಜ ಡಾ| ಸಿದ್ದಲಿಂಗಯ್ಯನವರು ನಮ್ಮನ್ನು ಅಗಲಿದರೂ ಅವರ ಕಾವ್ಯಗಳ ಮೂಲಕ ಸದಾ ಅಮರರಾಗಿದ್ದಾರೆ. ಅವರ ಅಂತಃಕರಣವು ಕಲ್ಯಾಣ ರಾಜ್ಯದ ಹಣತೆ ಅವರ ಅಗಲಿಕೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಅವರು ಯಾವ ಸ್ಥಾನಮಾನದಲ್ಲಿದ್ದರೂ ಕವಿ ವ್ಯಕ್ತಿತ್ವವನ್ನು ಎಂದೂ ಕಳೆದುಕೊಳ್ಳದೆ, ಆ ಅಸ್ಮಿತೆಯನ್ನೇ ಉಳಿಸಿಕೊಂಡಿದ್ದರು ಎಂದು ವಿಎಸ್‌ಕೆ ವಿವಿ ಕುಲಪತಿ ಪ್ರೊ| ಸಿದ್ದು ಪಿ. ಆಲಗೂರ ಅಭಿಪ್ರಾಯ ಪಟ್ಟರು.

ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ ಮತ್ತು ವಿವೇಕ ವೇದಿಕೆ ವತಿಯಿಂದ ಬುಧವಾರ ಆನ್‌ಲೈನ್‌ನಲ್ಲಿ ಆಯೋಜಿಸಲಾಗಿದ್ದ ನಾಡೋಜ ದಿ. ಡಾ| ಸಿದ್ದಲಿಂಗಯ್ಯ ಅವರಿಗೆ ನುಡಿನವåನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಾಡೋಜ ಸಿದ್ದಲಿಂಗಯ್ಯನವರು ತಮ್ಮ ಚಿಂತನೆಯಲ್ಲಿ ಹೊಸತನವನ್ನು ಪ್ರಯೋಗಿಸಿ ಸಾಮಾಜಿಕವಾಗಿ ನೊಂದ ಜನರ ದನಿಯಾಗಿ ಬದುಕಿದ್ದರು ಎಂದರು.

ವಿಶೇಷ ಉಪನ್ಯಾಸ ನೀಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಬಿ.ವಿ. ವಸಂತಕುಮಾರ ಅವರು, ಸಿದ್ದಲಿಂಗಯ್ಯನವರ ಬರಹಗಳು ಕಾಲಘಟ್ಟಗಳ ಪ್ರತಿನಿಧಿಯಾಗಿದ್ದವು ಮತ್ತು ಅಂಥ ಸನ್ನಿವೇಶ ಬಂದಾಗ ಮತ್ತೆ ಮತ್ತೆ ಅಸ್ತಿತ್ವ ಉಳಿಸಿಕೊಳ್ಳುವ ಸಾಮರ್ಥ್ಯವುಳ್ಳವಾಗಿದ್ದವು. ತೀರ ಶೋಷಿತ ಸಮಾಜದ ಹಿನ್ನೆಲೆಯಲ್ಲಿ ಬೆಳೆದು ಬಂದ ಅವರು ಸಮಾಜಕ್ಕೆ ವಿಶೇಷ ಸಾಹಿತ್ಯ ರಚನೆ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಹೊಸ ರೂಪದಲ್ಲಿ ಕೊಡುಗೆ ನೀಡಿದರು.

ಸಮಾಜವು ಅವರಿಗೆ ಸಾಹಿತ್ಯ ಕ್ಷೇತ್ರದ ಉನ್ನತ ಗೌರವ ಸ್ಥಾನ ಮಾನವನ್ನು ನೀಡಿತು. ಸಮಾಜಕ್ಕೆ ಸಾಹಿತ್ಯದ ಕೊಡುಗೆ ನೀಡಿ ಸಾರ್ಥಕವಾಗಿ ಬಾಳಿದರು ಆದರೆ ಕೆಲವು ಮನಸುಗಳು ಅವರನ್ನು ದಲಿತ ಕವಿ ಎಂದು ಸೀಮಿತಗೊಳಿಸುವುದು ವಿಪರ್ಯಾಸ ಎಂದರು. ವರ್ಷದಿಂದ ಸಾಮರಸ್ಯದ ಕಡೆಗೆ ಪ್ರಯಾಣ ಮಾಡಿದ ಕಾವ್ಯಗಳು  ಸಿದ್ದಲಿಂಗಯ್ಯನವರು ಸಾಹಿತಿಯಾಗಿ ಮತ್ತು ಚಳುವಳಿಗಾರರಾಗಿ ರಾಷ್ಟ್ರೀಯವಾದಿಯಾಗಿ ಮುನ್ನೆಡೆದರು. ರಕ್ತ ದೇಹದ ಹೊರಗೆ ಹರಿದರೆ ಮರಣ, ರಕ್ತವು ದೇಹದ ಒಳಗೆ ಹರಿದರೆ ಜೀವನ, ಸಿದ್ದಲಿಂಗಯ್ಯನವರ ಕಾವ್ಯ ಜೀವನ ರೂಪಿಸಲು ಸಹಕಾರಿ.

ದಲಿತರ ಮಾತು ಕಳ್ಳು-ಬಳ್ಳಿಯ ಅಂತಃಕರಣವನ್ನು ಪ್ರತಿನಿ ಸುತ್ತದೆ. ಸಿದ್ದಲಿಂಗಯ್ಯನವರ ಕಾವ್ಯವು ದಲಿತರ ಕಾವ್ಯವೆಂದು ಬಲಿತರು ಓದದೇ ಇದ್ದದೆ ಅದು ಬಲಿತರಿಗೆ ಅನ್ಯಾಯವೇ ಹೊರತು ದಲಿತರಿಗಲ್ಲ. ದಾರಿಯಾವುದು ಎಂಬ ಹುಡುಕಾಟದ ದಾರಿಯನ್ನು ಹುಡುಕಿ ಅಂತಿಮವಾಗಿ ಬುದ್ದನೆಡೆಗೆ ಬಂದರು ಎಂದು ಗುಣಗಾನ ಮಾಡಿದರು.

ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ| ಶಶಿಕಾಂತ ಉಡಿಕೇರಿ ಪ್ರಾಸ್ತಾವಿಕ ಮಾತನಾಡಿದರು. ಡಾ| ಮಂಜುನಾಥ್‌ ನುಡಿನಮನ ಗೀತೆಯನ್ನು ಹಾಡಿದರು. ಡಾ| ಕೆ.ಸಿ. ಪ್ರಶಾಂತ್‌ ವಂದಿಸಿದರು. ಡಾ| ಕುಮಾರ್‌ ನಿರ್ವಹಿಸಿದರು. ಎಲ್ಲ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರರು ವಿವಿ ವ್ಯಾಪ್ತಿಯ ಕಾಲೇಜುಗಳ ಬೋಧಕರು, ವಿದ್ಯಾರ್ಥಿಗಳು ಸೇರಿದಂತೆ ಆನ್‌ಲೈನ್‌ ನಲ್ಲಿ ಸುಮಾರು 600ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

KSD-

Kasaragodu: ಆದೂರು ಶ್ರೀಭಗವತಿ ದೈವಸ್ಥಾನ: 351 ವರ್ಷ ಬಳಿಕ ಪೆರುಂಕಳಿಯಾಟ ಸಂಭ್ರಮ

Police

Kodagu: ಬ್ಯಾಂಕ್‌ ಅಧಿಕಾರಿಗಳು, ಜುವೆಲರಿ ಮಾಲಕರ ಜೊತೆ ಎಸ್‌ಪಿ ಸಭೆ

cOurt

Mangaluru: ಪೋಕ್ಸೋ ಪ್ರಕರಣದ ಆರೋಪಿ ದೋಷಮುಕ್ತ

ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ

ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ

MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣMLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ

MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ

ಸಮಾಜಘಾತಕ ಶಕ್ತಿಗಳ ವಿರುದ್ಧ ಗಂಭೀರ ಕ್ರಮ: ಸಿದ್ದರಾಮಯ್ಯ ಎಚ್ಚರಿಕೆ

ಸಮಾಜಘಾತಕ ಶಕ್ತಿಗಳ ವಿರುದ್ಧ ಗಂಭೀರ ಕ್ರಮ: ಸಿದ್ದರಾಮಯ್ಯ ಎಚ್ಚರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dharwad High Court: ಹಂಪಿ ನರಹರಿ ತೀರ್ಥರ ವೃಂದಾವನ ಪೂಜೆ ಯಥಾಸ್ಥಿತಿಗೆ

Dharwad High Court: ಹಂಪಿ ನರಹರಿ ತೀರ್ಥರ ವೃಂದಾವನ ಪೂಜೆ ಯಥಾಸ್ಥಿತಿಗೆ

Bellary

Bellary: ಐದು ವರ್ಷದ ಮಗುವಿನ ಅತ್ಯಾಚಾರ ನಡೆಸಿದ್ದ ಆರೋಪಿಗೆ ಗುಂಡೇಟು

ಮೀಟರ್ ಬಡ್ಡಿ ದಂಧೆಗೆ ಮನನೊಂದು ವಿಎಸ್‌ಕೆ ವಿವಿ ಅಟೆಂಡರ್ ಆತ್ಮಹತ್ಯೆ… ಪೊಲೀಸರಿಂದ ತನಿಖೆ

ಮೀಟರ್ ಬಡ್ಡಿ ದಂಧೆಗೆ ಮನನೊಂದು ವಿಎಸ್‌ಕೆ ವಿವಿ ಅಟೆಂಡರ್ ಆತ್ಮಹತ್ಯೆ… ಪೊಲೀಸರಿಂದ ತನಿಖೆ

5-balalri

ಆಕಳುಗಳ ಕೆಚ್ಚಲು ಕೊಯ್ದ ಪ್ರಕರಣ; ಶಾಸಕ,ಉಸ್ತುವಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ

Makar Sankranti: ಹಂಪಿಗೆ ಹರಿದು ಬಂದ ಭಕ್ತ ಜನ ಸಾಗರ!

Makar Sankranti: ಹಂಪಿಗೆ ಹರಿದು ಬಂದ ಭಕ್ತ ಜನ ಸಾಗರ!

MUST WATCH

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

udayavani youtube

ಮಂಗಳೂರು | ಸ್ಥಳೀಯ ಮನೆಯಂಗಳಕ್ಕೆ ಹರಿಯುತ್ತಿರುವ ಡ್ರೈನೇಜ್ ಕೊಳಚೆ

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

ಹೊಸ ಸೇರ್ಪಡೆ

Suside-Boy

Manipal: ಪಶ್ಚಿಮ ಬಂಗಾಲದ ವ್ಯಕ್ತಿಯ ಶವ ಪತ್ತೆ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

Frud

Udupi: ಷೇರು ಮಾರುಕಟ್ಟೆಯಲ್ಲಿ 21ಲಕ್ಷ ರೂ. ಹೂಡಿಕೆ: ವಂಚನೆ

balaparadha

Kumbale: ಮೊಬೈಲ್‌ ಫೋನ್‌ ಕಳವು: ಆರೋಪಿ ಸೆರೆ

Suside-Boy

Vitla: ಅನಂತಾಡಿ: ಸೀರೆಗೆ ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.