ಪರಂಪರೆ ಬಿಂಬಿಸುವ ಕಾಫಿಟೇಬಲ್ ಬುಕ್
Team Udayavani, Jul 23, 2021, 6:13 PM IST
ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ (ಸಾಮ್ರಾಜ್ಯ) ಜಿಲ್ಲೆಗಳ ಪ್ರಾಕೃತಿಕ ಸೌಂದರ್ಯ, ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆ ಬಿಂಬಿಸುವ ಕಾಫಿ ಟೇಬಲ್ ಬುಕ್ ನನ್ನು ಬಳ್ಳಾರಿ ಜಿಲ್ಲಾ ಧಿಕಾರಿ ಪವನಕುಮಾರ ಮಾಲಪಾಟಿ ಬಿಡುಗಡೆ ಮಾಡಿದರು.
ಬಳ್ಳಾರಿ ಜಿಲ್ಲಾಡಳಿತ ಮತ್ತು ಸ್ಮಯೋರ್ ಕಂಪನಿಯು ಜಂಟಿಯಾಗಿ ಸಿದ್ಧಪಡಿಸಿರುವ ಈ ಕಾಫಿ ಟೇಬಲ್ ಪುಸ್ತಕವನ್ನು ಜಿಲ್ಲಾ ಧಿಕಾರಿ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು. ಬಳ್ಳಾರಿ ಮತ್ತು ವಿಜಯನಗರ ಪ್ರದೇಶದ ಶ್ರೀಮಂತ ಸಂಸ್ಕೃತಿಯ ಪರಿಚಯ, ಬ್ರಿಟಿಷ್ ವಸಾಹತುಷಾಹಿ ಇತಿಹಾಸ ಮತ್ತು ಪರಂಪರೆ, ಮಧ್ಯಯುಗದ ಪರಂಪರೆಯ ಇತಿಹಾಸ, ಈ ಪ್ರದೇಶದ ಪ್ರಕೃತಿ, ಸಸ್ಯಸಂಪತ್ತು ಮತ್ತು ವಿಶಿಷ್ಟ ಪ್ರಾಣಿಸಂಕುಲಗಳ ಪರಿಚಯ, ಹಂಪಿಯ ಶಿಲ್ಪಕಲೆ ಮತ್ತು ಅವಶೇಷಗಳು, ಈ ಭಾಗದ ಜನರು ಮತ್ತು ಸಂಸ್ಕೃತಿ ಸೇರಿದಂತೆ ವಿವಿಧ ಪ್ರಮುಖ ವಿಷಯಗಳು ಹಾಗೂ ಅತ್ಯಾಕರ್ಷಕ ಫೋàಟೊಗುತ್ಛಗಳ ಸಂಗ್ರಹವನ್ನು ಈ ಕಾಫಿ ಈ ಪ್ರದೇಶದ ಅದ್ಭುತಗಳ ಚಿತ್ರಣ ಹಾಗೂ ಅತ್ಯಾಕರ್ಷಕ ಮಾಹಿತಿ ಇದರಲ್ಲಿದ್ದು, ಮುಖಪುಟದಲ್ಲಿ ಪ್ರಾಗೈತಿಹಾಸಿಕ ಇತಿಹಾಸ ಸಾರುವ ಸಂಗನಕಲ್ಲು ಗುಡ್ಡ ಹಾಗೂ ಹಿಂಬದಿ ಪುಟದಲ್ಲಿ ವೈಭವದ ಹಂಪಿಯ ಚಿತ್ರಣ ದಾಖಲಿಸಲಾಗಿದೆ.
ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿರುವ ಬಳ್ಳಾರಿ ಪ್ರದೇಶದ ಬಗ್ಗೆ ಕಾಫಿ ಟೇಬಲ್ ಪುಸ್ತಕವನ್ನು ಹೊರತರುವ ಪರಿಕಲ್ಪನೆಯನ್ನು ಹಿಂದಿನ ಡಿಸಿಯಾಗಿದ್ದ ಎಸ್.ಎಸ್.ನಕುಲ್ ಅವರು ಪ್ರಾರಂಭಿಸಿದರು ಮತ್ತು ಸಂಡೂರ್ ಮ್ಯಾಂಗನೀಸ್ ಮತ್ತು ಐರನ್ ಓರ್ ಲಿಮಿಟೆಡ್ (ಎಸ್‌ಎಂಐಒಆರ್‌ಇ) ಅವರು ಇದನ್ನು ಪ್ರಾಯೋಜಿಸಲು ಒಪ್ಪಿಕೊಂಡಿತ್ತು. ಹಾಲಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರು ಈ ಯೋಜನೆಗೆ ಬೆಂಬಲ ವ್ಯಕ್ತಪಡಿಸಿದ್ದರು.
ಈ ಪುಸ್ತಕವು ಬಳ್ಳಾರಿ ಜನರ ಮತ್ತು ಪ್ರದೇಶದ ಇತಿಹಾಸ, ಸಂಸ್ಕ ೃತಿ ಮತ್ತು ಜೀವನ ಶೈಲಿ ತಿಳಿಸುತ್ತದೆ. ಎಂ.ವೈ.ಘೋರ್ಪಡೆ ಅವರ ಹೆಜ್ಜೆಗಳನ್ನು ಅನುಸರಿಸಿ, ಅವರ ಮೊಮ್ಮಗ ಬಹೀರ್ಜಿ ಘೋರ್ಪಡೆ ಅವರು ಸಂಡೂರು ಪ್ರದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಉತ್ಸುಕರಾಗಿದ್ದು, ಸಂಡೂರು ಪ್ರದೇಶದ ಕೆಲ ಅದ್ಭುತ ಛಾಯಾಚಿತ್ರಗಳನ್ನು ನೀಡುವ ಮೂಲಕ ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದು ಸ್ಮಯೋರ್(ಎಸ್ ಎಂಐಒಆರ್‌ಇ) ಅಧ್ಯಕ್ಷ ಟಿ.ಆರ್.ರಘುನಂದನ್ ತಿಳಿಸಿದರು. ಅಪರ ಜಿಲ್ಲಾಧಿಕಾರಿ ಪಿ.ಎಸ್. ಮಂಜುನಾಥ್, ಮಹಾನಗರ ಪಾಲಿಕೆಯ ಆಯುಕ್ತೆ ಪ್ರೀತಿ ಗೆಹ್ಲೋಟ್, ಬಳ್ಳಾರಿ ಉಪವಿಭಾಗದ ಸಹಾಯಕ ಆಯುಕ್ತ ಡಾ| ಆಕಾಶ್ ಶಂಕರ್, ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿದ್ರಾಮಪ್ಪ ಚಳಕಾಪುರೆ, ಸ್ಮಯೋರ್ ವ್ಯವಸ್ಥಾಪಕ ನಿರ್ದೇಶಕ ಬಹೀರ್ಜಿ ಎ.ಘೋರ್ಪಡೆ, ಸ್ಮಯೋರ್ ನಿರ್ದೇಶಕ (ಗಣಿ) ಎಂ.ಡಿ.ಅಬ್ದುಲ್ ಸಲೀಮ್, ಖ್ಯಾತ ಛಾಯಾಗ್ರಾಹಕರು ಹಾಗೂ ವೈದ್ಯ ಡಾ| ಎಸ್.ಕೆ.ಅರುಣ, ಹಿರಿಯ ಪತ್ರಕರ್ತ ಎಂ.ಅಹಿರಾಜ್ ಮತ್ತು ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.