ದಲಿತ ಕೇರಿಯಲ್ಲಿ ಉಡುಪಿ ಶ್ರೀಗಳ ಪಾದಯಾತ್ರೆ
ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸೊಣ: ಪೇಜಾವರ ಶ್ರೀ
Team Udayavani, Jan 31, 2021, 3:17 PM IST
ಬಳ್ಳಾರಿ: ನಗರದ ದಲಿತಕೇರಿ ಹರಿಶ್ಚಂದ್ರ·ನಗರಕ್ಕೆ ಉಡುಪಿಯ ಪೇಜಾವರ ಮಠದವಿಶ್ವಪ್ರಸನ್ನ ತೀರ್ಥ ಶ್ರೀಪಾದ ಶ್ರೀಗಳು
ಶನಿವಾರ ಭೇಟಿ ನೀಡಿ ಪಾದಯಾತ್ರೆ ನಡೆಸುವಮೂಲಕ ಜಾತಿ ಸಾಮರಸ್ಯ ಮೆರೆದರು.
ಶ್ರೀಗಳ ಸ್ವಾಗತಕ್ಕಾಗಿ ಸುಮಾರು·ಒಂದು ಕಿಮೀ ವರೆಗಿನ ರಸ್ತೆಯ ಎರಡೂ·ಬದಿ ತಳಿರು ತೋರಣಗಳನ್ನು ಕಟ್ಟಿ
ಸಿಂಗರಿಸಲಾಗಿತ್ತು. ಮನೆಗಳ ಅಂಗಳದಲ್ಲಿ·ಸ್ವತ್ಛಗೊಳಿಸಿ ಚಿತ್ತಚಿತ್ತಾರದ ರಂಗೋಲಿ ಹಾಕಿ·ಅಲಂಕರಿಸಲಾಗಿತ್ತು. ಸ್ವಲ್ಪ ತಡವೆನಿಸಿದರೂ·ದಲಿತ ಕೇರಿ ಹರಿಶ್ಚಂದ್ರನಗರಕ್ಕೆ ಆಗಮಿಸಿ·ಶ್ರೀಗಳನ್ನು ಸ್ಥಳೀಯ ಮಹಿಳೆಯರು ಕುಂಭ·ಕಳಸವನ್ನು ಹಿಡಿದು ಸ್ವಾಗತಿಸಿದರು. ಕೇರಿಯಲ್ಲಿ·ಸುಮಾರು 1 ಕಿಮೀವರೆಗೆ ಪಾದಯಾತ್ರೆ·ನಡೆಸಿದ ಶ್ರೀಗಳಿಗೆ ಹೂವು ಹಾಕಿ, ಕಾಲಿಗೆ·ನಮಸ್ಕರಿಸುತ್ತಲೇ ಸ್ವಾಗತಿಸಿದರು.
ಬಳಿಕ ಕೇರಿಯ ರಾಮು, ಉಮೇಶ್,·ಎರ್ರಿಸ್ವಾಮಿ, ನಾಗರಾಜ್, ಹೊನ್ನೂರಪ್ಪ·ಅವರು ತಮ್ಮ ತಮ್ಮ ಮನೆಗಳಲ್ಲಿ ದಂಪತಿ·ಸಮೇತ ಶ್ರೀಗಳಿಗೆ ಪಾದಪೂಜೆ ಮಾಡಿದರು.
ಶ್ರೀಗಳ ಪಾದಗಳನ್ನು ತೊಳೆದು, ಅರಿಶಿಣ·ಕುಂಕುಮ, ವಿಭೂತಿಯನ್ನು ಹಚ್ಚಿ, ಮಾಲೆ·ಹಾಕಿ ಪೂಜೆ ಸಲ್ಲಿಸಿದರು. ಪಾದಪೂಜೆ
ಸಲ್ಲಿಸಿದ ಭಕ್ತರಿಗೆ ಶ್ರೀಗಳು ಮಂತ್ರಾಕ್ಷತೆ ಹಾಕಿ·ಆಶೀರ್ವಚನ ನೀಡಿದರು. ಬಳಿಕ ನಡೆದ·ವೇದಿಕೆ ಕಾರ್ಯಕ್ರಮದಲ್ಲಿ ಆಶೀರ್ವಚನ·ನೀಡಿದ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದ ಶ್ರೀಗಳು,·ಭರತ ಭೂಮಿ ಸಾಮಾನ್ಯವಾದುದಲ್ಲ. ಮೋಕ್ಷ·ಪ್ರದವಾಗಿರುವಂತಹ ಅನೇಕ ಕ್ಷೇತ್ರಗಳು·ಇಲ್ಲಿವೆ. ಅದರಲ್ಲಿ ಅಯೋಧ್ಯಾವನ್ನು·ಪ್ರಥಮವಾಗಿ ಪರಿಗಣಿಸಲಾಗುತ್ತದೆ.·ಭಗವಂತನೇ ಶ್ರೀರಾಮನ ರೂಪದಲ್ಲಿ·ಅವತರಿಸಿರುವ ಅಯೋಧ್ಯೆಯಲ್ಲಿ ಭವ್ಯವಾದಶ್ರೀರಾಮ ಮಂದಿರ ಇತ್ತು. ವಿದೇಶಿಯರ·ಆಕ್ರಮಣದಿಂದ ಅದು ಹಾಳಾಗಿತ್ತು. ಸನಾತನ·ಹಿಂದೂ ಧರ್ಮಿಯರ ಶಾಂತಿಯುತ
ಹೋರಾಟದಿಂದಾಗಿ ಸುಪ್ರೀಂಕೋರ್ಟ್·ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಇತ್ತು·ಎಂದು ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ·ಹಿಂದೂಗಳ ಶತಮಾನಗಳ ಕನಸು ಈಗ·ನನಸಾಗುವ ಸಮಯ ಬಂದಿದೆ ಎಂದರು.
ರಾಮ ಮಂದಿರ ನಿರ್ಮಿಸುವುದಾಗಿ ಹಲವು ಶ್ರೀಮಂತರು ಮುಂದ ಬಂದಿದ್ದರಾದರೂ ಮಂದಿರವನ್ನು ಒಬ್ಬರಿಂದ ನಿರ್ಮಿಸುವುದು ಸರಿಯಲ್ಲ. ಎಲ್ಲರೂ ಸೇರಿ ನಿರ್ಮಿಸಬೇಕು. ಹಾಗಾಗಿ ಮಂದಿರ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸಬೇಕು. ನಮ್ಮೆಲ್ಲರ ಮೇಲೂ ರಾಮದೇವರ ಅನುಗ್ರಹ
ಇರಲಿದೆ. ಟಿವಿ, ರೇಡಿಯೋಗಳಿಂದ ಬದುಕಲ್ಲಿ ಶಾಂತಿ ನೆಮ್ಮದಿ ಕೊಡಲಾಗುವುದಿಲ್ಲ. ಸಂಸ್ಕೃತಿಯ ಪುನರುತ್ಥಾನದಿಂದ ಮಾತ್ರ
ಬದುಕಲ್ಲಿ ಶಾಂತಿ ನೆಮ್ಮದಿ ಸಿಗಲಿದೆ. ಎಲ್ಲರ ಮನೆಯಲ್ಲಿ ನಿತ್ಯ ರಾಮನಾಮ ಜಪ ಮಾಡಬೇಕು. ಮನೆಯಲ್ಲಿ ಏನೇ ಒಳ್ಳೆಯ
ಕೆಟ್ಟ ಕೆಲಸಗಳನ್ನು ಮಾಡಿದಾಗಲೂ ರಾಮ ರಾಮ ಎಂದು ರಾಮನಾಮ ಸ್ಮರಿಸಬೇಕು. ಅದು ನಮ್ಮ ಬದುಕಿನ ಮಂತ್ರವಾಗಬೇಕು.
ರಾಮ ಮಂದಿರ ಶತ ಶತಮಾನಗಳ ಕಾಲ ಶಾಶ್ವತವಾಗಿ ಹಿಂದೂ ಧರ್ಮಿಯರ ಕೈಯಲ್ಲೇ ಉಳಿಯಬೇಕು. ನಮ್ಮ ಸಂಸ್ಕೃತಿ, ನಮ್ಮ ಸಂತತಿಯನ್ನು ಸಹ ಹಾಗೆ ಬೆಳೆಸಬೇಕು. ಇಲ್ಲದಿದ್ದಲ್ಲಿ ಇನ್ನೆರಡು ಶತಮಾನಗಳಲ್ಲಿ
ಇನ್ನೊಬ್ಬರ ಪಾಲಾಗಲಿದೆ ಎಂದು ಆಶೀರ್ವಚನ ನೀಡಿದರು.
ಈ ವೇಳೆ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಹನುಮಂತಪ್ಪ, ಪಾಲಿಕೆ ಮಾಜಿ ಸದಸ್ಯ ಶ್ರೀನಿವಾಸ್ ಮೋತ್ಕರ್, ರಾಬಕೋ ಹಾಲು ಒಕ್ಕೂಟದ ನಿರ್ದೇಶಕ ವೀರಶೇಖರ ರೆಡ್ಡಿ, ಸ್ಥಳೀಯ ಯುವ ಮುಖಂಡರಾದ ಷಣ್ಮುಖ, ಉಮೇಶ್ ಇದ್ದರು.
ಓದಿ : ಟೊಯೋಟಾ ಬಿಕ್ಕಟ್ಟು ಶಮನಕ್ಕೆ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಬೇಕು: ಸಿದ್ದರಾಮಯ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್
Ballary: ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಮನನೊಂದು ಪ್ರೇಮಿ ಆತ್ಮಹ*ತ್ಯೆ
Bellary: ಪ್ರಿಯಾಂಕ್ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ: ಜನಾರ್ದನ ರೆಡ್ಡಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.