ಬಾಲಕಿಯರಿಗೆ ಉನ್ನತಾಧಿ ಕಾರದ ಗೌರವ
ವಿದ್ಯಾರ್ಥಿನಿ ಪುಷ್ಪಲತಾ ಒಂದು ದಿನದ ಜಿಪಂ ಸಿಇಒ, ಕವಲೇಶ್ವರಿ ಜಿಪಂ ಉಪಾಧ್ಯಕ್ಷೆ
Team Udayavani, Jan 31, 2021, 4:02 PM IST
ಬಳ್ಳಾರಿ: ನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ರಾಷ್ಟೀಯ ಹೆಣ್ಣುಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳ ಕಲರವ ಎಲ್ಲೆಡೆ ಮೇಳೈಸಿತ್ತು. ಜಿಪಂ ಸಿಇಒ ಕೆ.ಆರ್.ನಂದಿನಿಯವರು ತಮ್ಮ ಆಸನದಲ್ಲಿ ವಿದ್ಯಾರ್ಥಿನಿ ಎಂ.ಪುಷ್ಪಲತಾಳನ್ನು ಕೂಡಿಸಿ ಒಂದು ದಿನದ ಮಟ್ಟಿಗೆ ಸಿಇಒ ಮಾಡುವ ಮೂಲಕ ಮಕ್ಕಳಲ್ಲಿ ಉನ್ನತ ಹುದ್ದೆಗಳ ಬಗ್ಗೆ ಪ್ರೇರೇಪಿಸುತ್ತಿದ್ದುದು ವಿಶೇವಾಗಿತ್ತು. ಜಿಪಂ ಸಿಇಒ ಕೆ.ಆರ್. ನಂದಿನಿ ಅವರು ಸಿರಗುಪ್ಪದ ಆದರ್ಶ ಮಹಾವಿದ್ಯಾಲಯದ ವಿದ್ಯಾರ್ಥಿನಿ ಎಂ. ಪುಷ್ಪಲತಾ ಅವರಿಗೆ
ಒಂದು ದಿನದ ಮಟ್ಟಿಗೆ ಅತಿಥಿ ಮುಖ್ಯಕಾರ್ಯನಿರ್ವಾಹಕ ಹುದ್ದೆಯ ಪ್ರಭಾರ ನೀಡುವುದರ ಮೂಲಕ ವಿದ್ಯಾರ್ಥಿನಿಯರ ಐಎಎಸ್ ಕನಸಿಗೆ ಪ್ರೇರಣೆ ನೀಡಿದ್ದಾರೆ.
ಅತಿಥಿ ಜಿಪಂ ಸಿಇಒ ಸ್ಥಾನ ಅಲಂಕರಿಸಿದ ವಿದ್ಯಾರ್ಥಿನಿ ಪುಷ್ಪಲತಾ ಈ ಸ್ಥಾನ ಅಲಂಕರಿಸಿದ್ದು ತುಂಬಾ ಸಂತೋಷವಾಯಿತು. ಮುಖ್ಯವಾಗಿ ನನ್ನ ಮುಂದಿನ ಗುರಿ ತಲುಪುವುದಕ್ಕೆ ಇದು ಪ್ರೇರಣೆ ನೀಡಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾವು ಪರೀಕ್ಷೆಯಲ್ಲಿ ಪಾಸಾಗಿ ಈ ಹುದ್ದೆಗೆ ಬಂದಿದ್ದರೂ ಇಷ್ಟು ಖುಷಿಯಾಗುತ್ತಿರಲಿಲ್ಲ ಎಂದು ಹರ್ಷ ವ್ಯಕ್ತಪಡಿಸಿದ ಅತಿಥಿ ಜಿಪಂ ಸಿಇಒ ಸಿಇಒ ಪುಷ್ಪಲತಾ, ಹಳ್ಳಿ ಪ್ರದೇಶದಲ್ಲಿ ಬಾಲ ಕಾರ್ಮಿಕ ಪದ್ದತಿ ಜಾಸ್ತಿಯಾಗುತ್ತಿದೆ. ಸರ್ಕಾರ ಎಷ್ಟೇ ಪ್ರಯತ್ನ ಪಟ್ಟರೂ ಇದು ಕಡಿಮೆ ಆಗುತ್ತಿಲ್ಲ. ಬಾಲ್ಯ ವಿವಾಹವೂ ಕೂಡ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಈ ಕುರಿತು ಸಾರ್ವಜನಿಕರಲ್ಲಿ, ಮಹಿಳೆಯರಲ್ಲಿ, ಮಕ್ಕಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯ ನಿರ್ವಸಲಾಗುವುದು ಎಂದರು.
ಜಿಪಂ ಉಪಾಧ್ಯಕ್ಷೆಯಾಗಿ ಕವಲೇಶ್ವರಿ: ಬಳ್ಳಾರಿ ಜಿಪಂ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಪಿ. ದೀನಾ ಮಂಜುನಾಥ ಅವರ ಕಚೇರಿಯಲ್ಲಿ
ವಿದ್ಯಾರ್ಥಿನಿ ಕವಲೇಶ್ವರಿ ಕೂಡ್ಲಿಗಿ ಆಸೀನರಾಗಿದ್ದರು. ಒಂದು ದಿನದ ಮಟ್ಟಿಗೆ ಕವಲೇಶ್ವರಿ ಅವರಿಗೆ ಉಪಾಧ್ಯಕ್ಷೆ ದೀನಾ ಮಂಜುನಾಥ ಅವರು ಅಧಿ ಕಾರ ವಹಿಸಿಕೊಟ್ಟರು. ಬಳಿಕ ಮಾತನಾಡಿದ ಅತಿಥಿ ಜಿಪಂ ಉಪಾಧ್ಯಕ್ಷೆ ಕವಲೇಶ್ವರಿ, ಗ್ರಾಮೀಣ ಪ್ರದೇಶದಲ್ಲಿ ಸರಿಯಾದ ಬಸ್‌ಗಳ ವ್ಯವಸ್ಥೆಯಿಲ್ಲ. ಆಟೋಗಳ ಸಂಖ್ಯೆಯೂ ತೀರಾ ವಿರಳ, ಯಾವುದಾದರು ಕೆಲಸಗಳ ನಿಮಿತ್ತ ನಗರಕ್ಕೆ ಕಡೆ ಬರಲು ತುಂಬಾ ದೂರ ಕಾಲ್ನಡಿಗೆ ಮೂಲಕ ಬರಬೇಕಾಗಿದೆ ಇದನ್ನು ತಪ್ಪಿಸಲು ಸಮರ್ಪಕ ಬಸ್‌ಗಳ ವ್ಯವಸ್ಥೆ ಮಾಡಲಾಗುವುದು ಎಂದರು.
ಎಎಸ್ಪಿ ಲಾವಣ್ಯ ಬದಲಿಗೆ ದಿವ್ಯಶ್ರೀ: ಹೆಚ್ಚುವರಿ ಎಸ್‌ಪಿ ಬಿ.ಎನ್. ಲಾವಣ್ಯ ಅವರ ಸ್ಥಾನದಲ್ಲಿ ಬಳ್ಳಾರಿ ಆದರ್ಶ ವಿದ್ಯಾಲಯದ ವಿದ್ಯಶ್ರೀ ಕೂತು ಒಂದು ದಿನದ ಮಟ್ಟಿಗೆ ಎಎಸ್‌ಪಿ ಆಗಿ ಕಾರ್ಯನಿರ್ವಹಿಸಿದರು. ಈ ವೇಳೆ ಎಎಸ್‌ಪಿ ಲಾವಣ್ಯ ಅವರು, ಅತಿಥಿ ಎಎಸ್ಪಿ ವಿದ್ಯಾರ್ಥಿನಿ ದಿವ್ಯಶ್ರೀಗೆ ಪೊಲೀಸ್ ಇಲಾಖೆಯ ಕಾರ್ಯವೈಖರಿ ಬಗ್ಗೆ ತಿಳಿಸಿಕೊಟ್ಟಿದ್ದು ಕಂಡುಬಂದಿತು. ಗ್ರಾಮೀಣ ಪ್ರದೇಶದಲ್ಲಿ ತುಂಬಾ ಜನ ಹೆಣ್ಣು ಮಕ್ಕಳಿಗೆ ಕಾನೂನಿನ ತಿಳವಳಿಕೆ ಇಲ್ಲ. ಕಾನೂನು, ಎಫ್ .ಐ.ಆರ್, ಪೊಲೀಸ್ ವ್ಯವಸ್ಥೆಯ ಬಗ್ಗೆ ಮಹಿಳೆಯರಲ್ಲಿ ಅರಿವು ಮೂಡಿಸಲಾಗುವುದು ಎಂದು ಅತಿಥಿ ಎಎಸ್‌ಪಿ ದಿವ್ಯಶ್ರೀ ತಿಳಿಸಿದರು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ, ಡಿಎಚ್‌ಒ
ಜನಾರ್ಧನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ್, ಜಿಪಂ ಉಪಕಾರ್ಯದರ್ಶಿ ಜಾನಕಿರಾಂ ಸೇರಿದಂತೆ ಇನ್ನಿತರೆ ಉಪ ಕಾರ್ಯದರ್ಶಿಗಳು, ಜಿಪಂ ಮುಖ್ಯ ಯೋಜನಾ ನಿರ್ದೇಶಕ ಚಂದ್ರಶೇಖರ ಗುಡಿ ಇದ್ದರು.
ಓದಿ : ಸಾಂಘವಾಗಿ ನೆರವೇರಿದ ಜಾತ್ರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.