ಮಾಚಿದೇವರ ಕಾಯಕ-ವಚನ ಮಾದರಿ
ಜಿಲ್ಲೆಯ ವಿವಿಧೆಡೆ ಮಡಿವಾಳ ಮಾಚಿದೇವರ ಜಯಂತಿ ಆಚರಣೆ-ವಿಶೇಷ ಪೂಜೆ
Team Udayavani, Feb 2, 2021, 2:14 PM IST
ಬಳ್ಳಾರಿ: ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿ ಸಭಾಂಗಣದಲ್ಲಿ ಮಡಿವಾಳ ಮಾಚಿದೇವರ ಜಯಂತಿಯನ್ನು ಸೋಮವಾರ ಸರಳವಾಗಿ ಆಚರಿಸಲಾಯಿತು. ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ಕೆ.ರಂಗಣ್ಣವರ್ ಅವರು ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಸಮಾನತೆಯ ಕ್ರಾಂತಿಗೆ, ಸಮ ಸಮಾಜದ ನಿರ್ಮಾಣಕ್ಕಾಗಿ ದುಡಿದವರಲ್ಲಿ ಮಡಿವಾಳ ಮಾಚಿದೇವ ಶರಣರು ಕೂಡ ಒಬ್ಬರು. ಮೇಲು-ಕೀಳು ಎನ್ನುವುದನ್ನು ಜನರಲ್ಲಿ ಕಿತ್ತು ಹಾಕುವ ಕಾರ್ಯವನ್ನು ಮಡಿವಾಳ ಮಾಚಿದೇವರು ಮಾಡಿದ್ದಾರೆ. ಅವರ ಕಾಯಕ, ಅವರ ವಚನಗಳು ಇತರರಿಗೆ ಮಾದರಿಯಾಗಿದ್ದು, ಇಂದಿನ ಯುವ
ಜನತೆ ಶರಣರ ಬದುಕಿನ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದರು.
ಸಮಾನತೆಯ ಸಮಾಜ ಮತ್ತು ಸಾಮರಸ್ಯ ಸಮಾಜ ನಿರ್ಮಾಣಕ್ಕೆ ಇವರ ಬದುಕೇ ಒಂದು ಮಾರ್ಗದರ್ಶನ. ಶರಣರ ವಿಚಾರಧಾರೆಗಳನ್ನು ನೆನೆಯುವ ಕೆಲಸ ಮಾಡುವ ಮುಖಾಂತರ ಇಂದಿನ ಯುವ ಸಮೂಹಕ್ಕೆ ಅವರ ಬದುಕಿನ ಬಗ್ಗೆ ತಿಳಿಸುವ ಕೆಲಸ ಆಗುತ್ತಿದೆ. ಕೊವಿಡ್ ಹಿನ್ನಲೆಯಲ್ಲಿ ಸರ್ಕಾ ರದ ಮಾರ್ಗಸೂಚಿ ಅನ್ವಯ ಈ ಬಾರಿ ಸರಳವಾಗಿ ಜಯಂತಿಯನ್ನು ಆಚರಿಸಲಾಗಿದೆ. ಮುಂದಿನ ವರ್ಷ ತುಂಬಾ ಅದ್ದೂರಿಯಾಗಿ ಜಯಂತಿಯನ್ನು ಆಚರಿಸಲಾಗುವುದು ಎಂದರು.
ಬಿಜೆಪಿ ಮುಖಂಡ ಅನಿಲ್ ನಾಯುಡು ಮಾತನಾಡಿ, ಮಡಿವಾಳ ಮಾಚಿದೇವರು ಕೇವಲ ಒಂದು ಜಾತಿಗೆ ಸೀಮಿತವಾದವರಲ್ಲ. ಸಮಾಜದ ಏಳಿಗೆಗೆ, ಸಮಾನತೆಗೆ ಅವರು ನಿರ್ವಹಿಸಿದ ಪಾತ್ರ ಮಹತ್ವದ್ದು. ಅವರ ಸಂದೇಶ ಮತ್ತು ವಿಚಾರಗಳನ್ನು ಸಮಾಜದ ಎಲ್ಲ ಜನರು ಸ್ವೀಕರಿಸುತ್ತಿದ್ದರು. ಮುಂದೆ ಎಲ್ಲ ಸಮುದಾಯದರು ಈ ಜಯಂತಿಯಲ್ಲಿ ಪಾಲ್ಗೊಳ್ಳುವಂತಾಗಲಿ. ಸಮುದಾಯದ ಯುವಕರು ಶಿಕ್ಷಣ
ಪಡೆಯುವ ಮೂಲಕ ಸಮಾಜ ಮುನ್ನಲೆಗೆ ಬರಬೇಕು. ಶರಣರ ಜಯಂತಿಯನ್ನು ಈ ಬಾರಿ ಸಾಂಕೇತಿಕವಾಗಿ ಮತ್ತು ಸರಳವಾಗಿ ಆಚರಣೆ ಮಾಡಲಾಗಿದೆ. ಮುಂದಿನ ಸಲ ತುಂಬಾ ವಿಜೃಂಭಣೆಯಿಂದ ಜಯಂತಿ ಆಚರಣೆ ಮಾಡೋಣ ಎಂದು ಅವರು ತಿಳಿಸಿದರು.
ಜಯಂತಿಯಲ್ಲಿ ಸಮುದಾಯದ ಮುಖಂಡರಾದ ಧನಂಜಯ, ಹೊನ್ನೂರಪ್ಪ, ಬಾಬು ಮಡಿವಾಳ, ಕೃಷ್ಣಾ, ವೀರೇಶ್, ಎಲ್ಲಪ್ಪ ಮಡಿವಾಳ, ವಿವೇಕ್ ಸೇರಿದಂತೆ ಸಮುದಾಯದ ಹಲವಾರು ಜನರು, ವಿವಿಧ ಇಲಾಖೆಗಳ ಅ ಕಾರಿಗಳು ಇದ್ದರು.
ಓದಿ : ಯುವ ವೇದಿಕೆ ಘಟಕಕ್ಕೆ ಚಾಲನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
Covid Scam: ನ್ಯಾ.ಡಿ.ಕುನ್ಹಾ ವರದಿ ವಿಪಕ್ಷಗಳ ಬೆದರಿಸುವ ತಂತ್ರ: ಬಿ.ವೈ.ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲೀಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.