ವಚನಗಳ ಸಂರಕ್ಷಣೆಯಲ್ಲಿ ಮಾಚಿದೇವರ ಪಾತ್ರ ಪ್ರಮುಖ
ಕಂಪ್ಲಿ: ತಾಲೂಕು ಕಚೇರಿ ಸಭಾಂಗಣದಲ್ಲಿ ಮಡಿವಾಳ ಸಮಾಜ ಮತ್ತು ತಾಲೂಕು ಆಡಳಿತದಿಂದ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಜರುಗಿತು.
Team Udayavani, Feb 2, 2021, 2:18 PM IST
ಕಂಪ್ಲಿ: 12ನೇ ಶತಮಾನದಲ್ಲಿ ಶಿವ ಶರಣರು ತಮ್ಮ ಕಾಯಕದ ಜೊತೆಗೆ ಬರೆಯುತ್ತಿದ್ದ ವಚನಗಳ ಸಂರಕ್ಷಣೆಯಲ್ಲಿ ಮಡಿವಾಳ ಮಾಚಿದೇವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ತ್ಯಾಗ ಸ್ಮರಣೀಯ ಎಂದು ತಹಶೀಲ್ದಾರ್ ಗೌಸಿಯಾಬೇಗಂ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಮಡಿವಾಳ ಮಾಚಿದೇವರ ಜಯಂತಿ ಅಂಗವಾಗಿ ತಾಲೂಕು ಆಡಳಿತ ಹಾಗೂ ಕಂಪ್ಲಿ ತಾಲೂಕು ಮಡಿವಾಳರ ಸಂಘದ ಸಹಯೋಗದಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪನಮನ ಸಲ್ಲಿಸಿದ ನಂತರ ಮಾತನಾಡಿದ ಅವರು, ಸಮಾನತೆ, ಜಾತಿಯತೆ ನಿರ್ಮೂಲನೆ, ಸೀ÷ ಸ್ವಾತಂತ್ರ ಹನ್ನೆರಡನೆಯ ಶತಮಾನದಲ್ಲಿ ನಡೆದ ಕಲ್ಯಾಣ
ಕ್ರಾಂತಿಯ ಮೂಲ ಉದ್ದೇಶವಾಗಿತ್ತು. ಅಂದಿನ ಸಾಮಾಜಿಕ ಕ್ರಾಂತಿಯಲ್ಲಿ ಮಡಿವಾಳ ಮಾಚಿದೇವರು ವಚನ ಗ್ರಂಥಗಳನ್ನು ಸಂರಕ್ಷಿಸುವ ಮೂಲಕ ಶರಣರ ಗೌರವಕ್ಕೆ ಪಾತ್ರರಾಗಿದ್ದರಲ್ಲದೆ, ಸಮಾಜದ ಕೊಳೆಯನ್ನು ತೊಳೆಯುವಲ್ಲಿ ವಿಶೇಷ ಪಾತ್ರವನ್ನು ವಹಿಸಿದ್ದರು.
ಸಮಾಜಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದು, ಸಮಾಜದವರು ಅವರ ವಿಚಾರಧಾರೆಗಳನ್ನು ಪಾಲಿಸುವ ಜತೆಗೆ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಅಭಿವೃದ್ಧಿ ಹೊಂದಬೇಕು ಎಂದರು.
ಪುರಸಭೆ ಅಧ್ಯಕ್ಷೆ ಶಾಂತಲಾ ವಿ. ವಿದ್ಯಾಧರ, ತಾಲೂಕು ಮಡಿವಾಳರ ಸಂಘದ ಅಧ್ಯಕ್ಷ ಎಂ. ಹುಲುಗಪ್ಪ ಮಾತನಾಡಿದರು. ನಂತರ ಪರಿಶಿಷ್ಟ ಜಾತಿಗೆ ಮಡಿವಾಳ ಜನಾಂಗವನ್ನು ಸೇರಿಸುವಂತೆ ಆಗ್ರಹಿಸಿ ಮಡಿವಾಳ ಸಮಾಜದವರು ತಹಶೀಲ್ದಾರ್ ಗೌಸಿಯಾಬೇಗಂಗೆ
ಮನವಿ ಸಲ್ಲಿಸಿದರು.
ಉಪ ತಹಶೀಲ್ದಾರ್ ಬಿ. ರವೀಂದ್ರಕುಮಾರ್, ಕಂದಾಯ ಅ ಧಿಕಾರಿ ಎ. ಗಣೇಶ, ಮುಖಂಡರಾದ ವಿ. ವಿದ್ಯಾಧರ, ಕೆ.ವಸಂತಕುಮಾರ, ಮರಿಯಪ್ಪನಾಯಕ, ವಿರುಪಣ್ಣ, ಕಂಪ್ಲಿ ತಾಲೂಕು ಮಡಿವಾಳ ಮಾಚಿದೇವರ ಸಂಘದ ಗೌರವಾಧ್ಯಕ್ಷ ಯಂಕಪ್ಪ, ಕಾರ್ಯದರ್ಶಿ ಎಂ. ರಾಜ, ಖಜಾಂಚಿ ರವಿಕುಮಾರ್, ವಿರುಪಾಕ್ಷಿ, ಈರಣ್ಣ, ಹನುಮಂತ, ರಮೇಶ, ವಿರೇಶ, ಬಸವರಾಜ, ನಾಗರಾಜ, ಹನುಮಂತಪ್ಪ, ಆನಂದಪ್ಪ, ತಾಯಣ್ಣ ಇದ್ದರು.
ಓದಿ : ಮಾಚಿದೇವರ ಕಾಯಕ-ವಚನ ಮಾದರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.