ಪ್ರತಿಷ್ಠಿ ತ ಬಡಾವಣೆಯಲ್ಲೇ ಸಮಸ್ಯೆ ಸಾಲುಸಾಲು!

ವಾರ ಕಳೆದರೂ ತೆರವಾಗದ ತ್ಯಾಜ್ಯ

Team Udayavani, Feb 3, 2021, 1:40 PM IST

3-15

ಬಳ್ಳಾರಿ: ನೀರು ಹರಿಯದಂತೆ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ತೆರೆದ ಚರಂಡಿ, ಪ್ರತಿದಿನ ಬಾರದ ಕಸ ಸಂಗ್ರಹ ವಾಹನ…. ಎರಡು ಮೂರು ವಾರ ಕಳೆದರೂ ತೆರವುಗೊಳ್ಳದ ತಿಪ್ಪೆಗುಂಡಿಗಳಲ್ಲಿನ ತ್ಯಾಜ್ಯ… ದುರಸ್ತಿಯಿಂದ ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ಚೇಂಬರ್‌ಗಳ ಮುಚ್ಚಳ.. ಜನಪ್ರತಿನಿ ಧಿಗಳು ಇಲ್ಲದ ಹಿನ್ನೆಲೆಯಲ್ಲಿ ಜನರ ಸಮಸ್ಯೆಗಳನ್ನು ಕೇಳದ ಸಂಬಂಧಪಟ್ಟ ಇಲಾಖೆ ಅಧಿ ಕಾರಿಗಳು….!!! ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೂತನವಾಗಿ ರಚನೆ ಮಾಡಲಾಗಿರುವ 3ನೇ ವಾರ್ಡ್‌ನಲ್ಲಿ ಜನರು ನಿತ್ಯ ಅನುಭವಿಸುತ್ತಿರುವ ಸಮಸ್ಯೆಗಳಿವು.
ಈ ವಾರ್ಡ್‌ನಲ್ಲಿನ ಗೌಳೇರಹಟ್ಟಿ, ಲಾಲಾಕಮಾನ್‌, ಬಾಲಾಂಜನೇಯ ಬೀದಿ, ಬಂಡಿಮೋಟ್‌, ಮೃತ್ಯುಂಜಯ ನಗರ ಪ್ರದೇಶಗಳು ಬರುತ್ತವೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಡಿ ಮನೆಗಳೇ ಇರುವ ಈ ಬೀದಿಗಳಲ್ಲಿ ಸಮರ್ಪಕ ಸಿಸಿ ರಸ್ತೆ ನಿರ್ಮಾಣ, ತಡವಾದರೂ ಸಮಪರ್ಕವಾಗಿ ಕುಡಿವ ನೀರಿನ ಸೌಲಭ್ಯ ಲಭಿಸುವ ಮೂಲಕ ನೋಡಲು ಪ್ರತಿಷ್ಠಿತ ಬಡಾವಣೆಗಳು ಎನಿಸಿದರೂ, ಸ್ಥಳೀಯ ಜನರನ್ನು ಮಾತಿಗೆಳೆದಾಗ ಸಮಸ್ಯೆಗಳ
ಹೂರಣ ಹೊರಬೀಳುತ್ತದೆ.
ವಾರ್ಡ್‌ನಲ್ಲಿ ಎಲ್ಲೆಡೆ ನಿರ್ಮಿಸಲಾಗಿರುವ ಸಿಸಿ ರಸ್ತೆಯ ಎರಡೂ ಬದಿ ಪಾಲಿಕೆಯಿಂದ ನಿರ್ಮಿಸಲಾಗಿರುವ ತೆರೆದ ಚರಂಡಿಗಳು ಅವೈಜ್ಞಾನಿಕತೆಯಿಂದ ಕೂಡಿವೆ. ಚಿಕ್ಕಚಿಕ್ಕ ಓಣಿಗಳಲ್ಲಿನ ತೆರೆದ ಚರಂಡಿ ಕಾಲುವೆಗಳು ಸಂಪರ್ಕ ಹೊಂದಿರುವ ಪ್ರಮುಖ ರಸ್ತೆಯ ದೊಡ್ಡ ಕಾಲುವೆಗಳೇ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಪರಿಣಾಮ ತೆರೆದ ಚರಂಡಿಗಳಲ್ಲಿ ಸರಾಗವಾಗಿ ಮುಂದಕ್ಕೆ ಹರಿಯಬೇಕಿದ್ದ ಕೊಚ್ಚೆ ನೀರು ಅಲ್ಲೇ ಸ್ಥಗಿತಗೊಂಡು ದುರ್ನಾಥ ಬೀರುವ ಪರಿಸ್ಥಿತಿ ನಿರ್ಮಾಣವಾಗಿದೆ. ವಾರ್ಡ್‌ನ ನಾಲ್ಕೈದು ಕಡೆ ಇದೇ ರೀತಿ ಅವೈಜ್ಞಾನಿಕವಾಗಿ ತೆರೆದ
ಚರಂಡಿಯನ್ನು ನಿರ್ಮಿಸಲಾಗಿದ್ದು, ತ್ಯಾಜ್ಯ ಸಂಗ್ರಹವಾಗಿ ಕಾಲುವೆಗಳೇ ಮುಚ್ಚಿಹೋಗಿವೆ ಎಂದು ಪಾಲಿಕೆ ಅಧಿ ಕಾರಿ, ಜನಪ್ರತಿನಿ ಧಿಗಳ
ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಾರೆ ಸ್ಥಳೀಯ ನಿವಾಸಿ ರಾಜು.

ಬಾರದ ವಾಹನ, ತೆರವಾಗದ ತ್ಯಾಜ್ಯ: ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ರಸ್ತೆಗಳ ಮೇಲೆ ಬಿಸಾಡದಂತೆ ಮನೆಯಿಂದ ಕಸ ಸಂಗ್ರಹಿಸಲು ಪಾಲಿಕೆಯಿಂದ ವಾಹನಗಳ ವ್ಯವಸ್ಥೆ ಮಾಡಿ ಹಲವು ವರ್ಷಗಳೇ ಕಳೆದಿವೆ. ಆದರೆ ಈವರೆಗೂ ಈ ವಾರ್ಡ್‌ಗೆ ಪ್ರತಿದಿನ ಕಸ
ಸಂಗ್ರಹ ವಾಹನ ಬರಲ್ಲ. ಒಂದು ದಿನ ಬಿಟ್ಟು ಒಂದು ದಿನ ಬರಲಿದೆ ಎಂದು ಮನೆಯಲ್ಲೇ ಕಸವನ್ನು ಸಂಗ್ರಹಿಸಿಟ್ಟುಕೊಂಡರೆ ಮಾರನೇ
ದಿನವೂ ಬರಲ್ಲ. ಇದರಿಂದ ಮನೆಯಲ್ಲೇ ಕಸದ ಪ್ರಮಾಣ ಹೆಚ್ಚಾಗಿ ಹುಳ-ಹುಪ್ಪಡಿಗಳ ಕಾಟ ಹೆಚ್ಚಾಗಲಿದೆ ಎಂದು ಸಮೀಪದ ತಿಪ್ಪೆಗುಂಡಿಯಲ್ಲಿ ಬಿಸಾಕುತ್ತೇವೆ. ಅಲ್ಲಿಯೂ ಎರಡು ಮೂರು ವಾರಗಳು ಗತಿಸಿದರೂ ಕಸವನ್ನು ತೆರವುಗೊಳಿಸುವುದು ಅನುಮಾನ. ರಾಶಿ ರಾಶಿ ತ್ಯಾಜ್ಯ ಸಂಗ್ರಹವಾಗಿ ರಸ್ತೆ ಮೇಲೆಲ್ಲಾ ವ್ಯಾಪಿಸಿ ಸ್ಥಳೀಯ ನಿವಾಸಿಗಳು ಕಿರಿಕಿರಿ ಅನುಭವಿಸುವಂತಾಗಿದೆ. ಇನ್ನು ಒಳಚರಂಡಿಗೆ ನಿರ್ಮಿಸಿರುವ ಚೇಂಬರ್‌ಗಳ ಮುಚ್ಚಳಗಳು ಒಡೆದು, ದುರಸ್ತಿಗೆ ಬಂದಿದೆ. ಚಿಕ್ಕ ಚಿಕ್ಕ ಮಕ್ಕಳು ತಿರುಗಾಡುವ ಈ ರಸ್ತೆಗಳಲ್ಲಿ ಅನಾಹುತ ಸಂಭವಿಸುವ ಮುನ್ನವೇ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.

ಮುಗಿದ ಅವಧಿ-ಕೇಳದ ಅಧಿಕಾರಿಗಳು: ಬಳ್ಳಾರಿ ಮಹಾನಗರ ಪಾಲಿಕೆ ಸದಸ್ಯರ ಅವಧಿ ಮುಗಿದು ಎರಡು ವರ್ಷಗಳು ಗತಿಸಿದೆ. ಹೊಸ ಸದಸ್ಯರ ಚುನಾಯಿಸಲು ನಡೆಯಬೇಕಿದ್ದ ಚುನಾವಣೆ ವಿನಾಕಾರಣ ವಿಳಂಬವಾಗುತ್ತಿದೆ. ಪರಿಣಾಮ ವಾಡ್‌ ನಲ್ಲಿ ಜನರ ಸಮಸ್ಯೆಗಳನ್ನು ಕೇಳುವವರೇ ಇಲ್ಲವಾಗಿದೆ. ಸಮಸ್ಯೆಗಳ ಬಗ್ಗೆ ಸ್ಥಳೀಯ ನಿವಾಸಿಗಳು ಪಾಲಿಕೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸಂಬಂಧಪಟ್ಟ ಅಧಿ ಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಇಲ್ಲವಾಗಿದೆ. ರಾಜಕೀಯವಾಗಿ ಗುರುತಿಸಿಕೊಂಡಿರುವ ಸ್ಥಳೀಯ ಯುವ ಮುಖಂಡರಿಂದ ಹೇಳಿಸಿದರೆ ಅಧಿ ಕಾರಿಗಳು ಒಂದಷ್ಟು ಕೇಳುತ್ತಾರೆ ಹೊರತು ಸಮಸ್ಯೆ ಹೊತ್ತು ಹೋಗುವ ಜನರನ್ನು ಮಾತ್ರ ಕ್ಯಾರೆ ಎನ್ನಲ್ಲ ಎಂದು ಸ್ಥಳೀಯ ನಿವಾಸಿಗಳು ಅಳಲು ತೋಡಿಕೊಳ್ಳುತ್ತಾರೆ.

*ವೆಂಕೋಬಿ ಸಂಗನಕಲ್ಲು

ಟಾಪ್ ನ್ಯೂಸ್

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-naxal

Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ

yatnal–waqf

Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್‌

Ballary-Suside

Ballary: ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಮನನೊಂದು ಪ್ರೇಮಿ ಆತ್ಮಹ*ತ್ಯೆ

Bellary: ಪ್ರಿಯಾಂಕ್‌ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

Bellary: ಪ್ರಿಯಾಂಕ್‌ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ

ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.