ಒಂದು ದೇಶ-ಒಂದು ಸಹಾಯವಾಣಿ ಅಭಿಯಾನ
ಡಿವೈಎಸ್ಪಿ ಹಾಲಮೂರ್ತಿರಾವ್ ನೇತೃತ್ವದಲ್ಲಿ ಪೊಲೀಸ್ ಇಲಾಖೆಯ ಉಪವಿಭಾಗಮಟ್ಟದ ಸಭೆ ನಡೆಯಿತು
Team Udayavani, Feb 3, 2021, 1:46 PM IST
ಹರಪನಹಳ್ಳಿ: ಪೊಲೀಸ್, ಆರೋಗ್ಯ, ಅಗ್ನಿಶಾಮಕಸೇರಿದಂತೆ ಇನ್ನಿತರ ತುರ್ತು ಸೇವೆಗಳಿಗೆ ದೇಶಕ್ಕೆ ಒಂದೇನಂಬರ್ ಜಾರಿಗೆ ಬಂದಿದ್ದು ರಾಜಧಾನಿ ಬೆಂಗಳೂರಿನಲ್ಲಿಈಗಾಗಲೇ 112 ಸಂಖ್ಯೆ ಜಾರಿಯಾಗಿದೆ. ಹಿಂದೆ ಪೊಲೀಸ್,ಅಗ್ನಿಶಾಮಕ, ಆಂಬ್ಯುಲೆನ್ಸ್‌ಗೆ ಪ್ರತ್ಯೇಕ ತುರ್ತು ಸೇವಾನಂಬರ್‌ಗಳಿದ್ದವು. ಅದೀಗ ಒಂದೇ ನಂಬರ್‌ನಡಿ ಬಂದಿದ್ದು112 ಸಂಖ್ಯೆಯಾಗಿದೆ ಎಂದು ಹರಪನಹಳ್ಳಿ ಉಪ ವಿಭಾಗದ
ಡಿವೈಎಸ್ಪಿ ಹಾಲಮೂರ್ತಿರಾವ್ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ರಾಜೀವ್‌ಗಾಂದಿಸಭಾಂಗಣದಲ್ಲಿ ಹರಪನಹಳ್ಳಿ, ಹಡಗಲಿ, ಕೊಟ್ಟೂರುತಾಲೂಕಿನ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಸಭೆಯಲ್ಲಿ ಮಾತನಾಡಿದ ಅವರು, ತುರ್ತು ಪರಿಸ್ಥಿತಿಯಲ್ಲಿ100, 101, 108 ಸಹಾಯ ಸಂಖ್ಯೆಯ ಬದಲು 112
ಸಂಖ್ಯೆಗೆ ಕರೆ ಮಾಡಬೇಕು ಹಾಗೂ ಕರೆ ಬಂದಾಗ ಹೇಗೆಕಾರ್ಯ ನಿರ್ವಹಣೆ ಮಾಡಬೇಕು ಎಂದು ಮಾಹಿತಿನೀಡಿದರು. ಹಿಂದೆ ಪೊಲೀಸ್, ಅಗ್ನಿಶಾಮಕ, ಆಂಬ್ಯುಲೆನ್ಸ್‌ಗೆಪ್ರತ್ಯೇಕ ತುರ್ತು ಸೇವಾ ನಂಬರ್‌ಗಳಿದ್ದವು. ಇದೀಗ ಒಂದೇನಂಬರ್ 112 ಸಂಖ್ಯೆಯಾಗಿದೆ. 112ಗೆ ಕರೆ ಮಾಡಿದಾಗಬೆಂಗಳೂರಿನಲ್ಲಿ ಕಂಟ್ರೋಲ್ ರೂಮ್‌ಗೆ ಸಂದೇಶರವಾನೆಯಾಗುತ್ತದೆ. ಬೆಂಗಳೂರಿನಲ್ಲಿ ಪರಿಣತ, ತರಬೇತಿ
ಪಡೆದ ಕಾಲ್‌ಸೆಂಟರ್ ಸಿಬ್ಬಂದಿ ಕರೆ ಮಾಹಿತಿಯನ್ನು ಕಲೆಹಾಕುತ್ತಾರೆ. ಬಳಿಕ ಕರೆ ಮಾಡಿದವರ ಲೋಕೇಷನ್ ಪತ್ತೆಹಚ್ಚಿ ಮ್ಯಾಪ್ ಸಂಗ್ರಹಿಸಲಾಗುತ್ತದೆ.ಕರೆ ಮಾಡಿದ ವ್ಯಕ್ತಿಹೇಳಿದ ಸಮಸ್ಯೆಯ ಸಂಪೂರ್ಣ ಮಾಹಿತಿ ಪಡೆದ ಬಳಿಕಸಂಬಂಧಪಟ್ಟ ಕಂಟ್ರೋಲ್ ರೂಂ, ಪೊಲೀಸ್, ಆಂಬ್ಯುಲೆನ್ಸ್,ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ರವಾನಿಸಲಾಗುತ್ತದೆ ಎಂದುತಿಳಿಸಿದರು.
ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಪ್ರಸ್ತುತ 22ಜಿಲ್ಲೆಗಳಲ್ಲಿ ಅನುಷ್ಠಾನಗೊಂಡಿದ್ದು ಸದ್ಯದಲ್ಲೇ ಬಳ್ಳಾರಿಜಿಲ್ಲೆಯಲ್ಲಿ ಪ್ರಾರಂಭವಾಗಲಿದೆ ಎಂದರು. ಈ ವೇಳೆಹರಪನಹಳ್ಳಿ ವೃತ್ತ ನೀರಿಕ್ಷಕ ಕೆ.ಕುಮಾರ್, ಹಡಗಲಿಕೆ.ರಾಮರೆಡ್ಡಿ, ಕೊಟ್ಟೂರಿನ ದೊಡ್ಡಪ್ಪ ಹಾಗೂ ಮೂರುತಾಲೂಕಿನ ಪಿಎಸ್‌ಐ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್
Ballary: ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಮನನೊಂದು ಪ್ರೇಮಿ ಆತ್ಮಹ*ತ್ಯೆ
Bellary: ಪ್ರಿಯಾಂಕ್ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.