ಹಳೆ ವೈಷಮ್ಯ ಶಂಕೆ ; ರೌಡಿ ಶೀಟರ್ ನೆರಮಟ್ಲ ಯಲ್ಲಪ್ಪ ಬರ್ಬರ ಹತ್ಯೆ
Team Udayavani, Feb 26, 2020, 10:48 AM IST
ಬಳ್ಳಾರಿ: ಇಲ್ಲಿನ ದೇವಿನಗರ 3ನೇ ಕ್ರಾಸ್ ಬಳಿ ರೌಡಿ ಶೀಟರ್ ನೆರಮೆಟ್ಲ ಯಲ್ಲಪ್ಪ (48) ಎನ್ನುವವರನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ರಸ್ತೆ ಬದಿಯಲ್ಲಿ ಕುಳಿತಿದ್ದ ವೇಳೆ ನಿನ್ನೆ ರಾತ್ರಿ 8.30 ರ ಸುಮಾರಿಗೆ ಆಟೋದಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ರಕ್ತಸಿಕ್ತವಾಗಿದ್ದ ಯಲ್ಲಪ್ಪನ ದೇಹವನ್ನು ತಕ್ಷಣ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಯತ್ನಿಸಿದರೂ ಬದುಕುಳಿಯಲಿಲ್ಲ. ಎಸ್ಪಿ ಸಿ.ಕೆ.ಬಾಬಾ, ಎಎಸ್ಪಿ ಲಾವಣ್ಯ, ನಗರ ಡಿವೈಎಸ್ಪಿ ರಾಮರಾವ್, ಕೌಲ್ ಬಜಾರ್ ಠಾಣೆಯ ಸಿಪಿಐ ಹಾಲೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಬಗ್ಗೆ ಕೌಲ್ ಬಜಾರ್ ಠಾಣೆಯಲ್ಲಿ ಪಾಲಿಕೆಯ ಮಾಜಿ ಸದಸ್ಯ ಅಂದ್ರಾಳ್ ಸೀತಾರಾಮ್, ಜಗ್ಗ ಸೇರಿದಂತೆ ಐವರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 2017ರಲ್ಲಿ ಬಂಡಿ ರಮೇಶ್ ಕೊಲೆ ಪ್ರಕರಣದಲ್ಲಿ ಜಗ್ಗ ಮತ್ತು ಕೊಲೆಯಾದ ನೆರಮೆಟ್ಲ ಯಲ್ಲಪ್ಪ ಪ್ರಮುಖ ಆರೋಪಿಗಳಾಗಿದ್ದಾರೆ.
ಘಟನೆ : ಮನೆಯ ಮುಂದಿನ ರಸ್ತೆಯಲ್ಲಿನ ಅಂಗಡಿಯೊಂದರ ಬಳಿ ಕುಳಿತಿದ್ದ ಯಲ್ಲಪ್ಪ ಮೇಲೆ ಮಚ್ಚು, ಲಾಂಗುಗಳೊಂದಿಗೆ ಆಟೋದಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಬರ್ಬರವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಸಮೀಪದಲ್ಲೇ ಇದ್ದ ಮಾಂಸದ ಅಂಗಡಿ ವ್ಯಾಪಾರಿ ಕಲೀಲ್ ತಡೆಯಲು ಯತ್ನಿಸಿದರೂ ಅವರ ಮೇಲೂ ಹಲ್ಲೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ಓಡಿಹೋಗಿ ತಪ್ಪಿಸಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದಷ್ಟೇ ಸಚಿವ ಶ್ರೀರಾಮುಲು ಆಪ್ತರಾಗಿದ್ದ ಬಂಡಿ ರಮೇಶ ಎಂಬಾತನನ್ನು ನಗರ ಹೊರವಲಯದ ಬೆಂಗಳೂರು ರಸ್ತೆಯ ಡಾಬಾವೊಂದರಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಯಲ್ಲಪ್ಪನು ಬಂಡಿ ರಮೇಶ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ. ಈಗ ಯಲ್ಲಪ್ಪನ ಹೆಣ ಉರುಳಿಸಿದ್ದು ರಮೇಶ್ ಕಡೆಯ ಗ್ಯಾಂಗ್ ಸೇಡು ತೀರಿಸಿಕೊಂಡಿದೆ ಎನ್ನಲಾಗುತ್ತಿದೆ.
ಬಳ್ಳಾರಿಯ ಕೆಲ ರೌಡಿಗಳ ಮಾತು ಕೇಳಿ ಕಳೆದ ಮೂರು ವರ್ಷಗಳ ಹಿಂದಷ್ಟೇ ನಮ್ಮ ಗ್ರಾಮ ನೆರಮೆಟ್ಲ ದಿಂದ ಬಳ್ಳಾರಿಗೆ ಬಂದು ನೆಲೆಸಿದ್ದನು. ನಮ್ಮದು ರೈತ ಕುಟುಂಬ, ಬೇಡ ಎಂದರೂ ಕೇಳಲಿಲ್ಲ. ಬಳ್ಳಾರಿಯಿಂದ ಆಗಾಗ ಗ್ರಾಮಕ್ಕೆ ಬರುತ್ತಿದ್ದ, ಇತ್ತೀಚಿಗಷ್ಟೇ ಗ್ರಾಮಕ್ಕೆ ಬಂದು ಹೋಗಿದ್ದ. ರೌಡಿಯಾಗಿ ಆತನೇನು ಇಲ್ಲಿ ಆಸ್ತಿ ಮಾಡಲಿಲ್ಲ. ಆದರೆ ಇಂದು ಕೊಲೆಯಾಗಿದ್ದಾನೆಂದು ಆತನ ಸಹೋದರ ಲಿಂಗಪ್ಪ ತಮ್ಮ ಅಳಲು ತೋಡಿಕೊಂಡಿದ್ದಾನೆ.
ಆತನ ಚಾಲಕ ಖಾಲಿದ್ ಖಾನ್, ಸಂಜೆ ಆರು ಗಂಟೆಗೆ ನಮ್ಮ ಬಾಸ್‍ನನ್ನು ಬಿಟ್ಟು ಮನೆಗೆ ಹೋಗಿದ್ದೆ. ಎಂದಿನಂತೆ ಅವರು ಬಂದು ಇಲ್ಲಿ ಕುಳಿತಿದ್ದರು. ಇಂದು ಯಾರು ಇಲ್ಲದ ವೇಳೆ ನೋಡಿ ಅಟ್ಯಾಕ್ ಮಾಡಿದ್ದಾರೆ. ನಾನು ಇದ್ದರೆ ಇದು ಆಗುತ್ತಿರಲಿಲ್ಲ. ನನಗೆ ಈ ವಿಷಯ ತಿಳಿದು ಆಘಾತಗೊಂಡು ಬಂದೆ. ಗೊತ್ತಿರುವವರೆ ಇದನ್ನು ಮಾಡಿದ್ದಾರೆ ಎನಿಸುತ್ತಿದೆ ಎಂದು ಹೇಳಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
Ballari; ಮೃ*ತ ಬಾಣಂತಿಯರ ಮನೆಗೆ ಸಚಿವ ದಿನೇಶ್ ಗುಂಡೂರಾವ್ ಭೇಟಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.