ಪಾಲಿಕೆ ಚುನಾವಣೆ : ಕಾಂಗ್ರೆಸ್ ಗೆ ಆರಂಭದಲ್ಲೇ ಬಂಡಾಯದ ಬಿಸಿ
Team Udayavani, Apr 15, 2021, 5:48 PM IST
ಬಳ್ಳಾರಿ : ಇಲ್ಲಿನ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಪಕ್ಷದಲ್ಲಿ ಬಂಡಾಯದ ಬಿಸಿ ಕೇಳಿಬರುತ್ತಿದೆ. “ಕೈ’ ಟಿಕೆಟ್ ತಪ್ಪಿದ ಎಂ.ಪ್ರಭಂಜನ್ ಕುಮಾರ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ಪಕ್ಷಕ್ಕೆ ಬಂಡಾಯದ ಬಿಸಿ ತಟ್ಟಿದಂತಾಗಿದೆ.
ಬಳ್ಳಾರಿ ಮಹಾನಗರ ಪಾಲಿಕೆಗೆ ಚುನಾವಣೆ ಘೋಷಣೆಯಾಗಿದ್ದು, ಏ. 8ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಬಿಜೆಪಿ, ಜೆಡಿಎಸ್ ಪಕ್ಷದಿಂದ ಈಗಾಗಲೇ ಹಲವು ವಾರ್ಡ್‌ಗಳಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಈವರೆಗೂ ಯಾರೊಬ್ಬರೂ ನಾಮಪತ್ರ ಸಲ್ಲಿಸಿಲ್ಲ. ಅಭ್ಯರ್ಥಿಗಳ ಅಂತಿಮ ಪಟ್ಟಿ ಏ. 13ರಂದು ಪ್ರಕಟವಾಗಿದೆ. ನಾಮಪತ್ರ ಸಲ್ಲಿಸಲು ಏ.15 ರಂದು ಕೊನೆಯದಿನವಾಗಿದ್ದು, ಕೇವಲ ಒಂದು ದಿನಮಾತ್ರ ಉಳಿದಿದೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ 3, 9ನೇ ವಾರ್ಡ್ ಸೇರಿ ಹಲವು ವಾರ್ಡ್‌ಗಳಲ್ಲಿ ಕೈ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಆಕಾಂಕ್ಷಿಗಳಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಚುನಾವಣೆಯಲ್ಲಿ ಪಕ್ಷಕ್ಕೆ ಬಂಡಾಯದ ಬಿಸಿ ಎದುರಾಗಲಿದೆ.
3ನೇ ವಾರ್ಡ್‌ನಲ್ಲಿ ಬಂಡಾಯ: ಪಾಲಿಕೆಯ 3ನೇ ವಾಡ್ ìನ ಕೈ ಪಕ್ಷದ ಟಿಕೆಟ್‌ಗಾಗಿ ಮುಂಡೂÉರು ಕುಟುಂಬದ ಎಂ.ಪ್ರಭಂಜನ್ ಕುಮಾರ್ ಪ್ರಬಲ ಆಕಾಂಕ್ಷಿಯಾಗಿದ್ದರು. ಕಳೆದ ಎರಡ್ಮೂರು ವರ್ಷಗಳಿಂದ ವಾರ್ಡ್‌ನಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳುವುದರ ಜತೆಗೆ ಸಾಮಾಜಿಕ ಸೇವಾ ಕಾರ್ಯಗಳನ್ನೂ ಸಹ ಹಮ್ಮಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ವಾರ್ಡ್‌ನ ಆಕಾಂಕ್ಷಿಯಾಗಿದ್ದ ಅವರು, ಸಹಜವಾಗಿ ಟಿಕೇಟ್ ಲಭಿಸುವ ನಿರೀಕ್ಷೆಯಲ್ಲಿದ್ದರು. ಇವರೊಂದಿಗೆ ಹಿಂದಿನ 3, 4ನೇ ವಾರ್ಡ್‌ಗಳ ಹಾಲಿ ಸದಸ್ಯರಾದ ಬಿ.ಬಸವರಾಜಗೌಡ, ಪರ್ವಿನ್‌ಬಾನು ಮತ್ತು ಯುವ ಮುಖಂಡ ಅಲಿವೇಲು ಸುರೇಶ್ ಅವರು ಸಹ ಟಿಕೆಟ್ ಗಾಗಿ ಪೈಪೋಟಿ ನಡೆಸಿದ್ದರು. ಈ ನಾಲ್ವರಲ್ಲೂ ಪ್ರಭಂಜನ್ ಅವರಿಗೆ ಟಿಕೆಟ್ ಬಹುತೇಕ ಖಚಿತವಾಗಲಿದೆ ಎಂಬೆಲ್ಲಾ ಮಾತುಗಳು ಕೇಳಿಬಂದವಾದರೂ, ಅಂತಿಮ ಹಂತದಲ್ಲಿ 3ನೇ ವಾರ್ಡ್ ಅಭ್ಯರ್ಥಿಯಾಗಿ ಬಿ.ಬಸವರಾಜಗೌಡ ಅವರನ್ನು ಅಧಿಕೃತಗೊಳಿಸಲಾಗಿದೆ.
ಅಲ್ಲದೇ, ಪ್ರಭಂಜನ್ ಅವರಿಗೆ “ಕೈ’ ಟಿಕೆಟ್ ತಪ್ಪಿಸಲು ಪಕ್ಷದ ಜಿಲ್ಲಾ ಮುಖಂಡರು ಸಹ ತಂತ್ರಗಾರಿಕೆ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದು ಪ್ರಭಂಜನ್ ಅಭಿಮಾನಿಗಳು, ಬೆಂಬಲಿಗರಲ್ಲಿ ಅಸಮಾಧಾನ ಮೂಡಿಸಿದ್ದು, ಬಂಡಾಯ ಅಭ್ಯರ್ಥಿಯಾಗಿ, ಸ್ವತಂತ್ರವಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ. ಏ.15 ರಂದು ನಾಮಪತ್ರವನ್ನು ಸಹ ಸಲ್ಲಿಸಲಿದ್ದಾರೆ ಎಂದು ಬೆಂಬಲಿಗರು ದೃಢಪಡಿಸಿದ್ದಾರೆ. ಇನ್ನು ಇದೇ ರೀತಿ 9ನೇ ವಾರ್ಡ್‌ನಲ್ಲೂ ಸಹ ಕೈ ಟಿಕೆಟ್ ಆಕಾಂಕ್ಷಿಯಾಗಿದ್ದ ಹಿರಿಯ ಮುಖಂಡರಿಗೂ ಕೈ ತಪ್ಪಿದೆ.
ಅಸಮಾಧಾನಗೊಂಡಿರುವ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ ಎನ್ನಲಾಗಿದೆ. ಸದ್ಯ 2 ವಾರ್ಡ್‌ಗಳಲ್ಲಿನ ಬಂಡಾಯ ಇನ್ನುಳಿದ ವಾರ್ಡ್‌ಗಳಿಗೂ ವ್ಯಾಪಿಸಿದಲ್ಲಿ ಚುನಾವಣಯಲ್ಲಿ ಪಕ್ಷದ ಅ ಧಿಕೃತ ಅಭ್ಯರ್ಥಿಗಳಿಗೆ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಅಭ್ಯರ್ಥಿಗಳ ಹೆಸರು ಪ್ರಕಟ: ಬಳ್ಳಾರಿ ಮಹಾನಗರ ಪಾಲಿಕೆಯ 39 ವಾರ್ಡ್‌ಗಳಲ್ಲಿ 32 ವಾರ್ಡ್‌ಗಳ ಅಭ್ಯರ್ಥಿಗಳನ್ನು ಕಾಂಗ್ರೆಸ್ ಪಕ್ಷ ಪ್ರಕಟಿಸಿದೆ. 26, 27, 31, 32, 34, 35, 38ನೇ ವಾರ್ಡ್‌ಗಳಿಗೆ ಅಭ್ಯರ್ಥಿಗಳನ್ನು ಮೀಸಲಿಡಲಾಗಿದೆ.
ಇನ್ನುಳಿದಂತೆ 1ನೇ ವಾರ್ಡ್‌ಗೆ ಕೆ. ವೀರೇಂದ್ರಕುಮಾರ್, 2ನೇ ಜಾವೇರಿಯಾ ಸಾಬ್ (ಮಹಿಳೆ), 3ನೇ ವಾರ್ಡ್ ಬಿ. ಬಸವರಾಜಗೌಡ, 4ನೇ ಡಿ.ತ್ರಿವೇಣಿ ಸೂರಿ, 5ನೇ ವಾರ್ಡ್ ಡಿ.ನಾರಾಯಣಪ್ಪ, 6ನೇ ಎಂ.ಕೆ. ಪದ್ಮಾರೋಜಾ, 7ನೇ ಉಮಾದೇವಿ ಶಿವರಾಜ್, 8ನೇ ಬಿ.ರಾಮಾಂಜಿನೇಯಲು, 9ನೇ ಜಬ್ಟಾರ್‌ಸಾಬ್, 10ನೇ ವಿ.ಎಸ್.ಮರಿದೇವಯ್ಯ, 11 ಟಿ.ಲೋಕೇಶ್, 12ನೇ ಕೆ.ಜ್ಯೋತಿ, 13ನೇ ಕೆ.ಮಾರುತಿ ಪ್ರಸಾದ್, 14ನೇ ಬಿ.ರತ್ನಮ್ಮ, 15ನೇ ಎಂ.ಫರ್ಹಾನ್ ಅಹ್ಮದ್, 16ನೇ ಕೌಶಲ್ಯ, 17ನೇ ಬಿ.ಕೆ.ಅರುಣಾ, 18ನೇ ಎಂ.ನಂದೀಶ್, 19ನೇ ಬಿ.ಮುರಳಿ, 20ನೇ ಪಿ.ವಿವೇಕ್, 21ನೇ ಲತಾ ಶೇಖರ್, 22ನೇ ಬಜ್ಜಪ್ಪ, 23ನೇ ಪಿ.ಗಾದೆಪ್ಪ, 24ನೇ ನಾರಾ ವಿಜಯಕುಮಾರ್‌ರೆಡ್ಡಿ, 25ನೇ ಜಿ.ಜೆ. ರವಿಕುಮಾರ್, 28ನೇ ವಾರ್ಡ್ ಬಿ.ಮುಬೀನಾ, 29ನೇ ಶಿಲ್ಪಾ, 30ನೇ ಎಸ್.ನಾಗರಾಜ್, 23ನೇ ಬಿ.ಜಾನಕಿ, 36ನೇ ಟಿ.ಸಂಜೀವಮ್ಮ, 37ನೇ ಮಾಲನ್ ಬೀ, 39ನೇ ಪಿ.ಶಶಿಕಲಾ ಅವರು ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳಾಗಿದ್ದು, ಕೊನೆಯ ದಿನವಾದ ಏ. 15ರಂದು ನಾಮಪತ್ರ ಸಲ್ಲಿಸಲಿದ್ದಾರೆ.
ಇನ್ನು ಬಿಜೆಪಿ ಪಕ್ಷದಲ್ಲಿ ಈಗಾಗಲೇ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಅಂತಿಮವಾಗಿದ್ದು, ಬಹುತೇಕ ವಾರ್ಡ್‌ಗಳ ಅಭ್ಯರ್ಥಿಗಳ ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್ ಪಕ್ಷದಿಂದಲೂ ಕೆಲವೊಂದು ವಾರ್ಡ್‌ಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದ 39 ವಾರ್ಡ್‌ಗಳ ಅಭ್ಯರ್ಥಿಗಳು ಕೊನೆಯ ದಿನವಾದ ಏ.15 ರಂದು ಒಂದೇ ದಿನದಲ್ಲಿ ನಾಮಪತ್ರ ಸಲ್ಲಿಸಲಿದ್ದು ಚುನಾವಣಾ ಕಣ ರಂಗೇರದೆ.
-ವೆಂಕೋಬಿ ಸಂಗನಕಲ್ಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad High Court: ಹಂಪಿ ನರಹರಿ ತೀರ್ಥರ ವೃಂದಾವನ ಪೂಜೆ ಯಥಾಸ್ಥಿತಿಗೆ
Bellary: ಐದು ವರ್ಷದ ಮಗುವಿನ ಅತ್ಯಾಚಾರ ನಡೆಸಿದ್ದ ಆರೋಪಿಗೆ ಗುಂಡೇಟು
ಮೀಟರ್ ಬಡ್ಡಿ ದಂಧೆಗೆ ಮನನೊಂದು ವಿಎಸ್‌ಕೆ ವಿವಿ ಅಟೆಂಡರ್ ಆತ್ಮಹತ್ಯೆ… ಪೊಲೀಸರಿಂದ ತನಿಖೆ
ಆಕಳುಗಳ ಕೆಚ್ಚಲು ಕೊಯ್ದ ಪ್ರಕರಣ; ಶಾಸಕ,ಉಸ್ತುವಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ
Makar Sankranti: ಹಂಪಿಗೆ ಹರಿದು ಬಂದ ಭಕ್ತ ಜನ ಸಾಗರ!