ನವಲಿ ಜಲಾಶಯ ನಿರ್ಮಾಣಕ್ಕೆ ಮರುಜೀವ!
Team Udayavani, Aug 15, 2021, 6:42 PM IST
ಮಲ್ಲಿಕಾರ್ಜುನ ಚಿಲ್ಕರಾಗಿ
ಮಸ್ಕಿ: ರಾಯಚೂರು, ಕೊಪ್ಪಳ, ಬಳ್ಳಾರಿ ಮೂರು ಜಿಲ್ಲೆಗಳ ಜೀವನಾಡಿ ತುಂಗಭದ್ರಾ ಜಲಾಶಯದ ಹೂಳಿಗೆ ಪರ್ಯಾಯವಾಗಿ ನವಲಿ ಬಳಿ ನಿರ್ಮಿಸಲು ಉದ್ದೇಶಿಸಿದ ಸಮಾನಾಂತರ ಜಲಾಶಯಕ್ಕೆ ಮರುಜೀವ ಬಂದಿದೆ!. ಬೆಂಗಳೂರಿನ ಕರ್ನಾಟಕ ನೀರಾವರಿ ನಿಗಮದ ಕಚೇರಿಯಲ್ಲಿ ಶುಕ್ರವಾರ ನೀರಾವರಿ ಇಲಾಖೆ ಅ ಧಿಕಾರಿಗಳು ಹಾಗೂ ತಜ್ಞರ ಸಭೆ ನಡೆದಿದ್ದು, ಕನಕಗಿರಿ, ಗಂಗಾವತಿ ಕ್ಷೇತ್ರದ ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದರು.
ಸಮಾನಾಂತರ ಜಲಾಶಯ ಅಂತಾರಾಜ್ಯ ಯೋಜನೆಯಾಗಿದ್ದರಿಂದ ನೆರೆಯ ತೆಲಂಗಾಣ, ಆಂಧ್ರದ ಒಪ್ಪಿಗೆ ಪಡೆಯಬೇಕಿದ್ದು ಇದಕ್ಕೂ ಮೊದಲು ತುಂಗಭದ್ರಾ ಮಂಡಳಿ ಅನುಮೋದನೆ ಪಡೆಯಬೇಕಿದೆ. ಹೀಗಾಗಿ ಯೋಜನೆ ಜಾರಿ ವೇಳೆ ಎದುರಾಗುವ ಅಡ್ಡಿ-ಆತಂಕ ಹಾಗೂ ಸಾಧಕ-ಬಾಧಕಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು.
ಕೆಎನ್‌ಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ತುಂಗಭದ್ರಾ ವಲಯದ ಮುಖ್ಯ ಅ ಧೀಕ್ಷಕ ಕೃಷ್ಣಾ ಚವ್ಹಾಣ ಹಾಗೂ ಎ ಆ್ಯಂಡ್ ಟೆಕ್ನಾಲಜಿ ಏಜೆನ್ಸಿಯ ತಜ್ಞರು ಸಮಾನಾಂತರ ಜಲಾಶಯ ಅನುಷ್ಠಾನಕ್ಕೆ ಬೇಕಾದ ಪೂರ್ವ ತಯಾರಿಗಳ ಕುರಿತು ಸಮಗ್ರ ಚರ್ಚೆ ನಡೆಸಿದರು. ಏನಿದು ಯೋಜನೆ?: 133 ಟಿಎಂಸಿ ಸಾಮರ್ಥ್ಯದ ತುಂಗಭದ್ರಾ ಜಲಾಶಯದಲ್ಲಿ ಹೂಳಿನ ಪ್ರಮಾಣ ಹೆಚ್ಚಾಗುತ್ತಿದೆ. ಈಗಾಗಲೇ ಸುಮಾರು 33 ಟಿಎಂಸಿಗೂ ಅ ಧಿಕ ಪ್ರಮಾಣದಲ್ಲಿ ಹೂಳು ತುಂಬಿದೆ ಎಂದು ನೀರಾವರಿ ಇಲಾಖೆಯ ಹಲವು ಸರ್ವೇಗಳಿಂದ ಬಯಲಾಗಿದೆ.
ಈ ಹೂಳು ತೆರವಿಗೆ ಬೇಡಿಕೆ ಇದ್ದು, ಅಪಾರ ಪ್ರಮಾಣದ ಹೂಳು ತೆರವುಗೊಳಿಸುವುದು ಅಸಾಧ್ಯ. ಇದು ಕಾರ್ಯಸಾಧುವಲ್ಲದ ಕಾರಣ ಹೂಳು ತೆರವು ಕೈ ಬಿಟ್ಟು ಸಮಾನಾಂತರ ಜಲಾಶಯ ನಿರ್ಮಾಣದ ಪ್ರಸ್ತಾವನೆ ಇದ್ದು, ಇದಕ್ಕಾಗಿ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸರ್ಕಾರದ ಮುಂದೆ ಪ್ರಸ್ತಾವನೆ ಇದೆ.
ಈ ಸಮಾನಾಂತರ ಜಲಾಶಯದ ಮೂಲಕ ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ನೆರೆಯ ಆಂಧ್ರ ತೆಲಂಗಾಣ ರಾಜ್ಯದ ನೀರಾವರಿ ವಂಚಿತ ಪ್ರದೇಶಗಳಿಗೆ ನೀರು ಒದಗಿಸುವುದು ಯೋಜನೆ ಉದ್ದೇಶ. ಇದಕ್ಕಾಗಿ ರೂಟ್ಸ್, ಎ ಆ್ಯಂಡ್ ಕಂಪನಿ ಸೇರಿ ಹಲವು ಖಾಸಗಿ ಏಜೆನ್ಸಿಗಳು ಸರ್ವೇ ನಡೆಸಿ ಪ್ರಾಥಮಿಕ ವರದಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಪ್ರಾಥಮಿಕ ವರದಿ ಪ್ರಕಾರ ಈ ಯೋಜನೆಗೆ 12 ಸಾವಿರ ಕೋಟಿ ರೂ. ಅಗತ್ಯವಿದೆ ಎನ್ನುವ ಅಂಶ ಪ್ರಸ್ತಾಪಿಸಲಾಗಿದ್ದು, ಲಕ್ಷಾಂತರ ಜಮೀನು ಭೂ ಸ್ವಾಧೀನ ಪ್ರಕ್ರಿಯೆ ನಡೆಯಬೇಕೆಂದು ವರದಿ ಸಲ್ಲಿಸಿವೆ.
ಸರ್ಕಾರ ಇದಕ್ಕೆ ಅಸ್ತು ಎಂದಿದ್ದು ಯೋಜನೆಯ ಸಂಪೂರ್ಣ ಡಿಪಿಆರ್ ತಯಾರಿಕೆಗೆ ಸೂಚನೆ ನೀಡಿದೆ. ಪ್ರಕಾರ ಎ ಆ್ಯಂಡ್ ಟೆಕ್ನಾಲಜಿ ಕಂಪನಿಗೆ ಸರ್ವೇ ಕಾರ್ಯದ ಉಸ್ತುವಾರಿ ವಹಿಸಲಾಗಿದೆ. ಈಗಾಗಲೇ ಎರಡೂ¾ರು ಸುತ್ತಿನ ಸರ್ವೇ ಕಾರ್ಯವೂ ಪೂರ್ಣವಾಗಿದ್ದು, ಯೋಜನೆ ನೀಲನಕ್ಷೆ ನೀರಾವರಿ ನಿಗಮಕ್ಕೆ ಸಲ್ಲಿಸಲಾಗಿದೆ.
ಎದುರಾಗುವ ಸವಾಲು: ಯೋಜನೆ ಕುರಿತಾಗಿಯೇ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕಾಗಿ ಅಗತ್ಯವಿರುವ ಭೂ ಸ್ವಾಧಿಧೀನ ಪ್ರಕ್ರಿಯೆ, ಮುಳುಗಡೆಯಾಗುವ ಪ್ರದೇಶ, ನೀರಿನ ಹಂಚಿಕೆ, ಪ್ರತ್ಯೇಕ ಕಾಲುವೆಗಳ ನಿರ್ಮಾಣದ ನಕಾಶೆ ಸೇರಿ ಇತರೆ ಕಾರ್ಯಗಳಿಗೆ ಎದುರಾಗುವ ಅಡ್ಡಿ ಆತಂಕ, ತಜ್ಞರು ಎತ್ತುವ ಪ್ರಶ್ನೆಗಳಿಗೆ ಬೇಕಾದ ಸಮಗ್ರ ಉತ್ತರ ಒದಗಿಸುವುದು, ಟಿಬಿ ಬೋರ್ಡ್ ಹಾಗೂ ಅಂತಾರಾಜ್ಯಗಳನ್ನು ಈ ಯೋಜನೆಗೆ ಒಪ್ಪಿಗೆ ಪಡೆಯಲು ಬೇಕಾದ ಪೂರ್ವ ಸಿದ್ಧತೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆದವು.
ಕೆಲವೇ ದಿನಗಳಲ್ಲಿ ಈ ಯೋಜನೆ ಒಪ್ಪಿಗೆ ಪಡೆಯಲು ಅಂತಾರಾಜ್ಯ ಸಭೆ ನಡೆಯಲಿದ್ದು, ಇದಕ್ಕೆ ಸಂಬಂಧಿ ಸಿದ ಎಲ್ಲ ವರದಿ ತಯಾರಿಸಿಕೊಳ್ಳಲು ಅಧಿ ಕಾರಿಗಳಿಗೆ ಈ ವೇಳೆ ಸೂಚನೆ ನೀಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Waqf Notice: ಸಿಎಂ ಪಿತೂರಿ, ಸಚಿವ ಜಮೀರ್ ದ್ರೋಹದಿಂದ ಜಮೀನು ಕಬಳಿಸುವ ಕೆಲಸ: ವಿಜಯೇಂದ್ರ
By Election: ಮಾತಿನ ಭರದಲ್ಲಿ ವಿಜಯೇಂದ್ರಗೂ ಪಾಲು ಎಂದ ಶ್ರೀರಾಮುಲು!
Modi,BSY ಬಗ್ಗೆ ಮಾತನಾಡುವ ಮೊದಲು ಎಚ್ಚರಿಕೆ ಇರಲಿ: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಿಡಿ
Kotturu: ಹಸಿರು ಪಟಾಕಿ ಹೆಸರಿನಲ್ಲಿ ನಿಯಮ ಉಲ್ಲಂಘಿಸಿ ಮಾಮೂಲಿ ಪಟಾಕಿ ಮಾರಾಟ…
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.