ಅನುದಾನ – ಅಧಿಕಾರವಿಲ್ಲದ ತಾಪಂ ಬೇಡ!
ಜಿಲ್ಲೆಯ ತಾಪಂ ಅಧ್ಯಕ್ಷರ ಅಸಮಾಧಾನದ ಮಾತು
Team Udayavani, Jan 22, 2021, 4:38 PM IST
ಬಳ್ಳಾರಿ: ಅನುದಾನ-ಅಧಿಕಾರ ಎರಡೂ ಇಲ್ಲದಿದ್ದಲ್ಲಿ ತಾಲೂಕು ಪಂಚಾಯಿತಿ ತೆಗೆದರೆ ಒಳ್ಳೆಯದು. ಈ ಎರಡನ್ನೂ ಹೆಚ್ಚಿಸಿ ಮುಂದುವರೆಸಿದರೆ ಇನ್ನೂ ಒಳ್ಳೆಯದು! ತಾಪಂ ಪದ್ಧತಿಯನ್ನು ರದ್ದುಗೊಳಿಸುವ ಬಗ್ಗೆ ರಾಜ್ಯಾದ್ಯಂತ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ತಾಪಂ ಅಧ್ಯಕ್ಷರನ್ನು ಮಾತಿಗೆಳೆದಾಗ ಅವರ ಅಂತರಾಳದಲ್ಲಿ ಹುದುಗಿದ್ದ ಅಸಮಾಧಾನದ ಮಾತುಗಳಿವು.
ರಾಜ್ಯದಲ್ಲಿ ಕಳೆದ ಮೂರು ದಶಕಗಳಿಂದ ಚಾಲನೆಯಲ್ಲಿರುವ ತಾಲೂಕು ಪಂಚಾಯಿತಿ ಹಂತವನ್ನು ಇತ್ತೀಚಿನ ದಿನಗಳಲ್ಲಿ ರದ್ದುಪಡಿಸಬೇಕೆಂಬ ಚರ್ಚೆ ಜೋರಾಗಿ ಕೇಳಿಬರುತ್ತಿದೆ. ಅ ಧಿಕಾರ ವಿಕೇಂದ್ರೀಕರಣದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಎಂಬ ಮೂರುಹಂತಗಳ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಆದರೆ, ಕೇಂದ್ರ, ರಾಜ್ಯ ಸರ್ಕಾರದಿಂದ ಅನುದಾನಗಳು ನೇರವಾಗಿ ಗ್ರಾಮ ಪಂಚಾಯಿತಿಗೆ ತಲುಪುವ ಹಿನ್ನೆಲೆಯಲ್ಲಿ ಮಧ್ಯದಲ್ಲಿನ ತಾಲೂಕು ಪಂಚಾಯಿತಿ ಗೌಣವಾಗಿದ್ದು, ಈ ಹಿನ್ನೆಲೆಯಲ್ಲಿ ಈ ವ್ಯವಸ್ಥೆಯನ್ನು ರದ್ದುಪಡಿಸುವ ಕುರಿತ ಚರ್ಚೆಗಳು ಮುನ್ನೆಲೆಗೆ ಬಂದಿವೆ.
ಇದನ್ನೂ ಓದಿ : ಉ. ಕನ್ನಡ ಜಿ. ಪಂ. ಸಭೆಯಲ್ಲಿ ಕೋಲಾಹಲ: ಕಾಮಗಾರಿ ಮಾಡದೆ 36 ಲಕ್ಷ ರೂ.ಬಿಲ್!
ಅನುದಾನ-ಅಧಿಕಾರ ಎರಡೂ ಇಲ್ಲ: ತಾಲೂಕು ಪಂಚಾಯಿತಿ ಸದಸ್ಯರಿಗೆ ಹೆಚ್ಚಿನ ಅನುದಾನ, ಅ ಧಿಕಾರ ಎರಡೂ ಇಲ್ಲ. ಗ್ರಾಪಂಗಳಲ್ಲಿನ ಆಶ್ರಯ ಸಮಿತಿಗಳಲ್ಲಿ ಸದಸ್ಯತ್ವ ಸಹ ಇಲ್ಲ. ವ್ಯವಸ್ಥೆ ಹೀಗಿದ್ದಾಗ ತಾಪಂ ಸದಸ್ಯರು ಜನಪ್ರತಿನಿ ಧಿಗಳು ಎಂಬುದನ್ನು ಜನರಲ್ಲಿ ಗುರುತಿಸಿಕೊಳ್ಳುವುದು ಹೇಗೆ? ವರ್ಷಕ್ಕೆ ಬರುವ ಅಲ್ಪಸ್ವಲ್ಪ ಅನುದಾನದಲ್ಲಿ ಮಾಡುವ ಅಭಿವೃದ್ಧಿ ಕೆಲಸಗಳು ಸಹ ಯಾರಿಗೂ ಕಾಣಿಸಿಕೊಳ್ಳಲ್ಲ. ಇದರಿಂದ ನಾವು ಜನಪರ ಕೆಲಸ ಮಾಡಿದ್ದೇವೆ ಎಂದು ಜನರ ಬಳಿಗೆ ಹೋಗೋದಾದರೂ ಹೇಗೆ? ಹಾಗಾಗಿ ಅನುದಾನವನ್ನು ಹೆಚ್ಚಿಸಿ, ಅ ಧಿಕಾರವನ್ನೂ ನೀಡಿದಲ್ಲಿ ತಾಪಂ ವ್ಯವಸ್ಥೆಯನ್ನು ಮುಂದುವರೆಸುವುದು ಒಳ್ಳೆಯದು. ಇಲ್ಲದಿದ್ದಲ್ಲಿ ರದ್ದುಗೊಳಿಸಿದರೂ ಒಳ್ಳೆಯದೇ ಎಂಬುದು ಜಿಲ್ಲೆಯ ಕೆಲ ತಾಪಂಗಳ ಅಧ್ಯಕ್ಷರ ಮಾತಾಗಿದೆ.
ನಾಯಕತ್ವ ಸಿಗಲಿದೆ: ತಾಪಂ ಸದಸ್ಯರಿಗೆ ಸಮರ್ಪಕ ಅನುದಾನ-ಅ ಧಿಕಾರವಿಲ್ಲ ಎಂಬುದು ನಿಜ. ಆದರೆ, ತಾಪಂ ಸದಸ್ಯರಾಗುವುದರಿಂದ ನಮ್ಮ ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ರಾಜಕೀಯ ಪಕ್ಷಗಳ ನಾಯಕತ್ವ ಸಿಗಲಿದೆ. ಇದು ಶಾಸಕ, ಸಂಸದರ ಚುನಾವಣೆಗೆ ನೆರವಾಗಲಿದೆ. ಗ್ರಾಪಂಗಳಿಗೆ ನೇರವಾಗಿ ಅನುದಾನ ಹೋಗುವುದಾದರೆ ಜಿಪಂ ಸದಸ್ಯರು ಸಹ ಏಕೆ ಬೇಕು? ಎಂದು ಪ್ರಶ್ನಿಸಿದ ಕೂಡ್ಲಿಗಿ ತಾಪಂ ಅಧ್ಯಕ್ಷೆ ನಾಗರತ್ನಮ್ಮ, ಜಿಪಂ, ತಾಪಂ ಇಲ್ಲದಿದ್ದಲ್ಲಿ ಗ್ರಾಪಂಗಳ ಪಿಡಿಒಗಳೇ ಸುಪ್ರೀಂ ಆಗಲಿದ್ದಾರೆ. ಹಾಗಾಗಿ ಗ್ರಾಮೀಣ ಭಾಗದಲ್ಲಿ ಅಧಿಕಾರ ವಿಕೇಂದ್ರೀಕರಣಕ್ಕಾಗಿ ಜಿಪಂ, ತಾಪಂ, ಗ್ರಾಪಂ ಮೂರು ಹಂತದ ವ್ಯವಸ್ಥೆಗಳು ಇರಬೇಕು ಎನ್ನುತ್ತಾರೆ ಅವರು. ಜಿಲ್ಲೆಯ ಎಲ್ಲ ತಾಪಂ ಅಧ್ಯಕ್ಷರು ತಮಗೆ ಲಭಿಸಿದ ಅಲ್ಪ ಅನುದಾನದಲ್ಲೇ ಕುಡಿವ ನೀರಿನ ಪೈಪ್‌ಲೈನ್, ಶಾಲೆ, ಅಂಗನವಾಡಿ ಕೊಠಡಿ ರಪೇರಿ, ಬೀದಿ ದೀಪ ಅಳವಡಿಕೆ, ಸಿಸಿ ರಸ್ತೆ ನಿರ್ಮಾಣ ಸೇರಿ ಇನ್ನಿತರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದವರು ತಿಳಿಸಿದ್ದಾರೆ.
ಅಷ್ಟು ಸುಲಭವಿಲ್ಲ: ತಾಪಂ ವ್ಯವಸ್ಥೆಯನ್ನು ರದ್ದುಗೊಳಿಸುವುದು ಅಷ್ಟು ಸುಲಭವಿಲ್ಲ. ಕಾರಣ, ಸಂವಿಧಾನದ 73ನೇ ತಿದ್ದುಪಡಿ ಮೂಲಕ ಜಿಪಂ, ತಾಪಂ, ಗ್ರಾಪಂ ಮೂರು ಹಂತದ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಆದರೆ ಇದೀಗ ತಾಪಂ ರದ್ದುಗೊಳಿಸಿ ಎರಡು ಹಂತದ ವ್ಯವಸ್ಥೆ ಜಾರಿಗೆ ತರಬೇಕಾದರೆ, ಕೇಂದ್ರದಲ್ಲಿ ಪುನಃ 73ನೇ ವಿ ಧಿಗೆ ತಿದ್ದುಪಡಿ ಮಾಡಬೇಕು. ಸದ್ಯ ಹಾಲಿ ಸದಸ್ಯರ ಅವಧಿ ಕೆಲವೇ ತಿಂಗಳುಗಳಲ್ಲಿ ಪೂರ್ಣಗೊಂಡು, ನೂತನ ಸದಸ್ಯರ ಆಯ್ಕೆಗೆ ಚುನಾವಣೆ ಸಮೀಪಿಸುತ್ತಿದೆ. ಇಂತಹ ಸಂದರ್ಭದಲ್ಲಿ ತಾಪಂ ರದ್ದು ಅಷ್ಟು ಸುಲಭವಿಲ್ಲ ಎಂದು ತಾಪಂ ಅಧಿ ಕಾರಿಯೊಬ್ಬರು ಸ್ಪಷ್ಟಪಡಿಸಿದರು.
ತಾಪಂ ಸದಸ್ಯರಿಗೆ ಅನುದಾನ ಹೆಚ್ಚಿಸಿ ಅ ಧಿಕಾರ ನೀಡಿ ಮುಂದುವರೆಸಿದರೆ ಒಳ್ಳೆಯದು. ಇಲ್ಲದಿದ್ದಲ್ಲಿ ರದ್ದುಗೊಳಿಸುವುದು ಸಹ ಒಳ್ಳೆಯದು. ಆಶ್ರಯ ಸಮಿತಿಯಲ್ಲಿ ಸದಸ್ಯತ್ವ ಇಲ್ಲ. ವರ್ಷಕ್ಕೆ ನಿರೀಕ್ಷಿಸಿದಷ್ಟು ಅನುದಾನ ಬರಲ್ಲ. ಅ ಧಿಕಾರವೂ ಇಲ್ಲ. ಇನ್ನು ಏತಕ್ಕೆ ತಾಪಂ ಇರಬೇಕು. ಕೇವಲ ಮರ್ಯಾದೆ, ಪ್ರತಿಷ್ಠೆಗಾಗಿ ನಾವು ತಾಪಂ ಸದಸ್ಯರಾಗಿರಬೇಕು. ವರ್ಷಕ್ಕೆ ಬರುವ ಕೇವಲ 4 ಲಕ್ಷ ರೂ. ಅನುದಾನದಲ್ಲಿ ಸಿಸಿ ರಸ್ತೆ, ಪೈಪ್‌ಲೈನ್, ಶಾಲಾ ಕೊಠಡಿ ರಿಪೇರಿ ಸೇರಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದರೂ, ತೃಪ್ತಿ ನೀಡುತ್ತಿಲ್ಲ. ತಾಪಂಗೆ ಪ್ರತ್ಯೇಕ ಅನುದಾನ ನೀಡಬೇಕು.
ಎಸ್.ಆರ್.ಲೀಲಾವತಿ ಗಾದಿಲಿಂಗನಗೌಡ, ಅಧ್ಯಕ್ಷರು, ತಾಪಂ, ಬಳ್ಳಾರಿ.
ಜಿಪಂ, ತಾಪಂ, ಗ್ರಾಪಂಗಳಿಗೆ ಅ ಧಿಕಾರ ಹಂಚಿಕೆಯಿಂದ ತೊಂದರೆ ಏನು ಇಲ್ಲ. ಆದರೆ, ಅನುದಾನ ಇನ್ನಷ್ಟು ಹೆಚ್ಚಿಸಿದರೆ ಅನುಕೂಲವಾಗಲಿದೆ. ಕೊಟ್ಟೂರು ಕೂಡ್ಲಿಗಿ ತಾಲೂಕಿನಲ್ಲಿದ್ದಾಗ ವರ್ಷಕ್ಕೆ ಕೇವಲ 3.5 ಲಕ್ಷ ರೂ. ಅನುದಾನ ಬರುತ್ತಿತ್ತು. ಆಗ ಅಷ್ಟು ಸ್ವಲ್ಪ ಅನುದಾನದಲ್ಲಿ ಕ್ಷೇತ್ರದ ಮೂರು ಗ್ರಾಪಂಗಳಲ್ಲಿ ತಲಾ ಒಂದೊಂದು ಲಕ್ಷ ರೂ. ಹಂಚಿಕೆ ಮಾಡಿ ಅಭಿವೃದ್ಧಿ ಕಾರ್ಯ ಮಾಡಿದಲ್ಲಿ ಯಾರಿಗೆ ಗೊತ್ತಾಗಲಿದೆ. ರದ್ದುಪಡಿಸುವುದಕ್ಕಿಂತ ಅನುದಾನ ಹೆಚ್ಚಿಸಿ ಮುಂದುವರೆಸುವುದು ಒಳ್ಳೆಯದು.
ಎಸ್.ಗುರುಮೂರ್ತಿ, ಅಧ್ಯಕ್ಷರು, ತಾಪಂ, ಕೊಟ್ಟೂರು.
-ವೆಂಕೋಬಿ ಸಂಗನಕಲ್ಲು
ಇದನ್ನೂ ಓದಿ : ಪೊಕೊ ಸಿ3 : ಒಂದು ಮಿಲಿಯನ್ ಯೂನಿಟ್‌ಗಳ ಮಾರಾಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.