ಅನ್ನದಾತರಿಗೆ ಪಟ್ಟಾ ನೀಡಿ
ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಬೇಡ | ಶೋಷಣೆ ಮಾಡದೆ ಶೀಘ್ರ ಪಟ್ಟಾ ನೀಡಿ
Team Udayavani, Sep 9, 2021, 6:26 PM IST
ಸಂಡೂರು : ಬಗರ್ ಹುಕುಂ ಜಮೀನಿನಲ್ಲಿ ರೈತರು ದಶಕಗಳಿಂದ ಕೃಷಿ ಚಟುವಟಿಕೆಯಿಂದಲೇ ಬದುಕನ್ನು ಕಟ್ಟಿಕೊಂಡಿದ್ದು ಅವರನ್ನು ಒಕ್ಕಲೆಬ್ಬಿಸುವಂಥ ತಂತ್ರ ನಡೆಯುತ್ತಿದೆ. 2018ರ ಸರ್ಕಾರದ ಅವಧಿಯಲ್ಲಿ ಪಟ್ಟ, ಪಹಣಿ ನೀಡಲು ಆದೇಶವಾಗಿದ್ದರೂ ಸಹ ಅಧಿಕಾರಿಗಳು ನೀಡದೇ ರೈತರ ಶೋಷಣೆ ಮಾಡುತ್ತಿದ್ದು ತಕ್ಷಣ ಅವರಿಗೆ ಪಟ್ಟಾ ನೀಡಬೇಕೆಂದು ಸಂಡೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಎನ್. ಸೋಮಪ್ಪ ಒತ್ತಾಯಿಸಿದರು.
ಅವರು ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ತಾಲೂಕಿನ ಎಲ್ಲ ಗ್ರಾಮಗಳ ರೈತರು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜೆಡಿಎಸ್ ಘಟಕ ಹಮ್ಮಿಕೊಂಡಿದ್ದ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿ, ಸರ್ಕಾರದ ಅದೇಶವಾಗಿದ್ದರೂ ಇದರ ಬಗ್ಗೆ ಅಡಳಿತಾರೂಢ ಬಿಜೆಪಿ ಪಕ್ಷವಾಗಲಿ,ಕ್ಷೇತ್ರದಿಂದಆಯ್ಕೆಯಾದಪ್ರತಿನಿಧಿಗಳಾಗಲಿರೈತರ ಬಗ್ಗೆ ಗಮನಹರಿಸದೇ ಇರುವುದು ಎಷ್ಟು ಸರಿ.
ಇದನ್ನೂ ಓದಿ : ಕೋವಿಡ್: ರಾಜ್ಯದಲ್ಲಿಂದು 1076 ಪಾಸಿಟಿವ್ ಪ್ರಕರಣ|1136 ಸೋಂಕಿತರು ಗುಣಮುಖ
ವ್ಯವಸ್ಥಿತವಾಗಿ ರೈತರನ್ನುಒಕ್ಕಲೆಬ್ಬಿಸುವಂಥಕಾರ್ಯನಡೆಯುತ್ತಿದೆ.ಆದ್ದರಿಂದ ತಕ್ಷಣ ಅಧಿಕಾರಿಗಳು ಮೌನ ವಹಿಸದೇ ರೈತರಿಗೆ ಪಟ್ಟಾ ನೀಡಬೇಕು. ತಾಲೂಕಿನಾದ್ಯಂತ 9 ಸಾವಿರ ರೈತರು ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಕೆಲಸ ಮಾತ್ರ ಅಗಿಲ್ಲ. ಅಲ್ಲದೇ ತಾಲೂಕಿನ ಬಹಳಷ್ಟು ಗ್ರಾಮಗಳು ಸರ್ವೇ ಸೆಟಲ್ ಮೆಂಟ್ ಆಗಿಲ್ಲ.
ಇದನ್ನು ದುರುಪಯೋಗಪಡಿಸಿಕೊಂಡು ರೈತರು ಕೃಷಿ ಮಾಡಿಕೊಂಡು ಬದುಕನ್ನು ಕಟ್ಟಿಕೊಂಡವರನ್ನು ಹೊರದೂಡುವುದು ಎಷ್ಟು ಸರಿ. ಆದ್ದರಿಂದ ತಕ್ಷಣ ಪಟ್ಟಾ ನೀಡಬೇಕು, ಮುಂದಿನ 15 ದಿನಗಳೊಳಗೆ ಈ ಕೆಲಸವಾಗದೇ ಇದ್ದಲ್ಲಿ ಇಡೀ ತಾಲೂಕಿನಾದ್ಯಂತ ರೈತರು ಜೆಡಿಎಸ್ ನೇತೃತ್ವದಲ್ಲಿ ಪಾದಯಾತ್ರೆಯನ್ನು ಮಾಡುವ ಮೂಲಕ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮುಖಂಡ ಎನ್. ಸೋಮಪ್ಪ , ಪ್ರಧಾನ ಕಾರ್ಯದರ್ಶಿ ಹುಸೇನ್ ಪೀರಾ.ಡಿ. ಹೊನ್ನೂರುಸ್ವಾಮಿ, ಬಾವಿಶಿವಕುಮಾರ್, ಶಫಿಉಲ್ಲಾ, ಗೌರವಾಧ್ಯಕ್ಷ ಹೊನ್ನೂರುಸಾಬ್, ದೊಡ್ಡಬಸಪ್ಪ.ಜೆ. ತೋರಣಗಲ್ಲು, ಲಾಲ್ ಸ್ವಾಮಿ, ಯೂಸೂಪ್, ರೆಹಮತ್, ಶರ್ಮಸ್ ಯಶವಂತನಗರ, ಶಫಿ, ರೆಹಮತ್, ಕೆ.ಕೆ. ಮೆಹಬೂಬ್ ಇತರರು ತಹಶೀಲ್ದಾರ್ ಎಚ್.ಜೆ. ರಶ್ಮಿಯವರಿಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ : ದಸರಾ ಮಹೋತ್ಸವಕ್ಕೆ ಗಜಪಡೆ ಸಜ್ಜು; ಎರಡನೇ ಬಾರಿ ಅಂಬಾರಿ ಹೊರಲಿರುವ ಅಭಿಮನ್ಯು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.