ನೂತನ ಸಿಎಂ: ಗರಿಗೆದರಿದ ನಿರೀಕ್ಷೆ
Team Udayavani, Jul 29, 2021, 6:42 PM IST
ವೆಂಕೋಬಿ ಸಂಗನಕಲ್ಲು
ಬಳ್ಳಾರಿ: ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಗಳಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಬಳ್ಳಾರಿ, ನೂತನ ವಿಜಯನಗರ ಜಿಲ್ಲೆಗಳಲ್ಲಿ ಹಲವು ಸಮಸ್ಯೆಗಳು ಶಾಶ್ವತ ಪರಿಹಾರವಾಗಲಿವೆ ಎಂಬುದು ಉಭಯ ಜಿಲ್ಲೆಗಳ ಜನರ ನಿರೀಕ್ಷೆಯಾಗಿದ್ದರೆ, ಜನಪ್ರತಿನಿ ಧಿಗಳ ವಿರೋಧದಿಂದ ಕಗ್ಗಂಟಾಗಿ ಪರಿಣಮಿಸಿರುವ ಜಿಂದಾಲ್ ಜಮೀನು ಪರಭಾರೆ ವಿಷಯ ನೂತನ ಮುಖ್ಯಮಂತ್ರಿಗಳಿಗೆ ಸವಾಲಾಗಿ ಪರಿಣಮಿಸುವ ಸಾಧ್ಯತೆಯಿದೆ.
ಬಳ್ಳಾರಿ/ನೂತನ ವಿಜಯನಗರ ಜಿಲ್ಲೆಗಳಲ್ಲಿ ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರ ಮುಂದೆ ಸಾಲು ಸಾಲು ಸಮಸ್ಯೆಗಳಿವೆ. ಬಳ್ಳಾರಿ/ ವಿಜಯನಗರ ಜಿಲ್ಲೆಗಳು ಸೇರಿ ಅಂತರಾಜ್ಯಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹವಾಗಿರುವ ಹೂಳಿಗೆ ಶಾಶ್ವತ ಪರಿಹಾರ ಕಲ್ಪಿಸುವುದು ಗಗನಕುಸುಮವಾಗಿದೆ. ಹಿಂದಿನ ಹಲವು ಸರ್ಕಾರಗಳು ಹೂಳಿನ ಸಮೀಕ್ಷೆ ನಡೆಸಿ ಅದರ ಪ್ರಮಾಣವನ್ನು ಪತ್ತೆಹಚ್ಚಿದವಾದರೂ, ತೆಗೆಯಲು ಮಾತ್ರ ಈವರೆಗೂ ಯಾವ ಸರ್ಕಾರದಿಂದಲೂ ಸಾಧ್ಯವಾಗಿಲ್ಲ. ಜತೆಗೆ ಜಲಾಶಯದ ಹೆಚ್ಚು ನೀರು ಬಳಸಿಕೊಳ್ಳುವ ಸಲುವಾಗಿ ಫÉಡ್ ಕಾಲುವೆ, ನವಿಲೆ ಬಳಿ ಸಮಾನಾಂತರ ಜಲಾಶಯ ನಿರ್ಮಾಣಗಳಂತಹ ಪರ್ಯಾಯ ಮಾರ್ಗಗಳತ್ತ ಚಿತ್ತ ಹರಿಸಲಾಯಿತಾದರೂ, ಈವರೆಗೂ ಯಾವೊಂದು ಯೋಜನೆಯೂ ಕಾರ್ಯರೂಪಕ್ಕೆ ಬಂದಿಲ್ಲ. ಹಿಂದಿನ ಎಲ್ಲ ಸರ್ಕಾರಗಳಿಗೆ ಸವಾಲಾಗಿ ಪರಿಣಮಿಸಿರುವ ಈ ಬೇಡಿಕೆಗಳು ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರಿಂದಾದರೂ ಆಗಬಹುದೇನೊ ಎಂಬುದು ಉಭಯ ಜಿಲ್ಲೆಗಳ ಜನರ ನಿರೀಕ್ಷೆಯಾಗಿದೆ.
ನೂತನ ಜಿಲ್ಲೆ, ತಾಲೂಕುಗಳಿಗೆ ಮೂಲಸೌಲಭ್ಯ: ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ನೂತನ ವಿಜಯನಗರ ಜಿಲ್ಲೆಯನ್ನಾಗಿ ರಚಿಸಿದ ರಾಜ್ಯ ಸರ್ಕಾರ, ಈವರೆಗೆ ಕಾಯಂ ಅಧಿಕಾರಿಗಳನ್ನು ನಿಯೋಜಿಸಲಾಗಿಲ್ಲ. ಹೊಸಪೇಟೆ ಕೇಂದ್ರ ಸ್ಥಾನವನ್ನಾಗಿ ರಚಿಸಲಾಗಿರುವ ವಿಜಯನಗರ ಜಿಲ್ಲೆಗೆ ಈವರೆಗೆ ಒಬ್ಬ ವಿಶೇಷಾಧಿ ಕಾರಿಯನ್ನು ನಿಯೋಜಿಸಿರುವುದು ಬಿಟ್ಟರೆ, ಯಾವುದೇ ಅಧಿಕಾರಿಗಳನ್ನು ಖಾಯಂ ಆಗಿ ನಿಯೋಜನೆ ಮಾಡಿಲ್ಲ. ಮೂಲ ಬಳ್ಳಾರಿ ಜಿಲ್ಲೆಯ ಜಿಲ್ಲಾಧಿ ಕಾರಿ, ಎಸ್‌ಪಿ, ಜಿಪಂ ಸಿಇಒ ಸೇರಿ ಎಲ್ಲ ಜಿಲ್ಲಾಮಟ್ಟದ ಅಧಿ ಕಾರಿಗಳನ್ನು ವಿಜಯನಗರ ಜಿಲ್ಲೆಯನ್ನೂ ನಿಭಾಯಿಸುವಂತೆ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿಕೊಡಲಾಗಿದೆ. ಕಳೆದ ಹಲವು ದಿನಗಳಿಂದ ಇನ್ನೊಂದು ವಾರ, ತಿಂಗಳು, ಆ. 15ರೊಳಗಾಗಿ ವಿಜಯನಗರ ಜಿಲ್ಲೆಗೆ ಡಿಸಿ, ಎಸ್‌ಪಿಯನ್ನು ಪ್ರತ್ಯೇಕವಾಗಿ ನಿಯೋಜಿಸಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆಯಾದರೂ, ಯಾವಾಗ ಎಂಬುದು ಸ್ಪಷ್ಟವಿಲ್ಲ.
ಅಲ್ಲದೇ, ಹಿಂದಿನ ಕಾಂಗ್ರೆಸ್ ಆಡಳಿತಾವ ಧಿಯಲ್ಲಿ ಘೋಷಣೆಯಾಗಿದ್ದ ಜಿಲ್ಲೆಯ ಕೊಟ್ಟೂರು, ಕಂಪ್ಲಿ, ಕುರುಗೋಡು ತಾಲೂಕುಗಳಿಗೂ ಈವರೆಗೆ ಯಾವುದೇ ಮೂಲಸೌಲಭ್ಯಗಳನ್ನು ಕಲ್ಪಿಸಿಲ್ಲ. ತಹಶೀಲ್ದಾರ್, ತಾಪಂ ಇಒ, ಶಿಕ್ಷಣ ಇಲಾಖೆ ಅಧಿ ಕಾರಿಗಳನ್ನು ನಿಯೋಜಿಸಿದ್ದು ಹೊರತುಪಡಿಸಿದರೆ ಅವರಿಗೆ ಸುಸಜ್ಜಿತ ಕಚೇರಿ ವ್ಯವಸ್ಥೆಯೂ ಇಲ್ಲ. ಕೊಟ್ಟೂರಿನಲ್ಲಿ ಸರ್ಕಾರಿ ಶಾಲೆ ಕಟ್ಟಡದಲ್ಲಿ ತಹಸೀಲ್ದಾರ್ ಕಚೇರಿ, ಯಾತ್ರಿ ನಿವಾಸದಲ್ಲಿ ತಾಪಂ ಕಚೇರಿ, ಎಪಿಎಂಸಿ ಕಟ್ಟಡದಲ್ಲಿ ಕೃಷಿ ಇಲಾಖೆ ಕಚೇರಿಯನ್ನು ತೆರೆಯಲಾಗಿದೆ. ಇನ್ನುಳಿದ ಯಾವ ತಾಲೂಕುಮಟ್ಟದ ಕಚೇರಿಗಳನ್ನು ತೆರೆದಿಲ್ಲ. ಕುರುಗೋಡು, ಕಂಪ್ಲಿ ತಾಲೂಕುಗಳಲ್ಲಿ ಈಚೆಗೆ ಮಿನಿವಿಧಾನಸೌಧ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಲಾಗಿದೆ. ಇನ್ನುಳಿದ ಯಾವುದೇ ಕಚೇರಿಗಳನ್ನು ತೆರೆದಿಲ್ಲ. ನೂತನ ಜಿಲ್ಲೆ, ನೂತನ ತಾಲೂಕುಗಳಿಗೆ ಮೂಲಸೌಲಭ್ಯ ಕಲ್ಪಿಸಬೇಕಾಗಿದೆ.
ಪ್ರವಾಹ ಪೀಡಿತ ಗ್ರಾಮಗಳಿಗೆ ಶಾಶ್ವತ ಪರಿಹಾರವಿಲ್ಲ: ಪ್ರತಿವರ್ಷ ತುಂಗಭದ್ರಾ ಜಲಾಶಯಕ್ಕೆ ನೀರು ಹರಿದು ಬಂದಾಗ ವಿಜಯನಗರ ಜಿಲ್ಲೆಯ ಪಶ್ಚಿಮ ತಾಲೂಕುಗಳಾದ ಹರಪನಹಳ್ಳಿ, ಹಡಗಲಿ, ಕಂಪ್ಲಿ ತಾಲೂಕುಗಳಲ್ಲಿ ಹಲವು ಗ್ರಾಮಗಳು ಪ್ರವಾಹಕ್ಕೆ ಒಳಗಾಗಲಿವೆ. ಹಲವು ವರ್ಷಗಳಿಂದ ಎದುರಾಗುತ್ತಿರುವ ಈ ಸಮಸ್ಯೆಗೆ ತಾತ್ಕಾಲಿಕ ಕಾಳಜಿ ಕೇಂದ್ರಗಳಿಗೆ ಜನರನ್ನು ಸ್ಥಳಾಂತರಿಸುವ ಮೂಲಕ ಪರಿಹಾರವನ್ನು ತಾತ್ಕಾಲಿಕವಾಗಿ ಕಂಡುಕೊಳ್ಳಲಾಗುತ್ತಿದೆ. ಆದರೆ, ಗ್ರಾಮಗಳ ಸ್ಥಳಾಂತರಕ್ಕೆ ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ನೂತನ ಮುಖ್ಯಮಂತ್ರಿಗಳ ಅವ ಧಿಯಲ್ಲಾದರೂ ಈ ಎಲ್ಲ ಬೇಡಿಕೆಗಳ ಈಡೇರಲಿವೆಯೇ ಎಂಬುದು ಜಿಲ್ಲೆಯ ಜನರ ನಿರೀಕ್ಷೆಗಳಾಗಿವೆ.
ಜಮೀನು ಪರಭಾರೆ ಸವಾಲು: ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರ ಮುಂದೆ ಕಗ್ಗಂಟಾಗಿರುವ ಜಿಂದಾಲ್ ಜಮೀನು ಪರಭಾರೆ ಸವಾಲ್ ಎದುರಾಗುವ ಸಾಧ್ಯತೆಯಿದೆ. ಈ ಹಿಂದೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಜಿಂದಾಲ್‌ಗೆ 3667 ಎಕರೆ ಜಮೀನು ಪರಭಾರೆಗೆ ನಿರ್ಣಯ ಕೈಗೊಳ್ಳಲಾಗಿತ್ತು. ಆಗ ಹಲವು ಜನಪ್ರತಿನಿ ಧಿಗಳು, ಅಂದಿನ ವಿರೋಧ ಪಕ್ಷ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೈಬಿಡಲಾಗಿತ್ತು. ಬಳಿಕ ಈಚೆಗೆ ಮಾಜಿ ಸಿಎಂ ಯಡಿಯೂರಪ್ಪ ಅವರ ಅವಧಿಯಲ್ಲಿ ಮತ್ತೂಮ್ಮೆ ಒಂದು ಸಂಪುಟ ಸಭೆಯಲ್ಲಿ ಪರಭಾರೆಗೆ ನಿರ್ಣಯ ಕೈಗೊಂಡು ವಿರೋಧ ವ್ಯಕ್ತವಾದ ಬಳಿಕ ಮತ್ತೂಂದು ಸಂಪುಟ ಸಭೆಯಲ್ಲಿ ಕೈಬಿಡಲಾಗಿದೆ. ಹೀಗಾಗಿ ಜಿಂದಾಲ್ ಸಂಸ್ಥೆಗೆ ಜಮೀನು ಪರಭಾರೆ ಸವಾಲನ್ನು ನೂತನ ಸಿಎಂ ಯಾವ ರೀತಿ ನಿಭಾಯಿಸಲಿದ್ದಾರೆ ಎಂಬುದು ಕಾದು ನೋಡಬೇಕಾಗಿದೆ. ಹಿಂದಿನ ಸರ್ಕಾರಗಳು ಜಿಲ್ಲೆಯ ಪ್ರತಿಯೊಂದು ತಾಲೂಕುಗಳಿಗೆ ಏತ ನೀರಾವರಿ ಘೋಷಣೆ ಮಾಡಿವೆ. ಇವುಗಳ ಪೈಕಿ ಹಡಗಲಿ ಏತ ನೀರಾವರಿಯೊಂದು ಪೂರ್ಣಗೊಂಡಿದ್ದ ಹೊರತುಪಡಿಸಿದರೆ, ಸಿರುಗುಪ್ಪ, ಹ.ಬೊ.ಹಳ್ಳಿ ಸೇರಿ ಎಲ್ಲ ತಾಲೂಕುಗಳಲ್ಲಿ ನನೆಗುದಿಗೆ ಬಿದ್ದಿದ್ದು, ನೂತನ ಸಿಎಂ ಅನುದಾನ ಬಿಡುಗಡೆಗೊಳಿಸಿ ಯೋಜನೆಗೆ ಚಾಲನೆ ನೀಡಬೇಕಿದ್ದು, ಕಾದು ನೋಡಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ: ಜನಾರ್ದನ ರೆಡ್ಡಿ
ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.