
ಬಿಜೆಪಿಯವರು ಅಂಗೈಯಲ್ಲಿ ಆಕಾಶ ತೋರಿಸ್ತಾರೆ
ವಿವಿಧ ಪ್ರದೇಶಗಳಲ್ಲಿ ಕಾಂಗ್ರೆಸ್ ನಾಯಕರ ಬಿರುಸಿನ ಪ್ರಚಾರ ಪ್ರಚಾರದಲ್ಲಿ ಪಾಲಿಕೆ ಸದಸ್ಯೆ ಸಖತ್ ಡ್ಯಾನ್ಸ್
Team Udayavani, Apr 14, 2019, 12:33 PM IST

ಬಳ್ಳಾರಿ: 6,7ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅವರೊಂದಿಗೆ ಮಾಜಿ ಶಾಸಕ ಅನಿಲ್‌ಲಾಡ್, ಪಾಲಿಕೆ ಸದಸ್ಯರು ಮತಯಾಚಿಸಿದರು.
ಬಳ್ಳಾರಿ: ಲೋಕಸಭೆ ಚುನಾವಣೆಯ ಬಳ್ಳಾರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅವರೊಂದಿಗೆ ಮಾಜಿ ಶಾಸಕ ಅನಿಲ್‌ಲಾಡ್ ನಗರದ ವಿವಿಧ ಪ್ರದೇಶದಲ್ಲಿ ಶನಿವಾರ ಪ್ರಚಾರ ನಡೆಸಿ, ಮತಯಾಚಿಸಿದರು. ನಗರದ ಬೆಂಗಳೂರು ರಸ್ತೆಯ ಬೆಂಕಿ ಮಾರೆಮ್ಮ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಯು ಬಂಡಿಮೋಟ್, ಎಪಿಎಂಸಿ, 6, 7ನೇ ವಾರ್ಡ್ ವ್ಯಾಪ್ತಿಯ ಬಾಪೂಜಿನಗರ ಸೇರಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.
ಮೆರವಣಿಗೆಯಲ್ಲಿ ವಾದ್ಯ ಮೇಳಗಳ ವಾದನಕ್ಕೆ ಮನಸೋತ ಪಾಲಿಕೆ ಸದಸ್ಯೆ ಫರ್ವೀನ್‌ಬಾನು ಅವರು ಸಖತ್ ಡ್ಯಾನ್ಸ್ ಮಾಡಿದರು. ಅವರೊಂದಿಗೆ ಪಾಲಿಕೆಯ ಮತ್ತೂಬ್ಬ ಸದಸ್ಯರು ಸಾಥ್ ನೀಡಿದರು. ಈ ಮೂಲಕ ಮೆರವಣಿಗೆ ತೆರಳಿದ ಪ್ರತಿಯೊಂದು ಓಣಿಯ ಮತದಾರರ ವಿಶೇಷ ಗಮನ ಸೆಳೆದರು.
ಈ ವೇಳ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪ, ಬಿಜೆಪಿ ಅಂಗೈಯಲ್ಲಿ ಆಕಾಶ ತೋರಿಸುವಂತಹ ಕೆಲಸ ಮಾಡುತ್ತಿದೆ. ಕಳೆದ ಹದಿನೈದು ವರ್ಷಗಳ ಕಾಲ ಬಿಜೆಪಿ ಪಕ್ಷದೋರು ಸಂಸದರಾಗಿ ಆಯ್ಕೆಯಾಗಿದ್ದಾರೆ.
ಅಲ್ಲದೆ, ಕಳೆದ ಐದು ವರ್ಷಗಳ ಕಾಲ ಕೇಂದ್ರದಲ್ಲಿ ಆಳ್ವಿಕೆ ನಡೆಸಿದ ಬಿಜೆಪಿ ನೇತೃತ್ವದ ಸರ್ಕಾರ ಈ ಜಿಲ್ಲೆಗೆ ಕೊಟ್ಟಿರುವಂತಹ ಕೊಡುಗೆಯಾದರೂ ಏನೆಂಬುದನ್ನು ಸ್ಪಷ್ಟಪಡಿಸಲಿ ಎಂದು ಸವಾಲೆಸೆದರು. ಮಾಜಿ ಶಾಸಕ ಶಾಸಕ ಅನಿಲ್ ಲಾಡ್, ಪ್ರಚಾರ ಸಮಿತಿ ಅಧ್ಯಕ್ಷ ಜೆ.ಎಸ್.ಆಂಜನೇಯಲು, ಪಾಲಿಕೆ ಸದಸ್ಯರಾದ ವೆಂಕಟ ರಮಣ, ಬಿ.ಕೆ.ಕೆರೆಕೊಡಪ್ಪ, ಬಿ.ಕುಮಾರಸ್ವಾಮಿ, ಮರಿದೇವಯ್ಯ, ಫರ್ವೀನ್ ಬಾನು, ಮುಖಂಡರಾದ ಅಸುಂಡಿ ಹೊನ್ನೂರಪ್ಪ, ಬಿ. ರಾಮಪ್ರಸಾದ, ಬಸವರಾಜ, ಜೀವೇಶ್ವರಿ ರಾಮಕೃಷ್ಣ, ಬಿ.ಚಂದ್ರ, ಡಿ.ಸೂರಿ, ಶಿವರಾಜ, ವೆಂಕಟೇಶ್ ಹೆಗಡೆ, ಜೆಡಿಎಸ್ ನಗರ ಅಧ್ಯಕ್ಷ ವಿಜಯ ಕುಮಾರ, ಪ್ರಚಾರ ಸಮಿತಿ ಸದಸ್ಯರಾದ ವಿಷ್ಣು ಬೋಯಪಾಟಿ, ಶೋಭಾ, ಮಹಮ್ಮದ ಅಜಂ ಇದ್ದರು.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ

Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ

Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್

BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.