ಬಳ್ಳಾರಿಯಲ್ಲಿ ಮತ್ತೆ 28 ಪ್ರಕರಣ ದೃಢ
Team Udayavani, Jun 25, 2020, 11:49 AM IST
ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಜಿಂದಾಲ್ ಕೈಗಾರಿಕೆಯ ಐವರು ನೌಕರರು, ಜಿಂದಾಲ್ ಓಪಿಜೆ ಫೀವರ್ ಕ್ಲೀನಿಕ್‌ನ ಆರೋಗ್ಯ ಸಿಬ್ಬಂದಿ ಸೇರಿ ಬುಧವಾರ ಪುನಃ 28 ಕೋವಿಡ್ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 537ಕ್ಕೆ ಏರಿಕೆಯಾಗಿದೆ.
ಜಿಲ್ಲೆಯ ಸಂಡೂರು ತಾಲೂಕಿನಲ್ಲಿ 9, ಬಳ್ಳಾರಿ 7, ಹೊಸಪೇಟೆ 3, ಸಿರುಗುಪ್ಪ 3, ಕೂಡ್ಲಿಗಿ 3, ಹಗರಿಬೊಮ್ಮನಹಳ್ಳಿ 1, ನೆರೆಯ ಆಂಧ್ರದ ರಾಯದುರ್ಗದಲ್ಲಿ ಒಬ್ಬರಿಗೆ ಸೇರಿ 28 ಜನರಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ ಐವರು ಜಿಂದಾಲ್ ಕೈಗಾರಿಕೆ ಉದ್ಯೋಗಿಗಳಾಗಿದ್ದಾರೆ. ನಾಲ್ವರು ಐಎಲ್‌ಐ ಸೋಂಕಿತರಾಗಿದ್ದು, ಒಬ್ಬರು ಜಿಂದಾಲ್‌ನ ಓಪಿಜೆ ಫೀವರ್ ಕ್ಲೀನಿಕ್‌ನ ಆರೋಗ್ಯ ಸಿಬ್ಬಂದಿಯಾಗಿದ್ದಾರೆ. ಒಬ್ಬರ ಸಂಪರ್ಕವನ್ನು ಪತ್ತೆಹಚ್ಚಲಾಗುತ್ತಿದ್ದು, ಇಬ್ಬರು ದುರ್ಬಲ ವರ್ಗದ (ಎಎನ್‌ಸಿ) ಸೋಂಕಿತರಾಗಿದ್ದಾರೆ.
ಇನ್ನುಳಿದವರು ಪಿ.7862, ಪಿ.7706, ಪಿ.6440, ಪಿ.6455, ಪಿ.9068, ಪಿ.7413, ಪಿ.7967, ಪಿ.9072 ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.