ಕೋವಿಡ್ ವಾರಿಯರ್ಸ್‌ಗೆ ಎಳನೀರು ವಿತರಣೆ
Team Udayavani, May 1, 2020, 5:15 PM IST
ಬಳ್ಳಾರಿ: ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್, ವೈದ್ಯಕೀಯ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಸನ್ಮಾರ್ಗ ಗೆಳೆಯರ ಬಳಗದಿಂದ ಉಚಿತವಾಗಿ ಎಳನೀರು ವಿತರಿಸಲಾಯಿತು.
ಬಳ್ಳಾರಿ: ಕೋವಿಡ್ ವೈರಸ್, ಲಾಕ್ ಡೌನ್ ಹಿನ್ನೆಲೆಯಲ್ಲಿ ಬಿರುಬಿಸಿಲಿನಲ್ಲೂ ವಾರಿಯರ್ಸ್‌ಗಳಂತೆ ಅವಿರತ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್, ವೈದ್ಯಕೀಯ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ, ಪೌರ ಕಾರ್ಮಿಕರು, ಗೃಹ ರಕ್ಷಕ ದಳದ ಸಿಬ್ಬಂದಿಗೆ ಚೈತನ್ಯ ಪಿಯು ಕಾಲೇಜ್, ಸನ್ಮಾರ್ಗ ಗೆಳೆಯರ ಬಳಗದಿಂದ ಉಚಿತವಾಗಿ ಎಳನೀರನ್ನು ವಿತರಿಸಲಾಯಿತು.
ನಗರದ ಗಡಗಿ ಚನ್ನಪ್ಪ ವೃತ್ತ, ಮೋತಿ ವೃತ್ತ, ಬೆಂಗಳೂರು ರಸ್ತೆ, ಟ್ರಾಫಿಕ್, ಹಲಕುಂದಿ ಚೆಕ್‌ಪೋಸ್ಟ್ ವಿಶೇಷವಾಗಿ ಗುಗ್ಗರಹಟ್ಟಿ ಕ್ವಾರಂಟೈನ್ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ, ಕ್ವಾರಂಟೈನ್ ನಲ್ಲಿರುವಾಗ ವೈದ್ಯರಿಗೆ, ನರ್ಸ್‌ಗಳಿಗೆ ಚೈತನ್ಯ ಪಿಯು ಕಾಲೇಜು ನಿರ್ದೇಶಕ ಡಾ| ರಾಧಾಕೃಷ್ಣ ಎಳನೀರು ವಿತರಿಸಿದರು. ನಮ್ಮ ಪ್ರಾಣ ರಕ್ಷಣೆಗಾಗಿ, ತಮ್ಮ ಪ್ರಾಣಗಳನ್ನು ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿರುವ ಸಮಸ್ತ ಅಧಿಕಾರಿ ವರ್ಗಕ್ಕೆ ಕೃತಜ್ಞತೆ ಸಲ್ಲಿಸುತ್ತಾ, ಬಳ್ಳಾರಿಯ ಬಿರು ಬಿಸಿಲಿನ ಬೇಗೆಯಲ್ಲೂ ಕೊರೊನಾ ಕಾರ್ಯದಲ್ಲಿ ನಿರತರಾದ ಅಧಿಕಾರಿ ಮತ್ತು ಸಿಬ್ಬಂದಿಗೆ ಎಳನೀರು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸನ್ಮಾರ್ಗದ ಅಧ್ಯಕ್ಷರಾದ ಎಚ್. ಲಕ್ಷ್ಮೀಕಾಂತರೆಡ್ಡಿ, ಉಪಾಧ್ಯಕ್ಷ ಜಗದೀಶ್, ಖಜಾಂಚಿ ತೇಜ ರಘುರಾಮರಾವ್, ಕಾರ್ಯದರ್ಶಿ ಕಪ್ಪಗಲ್ಲು ಚಂದ್ರಶೇಖರ್ ಆಚಾರ್, ಮಂಜುನಾಥ ಜೆ.ಪಿ., ಟ್ಯಾಟೂ ಮಂಜು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Waqf Notice: ಸಿಎಂ ಪಿತೂರಿ, ಸಚಿವ ಜಮೀರ್ ದ್ರೋಹದಿಂದ ಜಮೀನು ಕಬಳಿಸುವ ಕೆಲಸ: ವಿಜಯೇಂದ್ರ
By Election: ಮಾತಿನ ಭರದಲ್ಲಿ ವಿಜಯೇಂದ್ರಗೂ ಪಾಲು ಎಂದ ಶ್ರೀರಾಮುಲು!
Modi,BSY ಬಗ್ಗೆ ಮಾತನಾಡುವ ಮೊದಲು ಎಚ್ಚರಿಕೆ ಇರಲಿ: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಿಡಿ
Kotturu: ಹಸಿರು ಪಟಾಕಿ ಹೆಸರಿನಲ್ಲಿ ನಿಯಮ ಉಲ್ಲಂಘಿಸಿ ಮಾಮೂಲಿ ಪಟಾಕಿ ಮಾರಾಟ…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.