ಬಳ್ಳಾರಿ: ಬಿಟಿಪಿಎಸ್ ಆಕ್ಸಿಜನ್ ಘಟಕದಲ್ಲಿ ಸ್ಫೋಟ: ಮೂವರಿಗೆ ಗಾಯ, ಇಬ್ಬರ ಪರಿಸ್ಥಿತಿ ಗಂಭೀರ
Team Udayavani, Mar 18, 2022, 11:18 PM IST
ಬಳ್ಳಾರಿ: ತಾಲೂಕಿನ ಕುಡತಿನಿ ಬಳಿಯ ಬಳ್ಳಾರಿ ಥರ್ಮಲ್ ಪವರ್ ಸ್ಟೇಷನ್ ನಲ್ಲಿನ ಆಕ್ಸಿಜನ್ ಪ್ಲಾಂಟ್ ನಲ್ಲಿ ಶುಕ್ರವಾರ ಸ್ಫೋಟ ಸಂಭವಿಸಿದ್ದು, ಮೂವರು ಗಾಯಗೊಂಡಿದ್ದು, ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ.
ಕೇಂದ್ರದ 750 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಸೂಪರ್ ಕ್ರಿಟಿಕಲ್ ಬಾಯ್ಲರ್ ಪವರ್ ಪ್ಲಾಂಟ್ ನಲ್ಲಿ ಆಕ್ಸಿಜನ್ ಉತ್ಪಾದನೆಗೆ ಅವಕಾಶವಿದೆ. ಈ ಹಿಂದೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು 6.5 ಕೋಟಿ ರೂ. ಅನುದಾನದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಲಾಗಿತ್ತು. ಈ ಆಕ್ಸಿಜನ್ ಘಟಕವು ಪೂರ್ಣ ಪ್ರಮಾಣದಲ್ಲಿ ಚಾಲನೆ ಪಡೆದುಕೊಂಡಿರಲಿಲ್ಲ. ಇನ್ನು ಕೇವಲ ಪ್ರಾಯೋಗಿಕ ಹಂತದಲ್ಲೇ ಇತ್ತು. ಆಕ್ಸಿಜನ್ ನ್ನು ಗ್ಯಾಸ್ ಸಿಲಿಂಡರ್ ಗಳಿಗೆ ತುಂಬುತ್ತಿರಲಿಲ್ಲ. ಅದೇ ರೀತಿ ಇಂದು ಸಹ ಘಟಕದಲ್ಲಿ ಅದೇ ಕಾರ್ಯನಿರ್ವಹಿಸಲಾಗುತ್ತಿತ್ತು. ಆದರೆ, ಶುಕ್ರವಾರ ಸಂಜೆ 7.30 ರ ಸುಮಾರಿಗೆ ಘಟಕದಲ್ಲಿನ ಎಲೆಕ್ಟ್ರಿಕಲ್ ಪ್ಯಾನಲ್ ಸ್ಫೋಟಗೊಂಡಿದೆ.
ಇದರಿಂದ ಆಕ್ಸಿಜನ್ ಪೈಪ್ ಲೈನ್ ಗಳು ಸಹ ಕಿತ್ತುಹೋಗಿ ಸ್ಪೋಟಗೊಂಡ ಬೆಂಕಿ ವ್ಯಾಪಿಸಲು ಕಾರಣವಾಗಿದೆ. ಇದರಲ್ಲಿ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂವರು ಗಾಯಗೊಂಡಿದ್ದು, ಈ ಪೈಕಿ ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ ಎಂದು ಬಿಟಿಪಿಎಸ್ ನ ಮೂಲಗಳು ಖಚಿತಪಡಿಸಿವೆ.
ಗಾಯಗೊಂಡವರ ಹೆಸರು, ವಿಳಾಸ ತಿಳಿದು ಬಂದಿಲ್ಲ. ಆದರೆ, ಮೂವರು ಗುತ್ತಿಗೆ ಕಾರ್ಮಿಕರು ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.