ಸಿಜಿಕೆ ರಂಗಭೂಮಿಯ ದೈತ್ಯ ಪ್ರತಿಭೆ
Team Udayavani, Jun 29, 2020, 12:19 PM IST
ಬಳ್ಳಾರಿ: ರಂಗ ಸಂಘಟಕ, ರಂಗ ನಿರ್ದೇಶಕ ಕೆ.ಸಿ.ಪರಶುರಾಮರನ್ನು ಸನ್ಮಾನಿಸಲಾಯಿತು
ಬಳ್ಳಾರಿ: ಸಿ.ಜಿ.ಕೆ ಎಂದೇ ನಾಡಿನಲ್ಲಿ ಪ್ರಖ್ಯಾತರಾಗಿದ್ದ ಸಿ.ಜಿ. ಕೃಷ್ಣ ಸ್ವಾಮಿಯವರು ಕನ್ನಡ ರಂಗಭೂಮಿಯಲ್ಲಿ ಸಂಘಟಕರಾಗಿ, ರಂಗ ನಿರ್ದೇಶಕರಾಗಿ, ನಾಟಕಕಾರರಾಗಿ ಅವರ ಕೊಡುಗೆ ಅಪಾರವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸಿದ್ಧರಾಮ ಕಲ್ಮಠ ಅಭಿಪ್ರಾಯಪಟ್ಟರು.
ನಗರದ ಡಿ.ಆರ್.ಕೆರಂಗಸಿರಿ ಶಾಲೆಯಲ್ಲಿ ಡಿ.ಕಗ್ಗಲ್ಲಿನ ರಂಗಜಂಗಮ ಸಂಸ್ಥೆ, ಕರ್ನಾಟಕ ಬೀದಿನಾಟಕ ಅಕಾಡೆಮಿಯ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೀದಿ ನಾಟಕ ರಂಗಭೂಮಿಯ ಆಚರಣೆ ಹಾಗೂ ಸಿ.ಜಿ.ಕೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಜಿಕೆ ಅವರು ಬದುಕಿನ ಕುರಿತು ಮಾತನಾಡಿದರು. ಸಿಜಿಕೆ ಅವರು ಹೊಸ ಹೊಸ ನಾಟಕ ಪ್ರಯೋಗಗಳಿಗೆ ತಮ್ಮನ್ನ ದುಡಿಸಿಕೊಂಡು ಎಲ್ಲರೂ ರಂಗ ಭೂಮಿಯಲ್ಲಿ ಕ್ರಿಯಾಶೀಲರಾಗಿ ಇರುವಂತೆ ಮಾಡಿದರು. ನೂರಾರು ವರ್ಷ ಇತಿಹಾಸ ಇರುವ ರಂಗಭೂಮಿಗೆ ನುರಿತ ರಂಗ ನಿರ್ದೇಶಕರಾದರು. ಬೀದಿ ನಾಟಕಗಳ ಮೂಲಕವೂ ಜನ ಸಾಮಾನ್ಯರಿಗೆ ಜಾಗೃತಿ ಮೂಡಿಸುತ್ತ ರಂಗ ಸಂಘಟಕರನ್ನು ಸಂಘಟಿಸುತ್ತಾ ಬಂದಿದ್ದರು ಎಂದು ಗುಣಗಾನ ಮಾಡಿದರು.
ರಂಗಸಂಘಟಕ, ನಿರ್ದೇಶಕ ಕೆ.ಸಿ.ಪರಶುರಾಮ ಅಂಗೂರು ಅವರಿಗೆ ಈ ಸಾಲಿನ ಸಿಜಿಕೆ ರಂಗ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕ ಡಾ| ಕೆ.ಬಸಪ್ಪ ಅವರು ಸಿ.ಜಿ.ಕೆ ಯವರ ಜೀವನ-ಬದುಕಿನ ಅಂತರಂಗ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ವೆಂಕೋಬಾಚಾರಿ, ಬಿ.ಗಂಗಣ್ಣ, ಕೆ.ಜಗದೀಶ. ರಾಮೇಶ್ವರ ಹಿರೇಮಠ ಮುಂತಾದವರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.