ಬಳ್ಳಾರಿ: ಆಫ್ರಿಕಾದಿಂದ ಬಂದ ಇಬ್ಬರು ಕ್ವಾರಂಟೈನ್ ಗೆ: ಡಾ. ಜನಾರ್ಧನ್
Team Udayavani, Nov 30, 2021, 11:31 AM IST
ಬಳ್ಳಾರಿ: ನೆರೆಯ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರಕ್ಕೆ ಆಫ್ರಿಕಾದಿಂದ ಇಬ್ಬರು ಬಂದಿದ್ದು, ಅವರ ರಕ್ತದ ಮಾದರಿಯನ್ನು ಪರೀಕ್ಷಿಸಿ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಎಲ್. ಜನಾರ್ಧನ್ ಹೇಳಿದರು.
ಆಫ್ರಿಕಾದಲ್ಲಿ ಪತ್ತೆಯಾಗಿರುವ ಒಮೈಕ್ರಾನ್ ಸೋಂಕು ಎಲ್ಲೆಡೆ ಆತಂಕ ಮೂಡಿಸುತ್ತಿದೆ. ದಕ್ಷಿಣಾಫ್ರಿಕಾ, ಆಸ್ಟ್ರೇಲಿಯಾ, ಹಾಂಕಾಂಗ್ ಸೇರಿ ವಿಶ್ವದ ಒಟ್ಟು 13 ದೇಶಗಳಲ್ಲಿ ಒಮೈಕ್ರಾನ್ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲೂ ತೀವ್ರ ನಿಗಾ ವಹಿಸಲಾಗುತ್ತಿದೆ. ಆಫ್ರಿಕಾ ದೇಶಕ್ಕೆ ಕೆಲಸದ ನಿಮಿತ್ತ ಹೋಗಿದ್ದ ಇಬ್ಬರು ವ್ಯಕ್ತಿಗಳು ವಿಮಾನದಲ್ಲಿ ಮುಂಬೈಗೆ ಆಗಮಿಸಿ ಅಲ್ಲಿಂದ ಖಾಸಗಿ ವಾಹನದಲ್ಲಿ ಹೊಸಪೇಟೆಗೆ ಬಂದಿದ್ದು, ಮಾಹಿತಿ ಪಡೆದು ಕೂಡಲೇ ಅವರಿಗೆ ತಪಾಸಣೆ ಮಾಡಲಾಗಿದೆ. ಆರ್ ಟಿಪಿಸಿಆರ್ ಪಡೆದು ಪರೀಕ್ಷೆಗೆ ಒಳಪಡಿಸಲಾಗಿದ್ದು, ನೆಗೆಟಿವ್ ಬಂದಿದೆ. ಆದರೂ, ಇಬ್ಬರನ್ನು ಕ್ವಾರೈಂಟೈನ್ ಮಾಡಲಾಗಿದೆ. ಏಳು ದಿನಗಳ ನಂತರ ಮತ್ತೊಮ್ಮೆ ಪರೀಕ್ಷಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು. ರಾಜ್ಯ ಸರ್ಕಾದರಿಂದಲೂ ಯಾವುದೇ ಮಾರ್ಗಸೂಚಿಗಳು ಬಂದಿಲ್ಲ. ಮೇಲಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಡಾ. ಇಂದ್ರಾಣಿ, ಮಕ್ಕಳ ರಕ್ಷಣಾಧಿಕಾರಿ ರಾಜಾನಾಯ್ಕ್, ಸೇರಿ ಹಲವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary: ಐದು ವರ್ಷದ ಮಗುವಿನ ಅತ್ಯಾಚಾರ ನಡೆಸಿದ್ದ ಆರೋಪಿಗೆ ಗುಂಡೇಟು
ಮೀಟರ್ ಬಡ್ಡಿ ದಂಧೆಗೆ ಮನನೊಂದು ವಿಎಸ್‌ಕೆ ವಿವಿ ಅಟೆಂಡರ್ ಆತ್ಮಹತ್ಯೆ… ಪೊಲೀಸರಿಂದ ತನಿಖೆ
ಆಕಳುಗಳ ಕೆಚ್ಚಲು ಕೊಯ್ದ ಪ್ರಕರಣ; ಶಾಸಕ,ಉಸ್ತುವಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ
Makar Sankranti: ಹಂಪಿಗೆ ಹರಿದು ಬಂದ ಭಕ್ತ ಜನ ಸಾಗರ!
Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
MUST WATCH
ಹೊಸ ಸೇರ್ಪಡೆ
Mangaluru; ಫುಟ್‌ಬಾಲ್ ಕ್ವಾರ್ಟರ್ ಫೈನಲ್ :ಕಸಬ ಬ್ರದರ್ ಮೇಲುಗೈ
BBK11: ಡಬಲ್ ಎಲಿಮಿನೇಷನ್: ಮೊದಲು ಆಚೆ ಹೋದ ಸ್ಪರ್ಧಿ ಇವರೇ ನೋಡಿ
Rohingya; ತ್ರಿಪುರಾದಲ್ಲಿ 6 ರೋಹಿಂಗ್ಯಾ ಮಹಿಳೆಯರ ಬಂಧನ
ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ
BCCI 10-point ಆದೇಶ ಸಮಸ್ಯೆ; ಆಕ್ಷೇಪ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.