45 ಸಾವಿರ ಕ್ವಿಂಟಲ್ ಅಕ್ಕಿಯನ್ನು ಯಾರಿಗೆ ಮಾರಿದಿರಿ?
Team Udayavani, Jan 7, 2018, 6:10 AM IST
ಸಂಡೂರು: “ರಾಜ್ಯದ ಜನರ ಹಸಿವು ನೀಗಿಸಲು ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದೇವೆ ಎಂದು ಹೇಳುವ ಸಿದ್ದರಾಮಯ್ಯನವರೇ, 45 ಸಾವಿರ ಕ್ವಿಂಟಲ್ ಅಕ್ಕಿ ಅಕ್ರಮವಾಗಿ ಸಾಗಾಟವಾಗಿದೆ. ಇದನ್ನು ಯಾರಿಗೆ ಮಾರಿದಿರಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರಶ್ನಿಸಿದ್ದಾರೆ.
ಬಳ್ಳಾರಿ ಜಿಲ್ಲೆ ಸಂಡೂರಿನಲ್ಲಿ ಶನಿವಾರ ಆಯೋಜಿಸಿದ್ದ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. “ಗೋದಾಮುಗಳಲ್ಲಿ 40 ಸಾವಿರ ಕ್ವಿಂಟಲ್ ಅಕ್ಕಿ ಕೊಳೆಯುತ್ತಿದೆ. 45 ಸಾವಿರ ಕ್ವಿಂಟಲ್ ಅಕ್ಕಿ ಅಕ್ರಮವಾಗಿ ಸಾಗಾಟವಾಗಿದೆ. ಹಾಗಾದರೆ ಇದನ್ನು ಯಾರಿಗೆ ಮಾರಿದಿರಿ’ ಎಂದು ಪ್ರಶ್ನಿಸಿದರು. “ಕೇಂದ್ರ ಸರ್ಕಾರ ಪ್ರತಿ ಕೆ.ಜಿ. ಅಕ್ಕಿಗೆ 32 ರೂ., ಗೋಧಿಗೆ 26ರೂ. ನೀಡುತ್ತಿದೆ. ಬಡವರಿಗೆ ಅಕ್ಕಿ, ಗೋಧಿ ಸಮರ್ಪಕವಾಗಿ ವಿತರಿಸದೆ ಗೋದಾಮುಗಳಲ್ಲಿ ಕೊಳೆಸುತ್ತಿದ್ದೀರಿ’ ಎಂದು ಆರೋಪಿಸಿದರು.
“ನಾನು ಸಿಎಂ ಆಗಿದ್ದಾಗ ಪ್ರಥಮ ಕೃಷಿ ಬಜೆಟ್ ನೀಡಿದೆ. ಉಚಿತ ವಿದ್ಯುತ್ ನೀಡಿದೆ. ಸಾಲಮನ್ನಾ ಮಾಡಿದೆ. ಭಾಗ್ಯಲಕ್ಷೀ¾ ಬಾಂಡ್ ಜಾರಿಗೆ ತಂದು ಹೆಣ್ಣು ಮಕ್ಕಳಿಗೆ ಶಾಶ್ವತ ಪರಿಹಾರ ನೀಡಿದೆ. ನನಗೆ ಜಾತಿ ಗೊತ್ತಿಲ್ಲ, ಸರ್ವ ಜನಾಂಗದ ತೋಟವಾಗಬೇಕು ಎನ್ನುವ ಗುರಿ ನಮ್ಮದು. ಬಂಜಾರ ಸಮಾಜಕ್ಕೆ ನಿಗಮ ಸ್ಥಾಪಿಸಿದೆವು. ವಾಲ್ಮೀಕಿ ಜಯಂತಿ, ಭವನ ಕಟ್ಟಿಸಿದೆವು. ಕುರುಬರ ಸಮಾಜದ ಕನಕ ಪೀಠಕ್ಕೆ 40 ಕೋಟಿ ರೂ. ಅನುದಾನ ನೀಡಿದೆವು’ ಎಂದರು.
“ರಾಚಯ್ಯನವರು ಜಾರಿಗೆ ತರಲು ಹೊರಟ ರೈತರ ಹಕ್ಕು ಕಸಿದುಕೊಳ್ಳುವ ಕಾನೂನು ವಿರುದ್ಧ ಏಕಾಂಗಿಯಾಗಿ ಹೋರಾಡಿದವನು ಯಡಿಯೂರಪ್ಪ. ಆ ಬಿಲ್ ತಡೆ ಹಿಡಿದವನು ಯಡಿಯೂರಪ್ಪ. ನೀವು ಹೆದರಬೇಡಿ ನಿಮಗೆ ಹಕ್ಕು ಪತ್ರ ನೀಡುತ್ತೇವೆ. 20 ವರ್ಷ ಮೋದಿಯವರನು° ಯಾರೂ ಅಲುಗಾಡಿಸಲಾರರು’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
MUST WATCH
ಹೊಸ ಸೇರ್ಪಡೆ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.