ಜಾನುವಾರುಗಳ ಮೇವಾಯ್ತು ಕಬ್ಬು
Team Udayavani, Nov 24, 2018, 6:40 AM IST
ಸಿರಗುಪ್ಪ: ಕಾರ್ಖಾನೆ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ನಡುವಿನ ಸಮಸ್ಯೆ ಬಗೆಹರಿಯುವ ಮುನ್ನವೇ ಬಳ್ಳಾರಿ ಜಿಲ್ಲೆಯಲ್ಲಿ ರೈತನೋರ್ವ ಬೆಳೆದ ಕಬ್ಬನ್ನೆಲ್ಲ ಕಡಿದು ಜಾನುವಾರುಗಳ ಮೇವಾಗಿ ಬಳಸಲು ಮುಂದಾಗಿದ್ದಾನೆ. ಸಿರಗುಪ್ಪ ತಾಲೂಕಿನ ಇಬ್ರಾಹಿಂಪುರ ಗ್ರಾಮದ ರೈತ, ಸತ್ಯನಾರಾಯಣ ತಮ್ಮ ಹೊಲದಲ್ಲಿ ಬೆಳೆದ ಕಬ್ಬನ್ನೆಲ್ಲ ಕಟಾವು ಮಾಡಿ ದನ ಕರುಗಳಿಗೆ ಹಾಕುತ್ತಿದ್ದಾರೆ.
ದೇಶನೂರು ಗ್ರಾಮದಲ್ಲಿರುವ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಈ ವರ್ಷ ಕಬ್ಬು ಖರೀದಿ ಸ್ಥಗಿತಗೊಳಿಸಿದ್ದರಿಂದ ಇವರು ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಕಾರ್ಖಾನೆಯ ಆಡಳಿತ ಮಂಡಳಿ ಈ ಹಿಂದೆ ಮಾಡಿಕೊಂಡ ಒಪ್ಪಂದದಂತೆ ಸತ್ಯನಾರಾಯಣ 12 ಎಕರೆ ಜಮೀನಿನಲ್ಲಿ ಕಬ್ಬು ಬೆಳೆದಿದ್ದರು. ಆದರೆ, ಕಬ್ಬು ಕಟಾವಿಗೆ ಬಂದ ನಂತರ ಕಾರ್ಖಾನೆಯ ಆಡಳಿತ ಮಂಡಳಿ ಕಬ್ಬು ಖರೀದಿ ಸಾಧ್ಯವಿಲ್ಲ ಎಂದು ತಿಳಿಸಿದೆ. ಬೆಳೆದು ನಿಂತ ಕಬ್ಬನ್ನು ಜಮೀನಿನಲ್ಲಿ ಹಾಗೇ ಬಿಟ್ಟರೆ ಒಣಗುತ್ತದೆ.
ಅಲ್ಲದೆ, ಕಬ್ಬು ಕಟಾವು ಮಾಡದಿ ದ್ದರೆ ಬೇರೆ ಬೆಳೆ ಬೆಳೆಯಲೂ ಸಾಧ್ಯವಿಲ್ಲ. ಹೀಗಾಗಿ, ಕಬ್ಬನ್ನು ಕಟಾವು ಮಾಡಿ ತಮ್ಮ ಡೇರಿ ಫಾರಂನಲ್ಲಿನ ಆಕಳು,ಎಮ್ಮೆ, ಕರುಗಳಿಗೆ ಮೇವಾಗಿ ನೀಡುತ್ತಿದ್ದಾರೆ.
ಒಂದು ಎಕರೆ ಕಬ್ಬು ಬೆಳೆಯಲು 30 ರಿಂದ 50ಸಾವಿರ ರೂ.ಖರ್ಚು ಬಂದಿದೆ. ಅಲ್ಲದೆ,ಕಾರ್ಖಾನೆಯಿಂದ ಕಳೆದ ವರ್ಷದ ಕಬ್ಬಿನ ಬಾಕಿ 1ಲಕ್ಷ ರೂ.ಪಾವತಿಯಾಗಬೇಕಿದೆ. ಇದರೊಂದಿಗೆ ಕೊನೇ ಕ್ಷಣದಲ್ಲಿ ಕಬ್ಬು ಖರೀದಿ ಸ್ಥಗಿತಗೊಳಿಸಿದ್ದರಿಂದ ಈ ಭಾಗದ ರೈತರೆಲ್ಲ ನಷ್ಟ ಅನುಭವಿಸುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ
Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Bidar contractor ಆತ್ಮಹ*ತ್ಯೆ ಪ್ರಕರಣ: ಸ್ವತಂತ್ರ ತನಿಖೆಗೆ ಪ್ರಿಯಾಂಕ್ ಖರ್ಗೆ ಒಲವು
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.