22-23ರಂದು ವೀರಶೈವ ವಿದ್ಯಾವರ್ಧಕ ಸಂಘದ ಶತಮಾನೋತ್ಸವ


Team Udayavani, Sep 5, 2017, 3:27 PM IST

05-Z-3.jpg

ಬಳ್ಳಾರಿ: ಜಿಲ್ಲೆಯಲ್ಲಿ 1916ರಲ್ಲಿ ಸ್ಥಾಪನೆಯಾದ ವೀರಶೈವ ವಿದ್ಯಾವರ್ಧಕ ಸಂಘದ ಶತಮಾನೋತ್ಸವದ ಕಾರ್ಯಕ್ರಮ ಸೆಪ್ಟೆಂಬರ್‌ 22 ಮತ್ತು 23ರಂದು ನಗರದಕಪ್ಪಗಲ್ಲು ರಸ್ತೆಯಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಪ್ರೌಢಶಾಲೆ ಮೈದಾನದಲ್ಲಿ ನಡೆಯಲಿದೆ. 

ನಗರದ ಎಎಸ್‌ಎಂ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ವೀ.ವಿ ಸಂಘದ ಅಧ್ಯಕ್ಷ ಅಲ್ಲಂ ಬಸವರಾಜ ಹಾಗೂ ಗೌರವ ಕಾರ್ಯದರ್ಶಿ ಉಡೇದ ಬಸವರಾಜ್‌ ಮಾತನಾಡಿ, ಹೈ.ಕ ಪ್ರದೇಶದಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿ ಲಕ್ಷಾಂತರ ಜನರ ಜೀವನಗಳನ್ನು ರೂಪಿಸಿದ ವೀರಶೈವ ವಿದ್ಯಾವರ್ಧಕ ಸಂಘ ಸಮಾಜದ ಎಲ್ಲ ವರ್ಗಗಳ ಶೈಕ್ಷಣಿಕ ಅವಶ್ಯಕತೆ ಪೂರೈಸಿದೆ ಎಂದರು. 

ಸಾರ್ಥಕ ಶತಮಾನೋತ್ಸವ ಹಮ್ಮಿಕೊಂಡಿರುವ ವೀವಿ ಸಂಘದ ಮಹತ್ವದ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಚಿವರು, ಅನೇಕ ಶಿಕ್ಷಣ ತಜ್ಞರು, ವೀ.ವಿ ಸಂಘದ ಅಭಿವೃದ್ಧಿಗೆ ಆರು ದಶಕಗಳ ಕಾಲ ಶ್ರಮಿಸಿದ ಹಿರಿಯರಾದ ಎನ್‌.ತಿಪ್ಪಣ್ಣ, ಕೋಳೂರು ಬಸವನಗೌಡ, ಅಲ್ಲಂ ಕುಟುಂಬದ ಹಿರಿಯರು, ವೀ.ವಿ ಸಂಘದ ಶಾಲಾ-ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿ ವಿವಿಧ ಉನ್ನತ ಹುದ್ದೆಗೇರಿ ಹೆಸರು ಮಾಡಿದ ಸಾಧಕರೂ ಸೇರಿದಂತೆ ಸಹಸ್ರಾರು ಜನರು ಶತಮಾನೋತ್ಸವದ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ ಎಂದರು.

ವೀವಿ ಸಂಘದ ಶತಮಾನದ ಇತಿಹಾಸ:
ವಿದ್ಯಾವರ್ಧಕ ಸಂಘದ ಸ್ಥಾಪನೆಯ ಬೀಜ ವಿಚಾರ ಮಾಡಿದ್ದು, ಮೊಳಕೆಯೊಡೆದಿದ್ದು 1909ರಲ್ಲಿ ಬಳ್ಳಾರಿಯಲ್ಲಿ 1909ರ ಡಿಸೆಂಬರ್‌ 27 ರಿಂದ 30ರವರೆಗೆ ನಡೆದ ಅಖೀಲ ಭಾರತ ವೀರಶೈವ ಮಹಾಸಭಾದ 5ನೇ ಮಹಾ  ವೇಶನದಲ್ಲಿ ಹಾನಗಲ್‌ ಕುಮಾರಸ್ವಾಮಿಗಳ ಮತ್ತು ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿಗಳ ದೂರದರ್ಶಿತ್ವ ಮತ್ತು ದೃಢ ಸಂಕಲ್ಪದ ಮೇರೆಗೆ ಮಂಡಿತವಾದ ನಿರ್ಣಯದಲ್ಲಿ ವಿದ್ಯಾವರ್ಧಕ ಸಂಘವು ಅಂಕುರಗೊಂಡು, 1912ರಲ್ಲಿ ಪಲ್ಲವಿಸಿ, 1916ರಲ್ಲಿ ಹೂವಾಗಿ ಅರಳುವುದರ ಮೂಲಕ ಗುರು ಹಿರಿಯರ ಸಂಕಲ್ಪಕ್ಕೆ ಮೂರ್ತರೂಪ ನೀಡಲಾಯಿತು.

ಆರಂಭದಲ್ಲಿ ಐವರು ಪದಾಧಿಕಾರಿಗಳು ಇಪ್ಪತ್ತು ಜನ ಸದಸ್ಯರ ಕಾರ್ಯಕಾರಿ ಸಮಿತಿಯ ಸದಸ್ಯರೊಂದಿಗೆ 1916ರ ಆಗಸ್ಟ್‌ ನಲ್ಲಿ ಬಳ್ಳಾರಿಯ ಚಾರಿತ್ರಿಕ ಮಹತ್ವದ ಸಕ್ಕರಿ ಕರಡೆಪ್ಪನವರ ಚೌಕಿಯಲ್ಲಿ ವಿದ್ಯಾರ್ಥಿಗಳ ವಿಶ್ರಾಂತಿ ವಲಯದ ಮೂಲಕ ಕೌತಾಳ್‌ ಯಜಮಾನ ಗುರುಶಾಂತಪ್ಪನವರ ಅಧ್ಯಕ್ಷತೆಯಲ್ಲಿ ವೀ.ವಿ  ಸಂಘ ಕಾರ್ಯಾರಂಭಗೊಂಡಿತು. ಹೀರದ ಕರಿಬಸಪ್ಪನವರು ಸಂಘದ ಮೊಟ್ಟ ಮೊದಲ ಕಾರ್ಯದರ್ಶಿಗಳಾಗಿದ್ದರು.
ವೀ.ವಿ ಸಂಘದ ಸ್ಥಾಪನೆಗೊಂಡ ದಿನದಿಂದಲೂ ಹಿಂದುಳಿದ ಬಳ್ಳಾರಿ ಜಿಲ್ಲೆಯ ಮೂಲಭೂತ ಅವಶ್ಯಕತೆ ಎನಿಸಿದ್ದ ಆರಂಭಿಕ ಶಿಕ್ಷಣ ಒದಗಿಸುವುದನ್ನು ತನ್ನ ಉದ್ದೇಶಗಳಲ್ಲಿ ಕೇಂದ್ರೀಕರಿಸಿಕೊಂಡಿತ್ತು. ಮಾತೃಭಾಷೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ, ಮಹಿಳೆಯರಿಗೆ ಶಿಕ್ಷಣ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿದ್ಯಾನುಕೂಲ, ಪ್ರಾಥಮಿಕ ಶಿಕ್ಷಣ, ಹಿರಿಯ ಪ್ರಾಥಮಿಕ, ಪ್ರೌಢ ಶಿಕ್ಷಣ, ತಾಂತ್ರಿಕ ಶಿಕ್ಷಣ ಇದಕ್ಕೆ ಪೂರಕವಾಗಿ ಉಚಿತ ಪ್ರಸಾದ ನಿಲಯಗಳ ಸ್ಥಾಪನೆ, ಸ್ಥಳೀಯ ಸಂಪನ್ಮೂಲಗಳ ಕ್ರೋಢೀಕರಣ ಇತ್ಯಾದಿ  ಉದ್ದೇಶಗಳೊಂದಿಗೆ ಸ್ಥಾಪನೆಗೊಂಡು ಬಳ್ಳಾರಿ ಜಿಲ್ಲೆ ಮಾತ್ರವಲ್ಲದೇ ದಾವಣಗೆರೆ, ಕೊಪ್ಪಳ ಜಿಲ್ಲೆಗಳಿಗೂ ಕೂಡಾ ವಿಸ್ತರಣೆಗೊಂಡು ಶೈಕ್ಷಣಿಕ ಸೇವೆಯಲ್ಲಿ ತೊಡಗಿಸಿಕೊಂಡು, ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದರು.

1924ರಲ್ಲಿ ಹೀರದ ಸೂಗಮ್ಮ ಕನ್ನಡ ಪ್ರಾಥಮಿಕ ಶಾಲೆ, 1942 ರಲ್ಲಿ ಶೆಟ್ರ ಗುರುಶಾಂತಪ್ಪ ಪ್ರೌಢಶಾಲೆ, 1945ರಲ್ಲಿ ವೀರಶೈವ ಮಹಾವಿದ್ಯಾಲಯ ಸ್ಥಾಪನೆಗೊಂಡು  ತದನಂತರ ವಿವಿಧ ಕೋರ್ಸ್‌ಗಳ ಕಾಲೇಜುಗಳು ಆರಂಭಿಸಲ್ಪಟ್ಟವು, ಶಿಕ್ಷಣ ಮಹಾವಿದ್ಯಾಲಯ, ಪದವಿ ಮಹಿಳಾ ಕಾಲೇಜ್‌, ಕಾನೂನು ಕಾಲೇಜ್‌ ಇಂಜಿನಿಯರಿಂಗ್‌ ಕಾಲೇಜ್‌, ಔಷಧೀಯ ವಿಜ್ಞಾನ ಕಾಲೇಜ್‌, ಪಾಲಿಟೆಕ್ನಿಕ್‌ ಕಾಲೇಜ್‌, ಮ್ಯಾನೇಜ್‌ಮೆಂಟ್‌ ಕಾಲೇಜ್‌ ಆರಂಭಿಸಿರುವ ಬಗ್ಗೆ ವಿವರಿಸಿದರು. 

ಆಧುನಿಕ, ಅತ್ಯಾಧುನಿಕ ಯುಗದ ಶೈಕ್ಷಣಿಕ ಅಗತ್ಯವಾದ ವೃತ್ತಿಪರ ಕೋರ್ಸ್‌ ಮತ್ತು ಸಂಘದ ಆಡಳಿತ ವ್ಯಾಪ್ತಿಯ 7 ಮಹಾವಿದ್ಯಾಲಯಗಳಲ್ಲಿ ಅನುದಾನ ರಹಿತ ಸ್ನಾತಕೋತ್ತರ ಪದವಿ ಕೇಂದ್ರಗಳನ್ನು ಆರಂಭಿಸಲಾಯಿತು ಎಂದು ಅಲ್ಲಂ ಬಸವರಾಜ್‌, ಉಡೇದ ಬಸವರಾಜ್‌ ತಿಳಿಸಿದರಲ್ಲದೇ, ವೀ.ವಿ ಸಂಘ ಶಿಶುವಿಹಾರದಿಂದ (ಎಲ್‌ಕೆಜಿಯಿಂದ) ಸ್ನಾತಕೋತ್ತರ ಪಡೆಯುವವರೆಗೆ (ಪಿಜಿವರೆಗೆ) ಜೀವಮಾನ ಪೂರ್ಣ ಶಿಕ್ಷಣವನ್ನು ನೀಡುವ ಮಹಾಕಾರ್ಯ ಪೂರೈಸಿದೆ ಎಂದು ಅವರು ಹೇಳಿದರು.

ಎರಡು ದಿನಗಳ ಸಮಾರಂಭಗಳಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ, ವಿಚಾರಗೋಷ್ಠಿ, ಉಪನ್ಯಾಸ, ಮನರಂಜನೆ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಸುದ್ದಿಗೋಷ್ಠಿಯಲ್ಲಿ ವೀ.ವಿ ಸಂಘದ ಜಂಟಿ ಕಾರ್ಯದರ್ಶಿ ಐಗೋಳ ಚಿದಾನಂದ, ಖಜಾಂಚಿ ಮುಂಡಾಸದ ಮುಪ್ಪಣ್ಣ, ಸ್ವಾಗತ ಸಮಿತಿಯ ಅಧ್ಯಕ್ಷ ಜಾನೆಕುಂಟೆ ಸಣ್ಣ ಬಸವರಾಜ ಸೇರಿದಂತೆ ಕಾರ್ಯಕಾರಿ ಮಂಡಳಿ ಸದಸ್ಯರು, ವೀವಿ ಸಂಘದ ಪ್ರಮುಖರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

High-Court

Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

v

Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್‌ ನ ಅನ್ನಪೂರ್ಣ

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

6-siruguppa

Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ban

Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.