ಚಿರತೆ ದಾಳಿಗೆ ಆಡುತ್ತಿದ್ದ ಮಗು ಬಲಿ!
Team Udayavani, Dec 12, 2018, 6:00 AM IST
ಕಂಪ್ಲಿ: ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಮೂರು ವರ್ಷದ ಮಗುವನ್ನು ಚಿರತೆ ಹೊತ್ತೂಯ್ದ ಘಟನೆ ಬಳ್ಳಾರಿ ಜಿಲ್ಲೆ ಕಂಪ್ಲಿ
ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ. ಮಗು ಹೊತ್ತೂಯ್ದ ಚಿರತೆಯನ್ನು ಗ್ರಾಮಸ್ಥರು
ಬೆನ್ನಟ್ಟಿದರೂ ಅದು ತಪ್ಪಿಸಿಕೊಂಡಿದ್ದು ಸಮೀಪದ ಗುಡ್ಡದಲ್ಲಿ ಬಾಲಕನ ಮೃತದೇಹ ಸಿಕ್ಕಿದೆ. ನಾಡೋಜ ದರೋಜಿ ಈರಮ್ಮ ಅವರ
ಮರಿ ಮೊಮ್ಮಗ ಅಶ್ವ ರಾಘವೇಂದ್ರ ಎಂಬುವವರ ಪುತ್ರ ಅಶ್ವ ವೆಂಕಟಸ್ವಾಮಿ ಚಿರತೆ ದಾಳಿಯಿಂದ ಮೃತಪಟ್ಟ ಬಾಲಕ.
ನಾಯಿ ಅಂದುಕೊಂಡರು: ಸೋಮಲಾಪುರ ಗ್ರಾಮದ ಸಮೀಪದಲ್ಲೇ ಗುಡ್ಡವೊಂದಿದ್ದು, ಇಲ್ಲಿ ಚಿರತೆ ಹಾಗೂ ಕರಡಿಗಳುವಾಸಿಸುತ್ತಿವೆ. ಮಂಗಳವಾರ ಸಂಜೆ ಸಹ ಗುಡ್ಡದಿಂದ ಕೆಳಗಿಳಿದ ಚಿರತೆ ಗ್ರಾಮಕ್ಕೆ ಬಂದಿದೆ. ಈ ವೇಳೆ ಮನೆಯ ಅಂಗಳದಲ್ಲಿ ಮಕ್ಕಳು ಆಟವಾಡುತ್ತಿದ್ದು, ಚಿರತೆ ಬಂದಿದ್ದು ಇವರ ಗಮನಕ್ಕೆ ಬಂದಿಲ್ಲ. ಅಲ್ಲದೆ ಬೀದಿ ನಾಯಿ ಮನೆಯ ಹತ್ತಿರ ಓಡಾಡುತ್ತಿದೆ ಎಂದೇ ಗ್ರಾಮಸ್ಥರು ಭಾವಿಸಿದ್ದಾರೆ. ಆದರೆ ಮನೆ ಅಂಗಳಕ್ಕೇ ಬಂದ ಚಿರತೆ ಬಾಲಕನ ಮೇಲೆ ಎರಗಿದ್ದು, ಕುತ್ತಿಗೆಗೆ ಬಾಯಿ ಹಾಕಿದೆ. ಆಗ ಬಾಲಕ ಕಿರುಚಿಕೊಂಡಿದ್ದು ಆಟವಾಡುತ್ತಿದ್ದವರೆಲ್ಲ ಹೆದರಿ ಓಡಿದ್ದಾರೆ. ಅಷ್ಟರಲ್ಲಿ ಚಿರತೆ ಬಾಲಕನನ್ನು ಹೊತ್ತೂಯ್ದಿದೆ. ಬಾಲಕ
ಕಿರುಚಿಕೊಂಡಿದ್ದರಿಂದ ಮನೆಯವರು ಓಡಿ ಬಂದಾಗ ಚಿರತೆ ಬಂದಿದ್ದು ತಿಳಿದಿದೆ. ತಕ್ಷಣ ಗ್ರಾಮಸ್ಥರು ಚಿರತೆಯನ್ನು ಬೆನ್ನಟ್ಟಿದ್ದಾರೆ.
ಆದರೆ ಗುಡ್ಡ ಸೇರಿದ ಚಿರತೆ ಬಾಲಕನ ರಕ್ತ ಹೀರಿ ಮೃತದೇಹ ಬಿಟ್ಟು ನಾಪತ್ತೆಯಾಗಿದೆ. ಚಿರತೆಗಾಗಿ ಗುಡ್ಡದಲ್ಲಿ ಹುಡುಕಾಡಿದಾಗ
ಮಗುವಿನ ಮೃತ ದೇಹ ಪತ್ತೆಯಾಗಿದೆ. ಕಂಪ್ಲಿ ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
ಹೊಸ ವರ್ಷಾಚರಣೆಗೆ ಡ್ರಗ್ಸ್ ಪಾರ್ಟಿ: ಪೊಲೀಸ್ ನಿಗಾ
Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.