ಮಕ್ಕಳಲ್ಲಿ ವ್ಯವಹಾರ ಜ್ಞಾನದ ಅರಿವು ಅಗತ್ಯ
Team Udayavani, Dec 18, 2018, 4:56 PM IST
ಸಂಡೂರು: ಮಕ್ಕಳಲ್ಲಿ ಪ್ರತಿಯೊಂದು ರೀತಿಯ ಕ್ರಿಯಾಶೀಲತೆ ಹೊರ ತರಬೇಕು. ಇಂದಿನ ಎಲ್ಲಾ ರೀತಿಯ ವಹಿವಾಟು, ವ್ಯವಹಾರ ಜ್ಞಾನ ತಿಳಿಯಬೇಕು ಎಂಬ ಉದ್ದೇಶದಿಂದ ಮಕ್ಕಳ ಸಂತೆ ಮತ್ತು ಖಾದ್ಯ ಮೇಳ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಆಡಳಿತಾಧಿಕಾರಿ ಕುಮಾರ್ ಎಸ್.ನಾನಾವಟೆ ತಿಳಿಸಿದರು.
ಪಟ್ಟಣದ ಶ್ರೀಶೈಲೇಶ್ವರ ಸಿಬಿಎಸ್‌ಸಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಖಾದ್ಯ-ಮೇಳ ಮತ್ತು ಮಕ್ಕಳ ಸಂತೆ
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ವ್ಯಾವಹಾರಿಕ ಜ್ಞಾನ ಹೆಚ್ಚಿಸುವಲ್ಲಿ ಹಾಗೂ
ಮಾರುಕಟ್ಟೆಯಲ್ಲಿನ ಬಂಡವಾಳ, ಲಾಭ ಹಾಗೂ ನಷ್ಟಗಳ ಬಗ್ಗೆ ಸಾಮಾನ್ಯ ಜ್ಞಾನ ಪಡೆಯುವಲ್ಲಿ ಇಂತಹ ಮೇಳಗಳು
ಬಹುಮುಖ್ಯ ಪಾತ್ರ ವಹಿಸುತ್ತವೆ. ಅಲ್ಲದೇ ಹಣದ ಮೌಲ್ಯವೂ ಸಹ ವಿದ್ಯಾರ್ಥಿಗಳಿಗೆ ತಿಳಿಯುವುದರಿಂದ ಅನಾವಶ್ಯಕ
ಖರ್ಚುಗಳಿಂದ ವಿದ್ಯಾರ್ಥಿಗಳು ದೂರ ಉಳಿಯಲು ಸಾಧ್ಯವಾಗುತ್ತದೆ ಎಂದರು.
ಮಕ್ಕಳು ಸ್ವತಃ ವಿವಿಧ ರೀತಿಯ ಖಾದ್ಯ ತಯಾರು ಮಾಡಿ ಅದಕ್ಕೆ ತಗಲುವ ವೆಚ್ಚ ನೋಡಿಕೊಂಡು ತಮ್ಮ ಸಹಪಾಟಿಗಳಿಗೆ ಮಾರಾಟ ಮಾಡುವ ಮೂಲಕ ಅದರಿಂದ ಸಿಗುವ ಸಂತಸ ಬಹು ಅಮೂಲ್ಯವಾಗಿದೆ.ಆದ್ದರಿಂದ ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕೆಂದರು. ವಿದ್ಯಾರ್ಥಿಗಳು ತರಕಾರಿ, ಹಣ್ಣು ಹಂಪಲು, ಸೊಪ್ಪು, ಹಲವಾರು ಬಗೆಯ ತಿಂಡಿ ತಿನಿಸು ಪ್ರದರ್ಶಿಸುತ್ತಾ ಹಾಗೂ ಮಾರಾಟ ಮಾಡಿದರು. ಪಾಲಕರು ಖರೀದಿಸಿ ಸಂತಸಪಟ್ಟರು. ಮುಖ್ಯವಾಗಿ ಪೀಜಾ, ಬರ್ಗರ್, ಪಾನಿಪೂರಿ, ಹಸಿ ತರಕಾರಿಯ ತಿಂಡಿಗಳು, ವಿವಿಧ ಮೊಳಕೆ ಕಾಳುಗಳು, ಹಣ್ಣುಗಳ ತಿನಿಸುಗಳನ್ನು ತಯಾರಿಸಿ ಮಾರಾಟ ಮಾಡಿ, ತಾವು ಸವಿದು ಸಂತಸ ಪಟ್ಟರೆ, ಪಾಲಕರು ಅವರಿಂದ ಕೊಂಡು ತಮ್ಮ ಮಕ್ಕಳು ಕಷ್ಟಪಟ್ಟು ಮಾಡಿದ ತಿನಿಸುಗಳನ್ನು ತಿಂದು ಖುಷಿಪಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.