ಮತ್ತೊಮ್ಮೆ ಗಡಿಯಾರ ಕಂಬ ತೆರವು; ಕಾಂಗ್ರೆಸ್‌ ಸದಸ್ಯರ ವಿರೋಧ

3 ಲಕ್ಷ ರೂ. ಮೌಲ್ಯದ ನಾಲ್ಕು ಗಡಿಯಾರಗಳು ಇದ್ದವು. ಅವೆಲ್ಲವನ್ನೂ ಧ್ವಂಸಗೊಳಿಸಲಾಗಿದೆ

Team Udayavani, Aug 25, 2022, 2:55 PM IST

ಮತ್ತೊಮ್ಮೆ ಗಡಿಯಾರ ಕಂಬ ತೆರವು; ಕಾಂಗ್ರೆಸ್‌ ಸದಸ್ಯರ ವಿರೋಧ

ಬಳ್ಳಾರಿ: ಗಡಗಿ ಚನ್ನಪ್ಪ ವೃತ್ತದಲ್ಲಿನ “ಗಡಿಯಾರ ಗೋಪುರ’ ಮತ್ತೂಮ್ಮೆ ವಿವಾದಕ್ಕೀಡಾಗಿದೆ. ದಶಕದ ಹಿಂದೆ ವೃತ್ತದಲ್ಲಿದ್ದ ಹಿಂದಿನ ಹಳೆಯ ಗಡಿಯಾರ ಗೋಪುರವನ್ನು ರಾತ್ರೋರಾತ್ರಿ ಧ್ವಂಸಗೊಳಿಸಿದ್ದು, ಇದೀಗ ಆ ಸ್ಥಳದಲ್ಲಿ ಹೊಸದಾಗಿ ನಿರ್ಮಿಸಿದ್ದ “ಗಡಿಯಾರ ಗೋಪುರ’ವನ್ನು ಸಹ ಮಂಗಳವಾರ ರಾತ್ರಿ ತೆರವುಗೊಳಿಸಲಾಗಿದೆ. ಲೆಬನಾನ್‌ ಮಾದರಿಯಲ್ಲಿ 140 ಅಡಿ ಎತ್ತರದ ಗಡಿಯಾರ ಗೋಪುರವನ್ನು ಪುನಃ ಹೊಸದಾಗಿ ನಿರ್ಮಾಣಕ್ಕೆ ಮುಂದಾಗಿರುವುದು ಈ ವಿವಾದಕ್ಕೆ ಕಾರಣವಾಗಿದ್ದು, ಪಾಲಿಕೆ ಸದಸ್ಯರಿಂದ ವಿರೋಧ ವ್ಯಕ್ತವಾಗಿದೆ.

ಸಾರಿಗೆ, ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು, ನಗರ ಶಾಸಕ ಜಿ.ಸೋಮಶೇಖರರೆಡ್ಡಿಯವರು ಈಗಾಗಲೇ ಘೋಷಿಸಿದಂತೆ ಗಡಗಿ ಚನ್ನಪ್ಪ ವೃತ್ತದಲ್ಲಿ 7
ಕೋಟಿ ರೂ. ವೆಚ್ಚದಲ್ಲಿ 140 ಅಡಿ ಎತ್ತರದ ಅತ್ಯಾಧುನಿಕ ಗಡಿಯಾರ ಗೋಪುರ ನಿರ್ಮಾಣಕ್ಕೆ ಕಳೆದ ಆ.15ರಂದು ಭೂಮಿಪೂಜೆ ನೆರವೇರಿಸಿದ್ದು, ಮಂಗಳವಾರ ರಾತ್ರಿ ವೃತ್ತದಲ್ಲಿದ್ದ ಗಡಿಯಾರ ಗೋಪುರವನ್ನು ತೆರವುಗೊಳಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆದರೆ, ಈ ಕುರಿತು ಪಾಲಿಕೆ ಅನುಮತಿ ಪಡೆದಿಲ್ಲ ಎಂದು ಆರೋಪಿಸಿರುವ ಪಾಲಿಕೆ ಸದಸ್ಯರು, ಮಂಗಳವಾರ ಮಧ್ಯರಾತ್ರಿಯಿಂದ ವೃತ್ತದಲ್ಲಿ ಬೆಳಗ್ಗೆವರೆಗೆ ಧರಣಿ ನಡೆಸಿದರು. ಗಡಗಿ ಚನ್ನಪ್ಪ
ವೃತ್ತದಲ್ಲಿ 1964ರಲ್ಲಿ ನಿರ್ಮಿಸಿದ್ದ ಹಿಂದಿನ ಹಳೆಯ ಗಡಿಯಾರ ಗೋಪುರ ತನ್ನದೇ ಆದ ಹಿನ್ನೆಲೆ ಹೊಂದಿತ್ತು.

ಅಂಥ ಗಡಿಯಾರ ಗೋಪುರವನ್ನು ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ 2009, ಜೂನ್‌ 21ರಂದು ರಾತ್ರೋರಾತ್ರಿ ಧ್ವಂಸಗೊಳಿಸಿ ಮಾಯ ಮಾಡಲಾಗಿತ್ತು. ಅಂದು ಈ ಕುರಿತು ಗಾಂಧಿ ನಗರ ಠಾಣೆಯಲ್ಲಿ ಸುಮೋಟೊ ಪ್ರಕರಣ ದಾಖಲಾಗಿತ್ತಾದರೂ, ಧ್ವಂಸಗೊಳಿಸಿದವರು ಯಾರು? ಏತಕ್ಕೆ ಧ್ವಂಸಗೊಳಿಸಿದ್ದಾರೆ? ಎಂಬುದು ತನಿಖೆಯಾಗಿಲ್ಲ.

ಈವರೆಗೂ ಪತ್ತೆಯಾಗದೆ ನಿಗೂಢವಾಗಿದೆ. ಆ ಕುರಿತು ಮೊದಲು ಕ್ಲಿಯರೆನ್ಸ್‌ ಪಡೆಯಬೇಕು ಎಂದು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ಪ್ರೊಸಿಡಿಂಗ್ಸ್‌ನಲ್ಲೂ ಸೇರಿಸಲಾಗಿದೆ. ನಂತರ ಹಾಲಿ ಇರುವ ಗಡಿಯಾರ ಕಂಬವನ್ನು ತೆರವುಗೊಳಿಸುವಂತೆ ಸೂಚಿಸಲಾಗಿದೆ.

ಆದರೆ, ಇದ್ಯಾವುದನ್ನೂ ಮಾಡದೆ, ಪಾಲಿಕೆ ಮೇಯರ್‌, ಉಪಮೇಯರ್‌, 26 ಸದಸ್ಯರಿಗೆ ಯಾವುದೇ ಮಾಹಿತಿ ನೀಡದೆ, ಸಚಿವ, ಶಾಸಕರು ಗಡಿಯಾರ ಗೋಪುರವನ್ನು ತೆರವುಗೊಳಿಸಿದ್ದಾರೆ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಿ.ಎಸ್‌.ಮಹ್ಮದ್‌ ರಫೀಕ್‌, ಪ್ರಚಾರ ಸಮಿತಿ ಅಧ್ಯಕ್ಷ ಜೆ.ಎಸ್‌. ಆಂಜನೇಯಲು, ಪಾಲಿಕೆ ಸಭಾ ಮುಖ್ಯಸ್ಥ ಆರೋಪಿಸಿದ್ದಾರೆ. ನಗರದ ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ.

ಹೊಸದಾಗಿ ಗಡಿಯಾರ ಗೋಪುರವನ್ನು ನಿರ್ಮಿಸುವುದಾದರೆ ಪಾಲಿಕೆಯ ಎಲ್ಲ ಸದಸ್ಯರಿಗೂ ಮಾಹಿತಿ ನೀಡಿ ಎಂದು ಅಸಮಧಾನ ವ್ಯಕ್ತಪಡಿಸಿದ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಿ.ಎಸ್‌.ಮಹ್ಮದ್‌ ರಫೀಕ್‌, ಚೆನ್ನಾಗಿ ಸುಸಜ್ಜಿತವಾಗಿರುವ ಗಡಿಯಾರ ಕಂಬವನ್ನು ಬೇರೆ ವೃತ್ತಕ್ಕಾದರೂ ಸ್ಥಳಾಂತರಿಸಬಹುದಿತ್ತು. ಅದನ್ನು ಮಾಡಿಲ್ಲ. ಗಡಿಯಾರದಲ್ಲಿ ಸುಮಾರು 3 ಲಕ್ಷ ರೂ. ಮೌಲ್ಯದ ನಾಲ್ಕು ಗಡಿಯಾರಗಳು ಇದ್ದವು. ಅವೆಲ್ಲವನ್ನೂ ಧ್ವಂಸಗೊಳಿಸಲಾಗಿದೆ ಎಂದು ಆರೋಪಿಸಿದರು.

ಬಳಿಕ 11.30ಗಂಟೆ ಸುಮಾರಿಗೆ ನಗರದ ಡಿಸಿ ಕಚೇರಿ ಆವರಣದಲ್ಲಿ ಜಮಾಯಿಸಿದ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು, ಜಿಲ್ಲಾಧಿಕಾರಿ ಪವನ್‌ಕುಮಾರ್‌ ಮಾಲಪಾಟಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಧರಣಿ ಯಲ್ಲಿ ಪಾಲಿಕೆ ಸದಸ್ಯರಾದ ಎಂ. ಪ್ರಭಂಜನ್‌ ಕುಮಾರ್‌, ಮುಲ್ಲಂಗಿ ನಂದೀಶ್‌, ಮಿಂಚು ಶ್ರೀನಿವಾಸ್‌, ರಾಜಶೇಖರ್‌, ಮುಖಂಡರಾದ ಜಗನ್ನಾಥ, ಡಿ. ಸೂರಿ, ಶಿವರಾಜ್‌, ಮಾಜಿ ಸದಸ್ಯೆ ಪರ್ವಿನ್‌ ಬಾನು, ಕುಮಾರಮ್ಮ ಇದ್ದರು. ಪಾಲಿಕೆ ಸದಸ್ಯ ಇಬ್ರಾಹಿಂ ಬಾಬು, ಮೋತ್ಕರ್‌ ಶ್ರೀನಿವಾಸ್‌, ವೀರಶೇಖರರೆಡ್ಡಿ ಇದ್ದರು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

v

Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್‌ ನ ಅನ್ನಪೂರ್ಣ

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

6-siruguppa

Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Power-Cable

Bantwala: ಬಿ.ಸಿ.ರೋಡಿನಲ್ಲಿ ರೈಲ್ವೇಯ ವಿದ್ಯುತ್‌ ಕೇಬಲ್‌ ಕಳವು

police

Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್‌ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.