ಸಭೆ ಬಹಿಷ್ಕರಿಸಿದ ಕಾಂಗ್ರೆಸ್‌ ಸದಸ್ಯರು

ಕೋರಂ ಕೊರತೆ-ಸಭೆ ಮುಂದೂಡಿದ ಅಧ್ಯಕ್ಷರು! ­ಅನುದಾನ ಸಮರ್ಪಕ ಹಂಚಿಕೆಯಾಗಿಲ್ಲ: ಆರೋಪ

Team Udayavani, Mar 26, 2021, 9:32 PM IST

congress

ಬಳ್ಳಾರಿ: ಅನುದಾನ ಸಮರ್ಪಕ ಹಂಚಿಕೆಯಾಗಿಲ್ಲ, ನೂತನ ಸಭಾಂಗಣವನ್ನು ಉದ್ಘಾಟಿಸಿದರೂ ಸಭೆ ಏಕೆ ನಡೆಸುತ್ತಿಲ್ಲ ಎಂದು ಕಾಂಗ್ರೆಸ್‌ನ ಕೆಲ ಜಿಪಂ ಸದಸ್ಯರು ಪಟ್ಟು ಹಿಡಿದು ಸಭೆಯನ್ನು ಬೈಕಾಟ್‌ ಮಾಡಿದ ಹಿನ್ನೆಲೆಯಲ್ಲಿ ಕೋರಂ ಕೊರತೆಯಿಂದ ಸಭೆಯನ್ನು ಮುಂದೂಡಲಾಯಿತು.

ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ 13ನೇ ಸಾಮಾನ್ಯ ಸಭೆಯಲ್ಲಿ ನಡಯಬೇಕಿತ್ತು. ಆದರೆ, ಸಭೆ ಆರಂಭವಾಗುತ್ತಿದ್ದಂತೆ ಜಿಪಂ ಸದಸ್ಯರಾದ ನಾರಾ ಭರತ್‌ರೆಡ್ಡಿ, ಅಲ್ಲಂ ಪ್ರಶಾಂತ್‌, ಎ.ಮಾನಯ್ಯ, ವಿಶ್ವನಾಥ್‌ ಸೇರಿ ಹಲವು ಸದಸ್ಯರು ಅನುದಾನ ಸಮರ್ಪಕವಾಗಿ ಹಂಚಿಕೆಯಾಗಿಲ್ಲ. ಜಿಪಂನ ನೂತನ ಸಭಾಂಗಣವನ್ನು ಉದ್ಘಾಟಿಸಿದರೂ, ಅದರಲ್ಲಿ ಸಾಮಾನ್ಯ ಸಭೆ ಏಕೆ ನಡೆಸುತ್ತಿಲ್ಲ ಪ್ರಶ್ನಿಸಿದರು. ಕಳೆದ ಸಭೆಯಲ್ಲೇ ಮುಂದಿನ ಸಭೆಯನ್ನು ನೂತನ ಸಭಾಂಗಣದಲ್ಲಿ ನಡೆಸಬೇಕು ಎಂದು ತಿಳಿಸಲಾಗಿತ್ತು. ಆದರೆ, ನೂತನ ಸಭಾಂಗಣವನ್ನು ಉದ್ಘಾಟಿಸಿ ಪುನಃ ಹಳೆಯ ಸಭಾಂಗಣದಲ್ಲೇ ಸಭೆಯನ್ನು ನಡೆಸುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ, ನೂತನ ಸಭಾಂಗಣದಲ್ಲಿ ಮೈಕ್‌ ವ್ಯವಸ್ಥೆ ಆಗಿಲ್ಲ. ಶೌಚಾಲಯ ವ್ಯವಸ್ಥೆ ಇಲ್ಲ. ಬೋರ್ಡ್‌ ಸಹ ಸಿದ್ದವಾಗಿಲ್ಲ. ಹಾಗಾಗಿ ಇದೊಂದು ಸಭೆಯನ್ನು ಹಳೆಯ ಸಭಾಂಗಣದಲ್ಲೇ ನಡೆಸುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದರು. ಹಾಗಾದರೆ ಈ ಸಭೆಯನ್ನು ನಾವೆಲ್ಲರು ಬೈಕಾಟ್‌ ಮಾಡುತ್ತೇವೆ. ಇನ್ನೊಮ್ಮೆ ಸಭೆಗೆ ಕರೆಯುವುದಾದರೆ ಹೊಸ ಸಭಾಂಗಣದಲ್ಲೇ ಕರೆಯಿರಿ ಎಂದು ಸಭೆಯಿಂದ ಹೊರನಡೆದರು. ಸದಸ್ಯರನ್ನು ಸಮಾಧಾನ ಪಡಿಸಲು ನಡೆಸಿದ ಎಲ್ಲ ಪ್ರಯತ್ನಗಳು ವಿಫಲವಾದವು. ಇದರಿಂದ ಸಭೆ ನಡೆಯಲು ಬೇಕಿದ್ದ 38 ಸದಸ್ಯರ ಪೈಕಿ 32 ಸದಸ್ಯರು ಮಾತ್ರ ಸಹಿ ಮಾಡಿದ್ದು, ಕೋರಂ ಕೊರತೆಯಾಗಿದ್ದರಿಂದ ಸಭೆಯನ್ನು ಮುಂದೂಡುವುದಾಗಿ ಅಧ್ಯಕ್ಷೆ ಭಾರತಿ ತಿಮ್ಮಾರಡ್ಡಿ ಘೋಷಿಸಿದರು. ಸಭಾಂಗಣ ನಿರ್ಮಾಣಕ್ಕೆ 110 ಲಕ್ಷ ರೂ ಅನುದಾನ ಕೊರತೆ ಇತ್ತು. ಆದರೂ ಜಿಲ್ಲಾ ಕಾರಿಗಳ ಸಹಕಾರದಿಂದ ಸರ್ಕಾರದಿಂದ ಅನುದಾನ ತಂದು ಮಾಡಲಾಗಿದೆ. ಕೆಲ ಕಾಮಗಾರಿ ಬಾಕಿ ಇದೆ. ಮುಗಿದ ತಕ್ಷಣ, ಅಧ್ಯಕ್ಷರು ಹೇಳಿದಾಗ ಮತ್ತೆ ಸಭೆ ಕರೆಯಲಾಗುವುದು ಸಿಇಒ ನಂದಿನಿ ಹೇಳಿದರು. ಗೊಂದಲದಲ್ಲೇ ಆರಂಭ, ಮುಕ್ತಾಯ: ಜಿಪಂ 13ನೇ ಸಾಮಾನ್ಯ ಸಭೆಯನ್ನು ಹೇಗಾದರೂ ಮಾಡಿ ನಡೆಬೇಕು ಎಂದು ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿಯವರು ಪ್ರಯತ್ನಿಸಿದರೂ, ಕಾಂಗ್ರೆಸ್‌ನ ಕೆಲ ಸದಸ್ಯರ ಅಸಹಕಾರದಿಂದ ಸಾಧ್ಯವಾಗಲಿಲ್ಲ.

ಗೊಂದಲದಲ್ಲಿ ಸಭಾಂಗಣ ಉದ್ಘಾಟನೆ ಮತ್ತು ಸಭೆಯನ್ನು ಏಕೆ ಕರೆದಿದ್ದೀರಿ ಎಂದು ಸದಸ್ಯರೊಬ್ಬರು ಪ್ರಶ್ನಿಸಿದಾಗ, ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿಯವರು ನಾನು ಗೊಂದಲದಲ್ಲೇ ಅಧ್ಯಕ್ಷೆ ಆಗಿದ್ದೇನೆ. ಗೊಂದಲದಲ್ಲೇ ಅವ  ಮುಗಿಸುತ್ತೇನೆ ಎಂದು ಚಟಾಕಿ ಹಾರಿಸಿದರು. ಇದಕ್ಕೆ ಸಭೆಯಲ್ಲಿದ್ದ ಹಲವು ಸದಸ್ಯರು ನಕ್ಕರು.

ಟಾಪ್ ನ್ಯೂಸ್

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ

Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ

‌Viral Video: ಟಿಕ್‌ಟಾಕ್‌ ಸ್ಟಾರ್‌ ಬಳಿಕ ಮತ್ತೊಬ್ಬ ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್

‌Viral Video: ಟಿಕ್‌ಟಾಕ್‌ ಸ್ಟಾರ್‌ ಬಳಿಕ ಮತ್ತೊಬ್ಬ ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್

Kharge’s RSS statement for Muslim appeasement: KS Eshwarappa criticizes

Shimoga: ಮುಸ್ಲಿಂ ಸಂತೃಪ್ತಿಗೆ ಖರ್ಗೆ ಆರ್‌ ಎಸ್‌ಎಸ್ ಹೇಳಿಕೆ: ಈಶ್ವರಪ್ಪ ಟೀಕೆ

16-roopa

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ… ನಕ್ಸಲ್‌ ಎನ್‌ಕೌಂಟರ್‌ ಬಗ್ಗೆ ಡಿಐಜಿ ಹೇಳಿದ್ದೇನು ?

14-sky

Subramanya: ಕುಕ್ಕೆಗೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ದಂಪತಿ ಭೇಟಿ

Hospital: ಭಾನುವಾರ ಉದ್ಘಾಟನೆಗೊಂಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸೋಮವಾರವೇ ಬಿತ್ತು ಬೀಗ

Surat: ಭಾನುವಾರ ಉದ್ಘಾಟನೆಗೊಂಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸೋಮವಾರವೇ ಬಿತ್ತು ಬೀಗ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kharge’s RSS statement for Muslim appeasement: KS Eshwarappa criticizes

Shimoga: ಮುಸ್ಲಿಂ ಸಂತೃಪ್ತಿಗೆ ಖರ್ಗೆ ಆರ್‌ ಎಸ್‌ಎಸ್ ಹೇಳಿಕೆ: ಈಶ್ವರಪ್ಪ ಟೀಕೆ

16-roopa

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ… ನಕ್ಸಲ್‌ ಎನ್‌ಕೌಂಟರ್‌ ಬಗ್ಗೆ ಡಿಐಜಿ ಹೇಳಿದ್ದೇನು ?

13(2)

Udupi: ಈಶ್ವರನಗರ-ಪರ್ಕಳ ರಸ್ತೆಯ ಹೊಂಡಗಳಿಗೆ ಕೊನೆಗೂ ತೇಪೆ

12

Udupi: ವಿಸಿಲ್‌ ಹೊಡೆದು, ಕೈ ಸನ್ನೆಯಲ್ಲೇ ಟ್ರಾಫಿಕ್‌ ನಿರ್ವಹಣೆ!

11

Padubidri: ನಿಧಾನವಾಗಿ ಚಲಿಸಿ, ಹೆದ್ದಾರಿ ಕಾಮಗಾರಿ ನಡೆಯುತ್ತಿದೆ!

MUST WATCH

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

ಹೊಸ ಸೇರ್ಪಡೆ

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ

Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ

‌Viral Video: ಟಿಕ್‌ಟಾಕ್‌ ಸ್ಟಾರ್‌ ಬಳಿಕ ಮತ್ತೊಬ್ಬ ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್

‌Viral Video: ಟಿಕ್‌ಟಾಕ್‌ ಸ್ಟಾರ್‌ ಬಳಿಕ ಮತ್ತೊಬ್ಬ ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್

Kharge’s RSS statement for Muslim appeasement: KS Eshwarappa criticizes

Shimoga: ಮುಸ್ಲಿಂ ಸಂತೃಪ್ತಿಗೆ ಖರ್ಗೆ ಆರ್‌ ಎಸ್‌ಎಸ್ ಹೇಳಿಕೆ: ಈಶ್ವರಪ್ಪ ಟೀಕೆ

16-roopa

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ… ನಕ್ಸಲ್‌ ಎನ್‌ಕೌಂಟರ್‌ ಬಗ್ಗೆ ಡಿಐಜಿ ಹೇಳಿದ್ದೇನು ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.