ಪಾಲಿಕೆ ಕೈ ಸದಸ್ಯರು ರೆಸಾರ್ಟ್‌ಗೆ ಶಿಫ್ಟ್
| ಆಪರೇಷನ್ ಕಮಲದ ಭೀತಿ | ಬಳ್ಳಾರಿಯಿಂದ ಬಸ್‌ನಲ್ಲಿ ತೆರಳಿದ ಕಾಂಗ್ರೆಸ್ 21, ಪಕ್ಷೇತರ 4 ಸದಸ್ಯರು |
Team Udayavani, Mar 17, 2022, 5:02 PM IST
ಬಳ್ಳಾರಿ: ಇಲ್ಲಿನ ಬಳ್ಳಾರಿ ಮಹಾನಗರ ಪಾಲಿಕೆಗೆ ಹತ್ತು ತಿಂಗಳ ಬಳಿಕ ಮೇಯರ್-ಉಪಮೇಯರ್, ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಗೆ ಮಾ.19ಕ್ಕೆ ಚುನಾವಣೆ ನಿಗದಿಯಾಗಿದೆ ಎಂದು ಕಾಂಗ್ರೆಸ್ ಸದಸ್ಯರು ನಿಟ್ಟುಸಿರು ಬಿಟ್ಟ ಬೆನ್ನಲ್ಲೇ ಆಪರೇಷನ್ ಕಮಲ ಹುಟ್ಟಿಸಿದ ಭೀತಿಯಿಂದ ಸದಸ್ಯರೆಲ್ಲರೂ ಬುಧವಾರ ಬೆಂಗಳೂರಿಗೆ ತೆರಳಿದ್ದು, ಮೇಯರ್ ಚುನಾವಣೆ ಗೋಲ್ಡ್ ಪಿಂಚ್ ರೆಸಾರ್ಟ್‌ಗೆ ಶಿಫ್ಟ್ ಆಗಿದೆ. ತೀವ್ರ ಪೈಪೋಟಿ ಏರ್ಪಟ್ಟಿರುವ ಮೇಯರ್ -ಉಪಮೇಯರ್ ಸ್ಥಾನಗಳಿಗೂ ಅಧಿಕೃತ ಅಭ್ಯರ್ಥಿಗಳನ್ನು ಕೆಪಿಸಿಸಿ ಅಧ್ಯಕ್ಷರ ಸಮ್ಮುಖದಲ್ಲೇ ಆಯ್ಕೆಯಾಗುವ ಸಾಧ್ಯತೆಯಿದೆ.
ನಗರದ ಅನಂತಪುರ ರಸ್ತೆಯಲ್ಲಿನ ಖಾಸಗಿ ಸಭಾಂಗಣವೊಂದರಲ್ಲಿ ಸೇರಿದ ಪಾಲಿಕೆಯ ಕಾಂಗ್ರೆಸ್ 21, ಪಕ್ಷೇತರ 4 ಸೇರಿ ಒಟ್ಟು 25 ಸದಸ್ಯರು ಬೂರಿ ಭೋಜನ ಸವೆದರು. ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಜಿಲ್ಲಾಧ್ಯಕ್ಷ ಜಿ.ಎಸ್.ಮಹ್ಮದ್ ರಫೀಕ್ ಅವರು, ಸದಸ್ಯರೆಲ್ಲರನ್ನು ಹವಾನಿಯಂತ್ರಿತ ಬಸ್ ಹತ್ತಿಸಿ, ಕೆಪಿಸಿಸಿ ಅಧ್ಯಕ್ಷ ಜೆ.ಎಸ್.ಆಂಜನೇಯಲು, ಮಾಜಿ ಮೇಯರ್ ವೆಂಕಟರಮಣ ಅವರೊಂದಿಗೆ ಬೀಳ್ಕೊಟ್ಟರು. ಮಹಿಳಾ ಸದಸ್ಯರೊಂದಿಗೆ ಅವರ ಪತಿಯವರು, ಸಹೋದರರು, ಪೋಷಕರು ಸಹ ರೆಸಾರ್ಟ್‌ಗೆ ತೆರಳಿ ಕುತೂಹಲ ಮೂಡಿಸಿದ್ದಾರೆ. ಕಾಂಗ್ರೆಸ್ ಸದಸ್ಯರನ್ನೆಲ್ಲ ಹಿಡಿದಿಟ್ಟುಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾರ್ಗದರ್ಶನದಂತೆ ಎಲ್ಲರನ್ನೂ ಬೆಂಗಳೂರಿಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ಮೇಯರ್-ಉಪಮೇಯರ್‌ಗೆ ಅಭ್ಯರ್ಥಿ ಆಯ್ಕೆ
ಈ ಮೊದಲು ಪಾಲಿಕೆ ಮೇಯರ್ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಆಗ 18ನೇ ವಾರ್ಡ್ ಮುಲ್ಲಂಗಿ ನಂದೀಶ್ ಕುಮಾರ್, 30ನೇ ವಾರ್ಡ್ ಮಹ್ಮದ್ ಆಸೀಫ್, 23ನೇ ವಾರ್ಡ್ ಪಿ.ಗಾದೆಪ್ಪ ಸೇರಿ ಹಲವರು ಪ್ರಭಲ ಆಕಾಂಕ್ಷಿಯಾಗಿದ್ದರು. ಇದರಿಂದ ಮುಲ್ಲಂಗಿ ನಂದೀಶ್ ಕುಮಾರ್ ಅವರೊಂದಿಗೆ 11ಕ್ಕೂ ಹೆಚ್ಚು ಸದಸ್ಯರು, ಆಸೀಫ್ ಅವರೊಂದಿಗೆ 5ಕ್ಕೂ ಹೆಚ್ಚು ಸದಸ್ಯರು ಗುರುತಿಸಿಕೊಂಡಿದ್ದರು. ಆದರೆ, ಬದಲಾದ ಮೀಸಲಾತಿಯಿಂದ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಆಕಾಂಕ್ಷಿಗಳ ಲೆಕ್ಕಾಚಾರ ತಲೆಕೆಳಗಾಗಿದೆ. ಈ ಪೈಕಿ ಕೆಲವರು ಉಪಮೇಯರ್ ಸ್ಥಾನದ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗುತ್ತಿದೆ. ಬದಲಾದ ಮೀಸಲಾತಿಯಿಂದ ಮೇಯರ್ ಸ್ಥಾನಕ್ಕೂ ಹಲವು ಮಹಿಳಾ ಸದಸ್ಯರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. 39ನೇ ವಾರ್ಡ್ ನ ಶಶಿಕಲಾ ಜಗನ್ನಾಥ್, 34ನೇ ವಾರ್ಡ್‌ನ ರಾಜೇಶ್ವರಿ ಸುಬ್ಬರಾಯುಡು, 6ನೇ ವಾರ್ಡ್ ನ ಪದ್ಮರೋಜಾ ವಿವೇಕಾನಂದ, ಸುಕುಂ ಸೇರಿ ಹಲವರು ಆಕಾಂಕ್ಷಿಗಳಾಗಿದ್ದಾರೆ. ಹಾಗಾಗಿ ಯಾರನ್ನು ಆಯ್ಕೆ ಮಾಡಬೇಕು ಎಂಬುದು ಪಕ್ಷದ ಜಿಲ್ಲಾ ಮುಖಂಡರಾದ ಶಾಸಕರಾದ ನಾಗೇಂದ್ರ, ಅಲ್ಲಂ ವೀರಭದ್ರಪ್ಪ, ಸಂಸದ ನಾಸೀರ್ ಹುಸೇನ್ ಅವರ ಸಲಹೆ, ಸದಸ್ಯರ ಅಭಿಪ್ರಾಯಗಳನ್ನು ಸಂಗ್ರಹಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುತ್ತದೆ ಎನ್ನಲಾಗುತ್ತಿದ್ದು ಕಾದು ನೋಡಬೇಕಿದೆ.
ಮೇಯರ್ ಆಕಾಂಕ್ಷಿಗಳ ಉಪಮೇಯರ್ ಪೈಪೋಟಿ
ಈ ಹಿಂದೆ ಮೇಯರ್ ಸ್ಥಾನಕ್ಕೆ ತೀವ್ರ ಪೈಪೋಟಿ ಒಡ್ಡಿದ್ದ ಮುಲ್ಲಂಗಿ ನಂದೀಶ್ ಕುಮಾರ್, ಪಿ.ಗಾದೆಪ್ಪ ಇದೀಗ ಉಪಮೇಯರ್ ಸ್ಥಾನಕ್ಕೂ ಇಬ್ಬರ ನಡುವೆ ಪೈಪೋಟಿ ನಡೆಸುತ್ತಿದ್ದಾರೆ. ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ 23ನೇ ವಾರ್ಡ್‌ನ ಗಾದೆಪ್ಪ ಒಬ್ಬರೇ ಉಪಮೇಯರ್ ಸ್ಥಾನವನ್ನು ತಮಗೆ ನೀಡುವಂತೆ ಕೋರಿದ್ದರು. ಆದರೀಗ ಬದಲಾದ ಮೀಸಲಾತಿಯಿಂದಾಗಿ ಮುಲ್ಲಂಗಿ ನಂದೀಶ್ ಅವರು ಸಹ ಪ್ರಬಲ ಆಕಾಂಕ್ಷಿಯಾಗಿದ್ದು, ವರಿಷ್ಠರ ಮುಂದೆ ತಮ್ಮ ಬೇಡಿಕೆ ಇಟ್ಟಿದ್ದಾರಂತೆ ಎಂದು ತಿಳಿದು ಬಂದಿದೆ.
ಮೇಯರ್ ಕೊಡಿ
ಮುಸ್ಲಿಂ ಸಮುದಾಯದ 28 ನೇ ವಾರ್ಡಿನ ಸದಸ್ಯೆ ಮೊಬಿನ ಬೀ ಅವರು ತಮ್ಮ ಮೂರು ತಿಂಗಳ ಮಗುವಿನೊಂದಿಗೆ ರೆಸಾರ್ಟ್‌ಗೆ ತೆರಳಿದ್ದಾರೆ. ಇವರು ಡಿಪ್ಲೊಮಾ ಕಂಪ್ಯೂಟರ್ ಸೈನ್ಸ್ ವಿದ್ಯಾಭ್ಯಾಸ ಮಾಡಿದ್ದು. ಪಕ್ಷದಲ್ಲಿ ಕಳೆದ ಮೂರು ದಶಕದಿಂದ ದುಡಿದಿರುವ ಅಲ್ಲಬಕಾಷ್ ಅವರ ಪುತ್ರಿಯಾಗಿದ್ದಾರೆ. ತಮಗೆ ಮೇಯರ್ ಸ್ಥಾನ ನೀಡುವಂತೆ ಕೋರಿದ್ದಾರೆ. ಇನ್ನು ತಮ್ಮ ಸಮುದಾಯದ 34ನೇ ವಾರ್ಡಿನ ರಾಜೇಶ್ವರಿ ಸುಬ್ಬರಾಯುಡು ಅವರು ಸಹ ಮೇಯರ್ ಸ್ಥಾನದ ಪ್ರಭಲ ಆಕಾಂಕ್ಷಿಗಳಾಗಿದ್ದಾರೆ. ಆದರೆ ಪಕ್ಷ ಯಾವ ತೀರ್ಮಾನ ತೆಗೆದುಕೊಳ್ಳುತ್ತೆದೆ ಕಾದು ನೋಡಬೇಕಿದೆ.
ಬಳ್ಳಾರಿ ಪಾಲಿಕೆಗೆ ಮೇಯರ್- ಉಪಮೇಯರ್ ಚುನಾವಣೆ ಮಾ. 19ಕ್ಕೆ ನಡೆಯಲಿದೆ. ಹೀಗಾಗಿ ಅಧಿಕೃತ ಅಭ್ಯರ್ಥಿಗಳ ಆಯ್ಕೆಗಾಗಿ ಕಾಂಗ್ರೆಸ್‌ನ 21, ಪಕ್ಷೇತರ 4 ಸೇರಿ ಒಟ್ಟು 25 ಸದಸ್ಯರು ಬೆಂಗಳೂರಿಗೆ ತೆರಳಿದ್ದಾರೆ. ಆಪರೇಷನ್ ಕಮಲ ಭೀತಿಯಿಲ್ಲ. ನಾಲ್ಕು ದಿನಗಳ ಹಿಂದೆಯೇ ಹೋಗಬೇಕಿತ್ತು. ದುರ್ಗಮ್ಮ ಸಿಡಿ ನಿಮಿತ್ತ ಇಂದು ತೆರಳಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ನಿರ್ದೇಶನದಂತೆ ತೆರಳಿದ್ದಾರೆ – ಜಿ.ಎಸ್.ಮಹ್ಮದ್ ರಫೀಕ್, ಕಾಂಗ್ರೆಸ್ ಜಿಲ್ಲಾಧ್ಯಕ್ಷರು, ಬಳ್ಳಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.