ಕಾಂಗ್ರೆಸ್ ಪುಢಾರಿಗಳಿಂದಮೋದಿ ಅಕ್ಕಿ ಮಾರಾಟ: ಶೋಭಾ
Team Udayavani, Oct 26, 2018, 4:39 PM IST
ಹೊಸಪೇಟೆ: ಕೇಂದ್ರ ದಿಂದ ಬರುವ ಮೋದಿಯವರ ಅಕ್ಕಿ-ಗೋಧಿಯನ್ನು ಕಾಂಗ್ರೆಸ್‌ನ ಪುಡಾರಿಗಳು ಮಾರಾಟ ಮಾಡಿಕೋಂಡು ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಪ್ರದಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರ‌್ಲಂದಾಜೆ ಆರೋಪಿಸಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಮಹಿಳಾ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ದಿಂದ 400 ಕೋಟಿ ರೂ. ವೆಚ್ಚದಲ್ಲಿ ಪ್ರತಿ ತಿಂಗಳು 57 ಲಕ್ಷ ಮೆಟ್ರಕ್ ಟನ್ ಗೋಧಿ, 1.65 ಲಕ್ಷ ಟನ್ ಅಕ್ಕಿ ಬರುತ್ತಿದೆ. 1 ಕೆಜಿ ಅಕ್ಕಿ 31 ರೂ. ಹಾಗೂ 1 ಕೆಜಿ ಗೋಧಿಗೆ 21 ರೂ.ನಂತೆ ಖರೀದಿ ಮಾಡಿ ರಾಜ್ಯಕ್ಕೆ ಕಳುಹಿಸುತ್ತಿದೆ . ಇದರಲ್ಲಿ ರಾಜ್ಯ ಸರ್ಕಾ ರದ ಪಾಲು ಒಂದು ಕೆಜಿ ಅಕ್ಕಿ ಯದು 3 ರೂ., ಗೋಧಿಯ 2 ರೂ. ಮಾತ್ರ. ಈ ಅಕ್ಕಿ-ಗೋಧಿಯನ್ನು ರಾಜ್ಯದ ಬಡವರಿಗೆ ವಿತರಣೆ ಮಾಡಿ ಅನ್ನಭಾಗ್ಯ ಯೋಜನೆ ನನ್ನದು ಎಂದು ಬೀಗು ತ್ತಿದೆ. ಕೇಂದ್ರ ದಿಂದ ಅಕ್ಕಿ ಯನ್ನು ಕಾಂಗ್ರೆಸ್ ಪುಡಾರಿಗಳು ಪಾಲಿಶ್ ಮಾಡಿ ಬೇರೆ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು ಎಂದರು.
ಜಾತಿ, ಜಾತಿ ಹಾಗೂ ಧರ್ಮಗಳ ವಿರುದ್ಧ ಕಲಹ ಉಂಟು ಮಾಡುವ ಕಾಂಗ್ರೆಸ್ ಟಿಪ್ಪು ಜಯಂತಿ ಹೆಸರಿನಲ್ಲಿ ಸಹೋ ದರರಂತೆ ಇರುವ ಹಿಂದೂ-ಮುಸ್ಲಿಂ ನಡುವೆ ವೈಮ ನಸ್ಸು ಉಂಟು ಮಾಡಿದರು. ಟಿಪ್ಪು ಜಯಂತಿ ಮುಸ್ಲಿಂ ಬಾಂಧವರಿಗೆ ಬೇಕಿದಿಲ್ಲ. ಅದು ಕಾಂಗ್ರೆಸ್ ಸರ್ಕಾರಕ್ಕೆ ಬೇಕಿತ್ತು ಎಂದು ಕಿಡಿಕಾರಿದರು.
ದೋಸ್ತಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು 4.5 ತಿಂಗಳು ಕಳೆದರೂ ಅಭಿವೃದ್ಧಿ ಶೂನ್ಯವಾಗಿದೆ. ಧರ್ಮಸ್ಥಳ ಮಂಜುನಾಥನ ಸನ್ನಿಧಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಹ ಕಾರ ಸಂಘ, ರಾಷ್ಟ್ರೀ ಕೃತ ಬ್ಯಾಂಕ್ ಸೇರಿ ದಂತೆ ಖಾಸಗಿ ಸಂಸ್ಥೆಯಲ್ಲಿ ಪಡೆದಿರುವ ರೈತರ ಎಲ್ಲಾ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದರು. ಈವರೆಗೂ ಯಾವುದೇ ರೈತರ ಸಾಲಮನ್ನಾ ಆಗಿಲ್ಲ ಎಂದು ಟೀಕಿಸಿದರು.
ವಿಶ್ವಮಟ್ಟದಲ್ಲಿ ಭಾರ ತದ ಹೆಗ್ಗಳಿಕೆ ಸಾರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕೈಬಲಪಡಿ ಸಲು ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಅವರಿಗೆ ಮತ ನೀಡ ಬೇಕು ಎಂದು ಮನವಿ ಮಾಡಿದರು.
ಕೊಪ್ಪಳ ಸಂಸದ ಕರಡಿ ಸಂಗಣ್ಣ, ಗಂಗಾವತಿ ಶಾಸಕ ಪರಣ್ಣಮನವಳ್ಳಿ, ಯಲಬುರ್ಗಾ ಶಾಸಕ ಹಾಲಪ್ಪಚಾರ್, ಬಿಜೆಪಿ ಮಹಿಳಾ ಮೋರ್ಚಾ ಉಪಾ ಧಕ್ಷೆ ರಾಣಿ ಸಂಯುಕ್ತ, ಮಾಜಿ ಶಾಸಕ ಎಚ್.ಆರ್.ಗವಿಯಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ತಾಲೂಕು ಅಧ್ಯಕ್ಷ ಅನಂತಪದ್ಮನಾಭ, ಹಿರಿಯ ಮುಖಂಡ ಅಶೋಕ್ ಜೀರೆ, ಕವಿ ರಾಜ್ ಅರಸ್, ಚಂದ್ರಕಾಂತ್ ಕಾಮತ್, ಶಂಕರ್ ಮೇಟಿ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
Covid Scam: ನ್ಯಾ.ಡಿ.ಕುನ್ಹಾ ವರದಿ ವಿಪಕ್ಷಗಳ ಬೆದರಿಸುವ ತಂತ್ರ: ಬಿ.ವೈ.ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.