ಕಲುಷಿತ ನೀರು ಪೂರೈಕೆ: ಕುಡಿವ ನೀರಿಗೆ ಪರದಾಟ
Team Udayavani, Mar 11, 2019, 9:30 AM IST
ಕೊಟ್ಟೂರು: ಪಟ್ಟಣದಲ್ಲಿ ಪಟ್ಟಣ ಪಂಚಾಯತ್ ಕಳೆದ ನಾಲ್ಕೈದು ದಿನಗಳಿಂದ ನಾಗರಿಕರಿಗೆ ಪೂರೈಸುತ್ತಿರುವ ಕುಡಿಯುವ ನೀರು ಕಲುಷಿತಗೊಂಡಿದ್ದು, ಕುಡಿಯಲು ಆಗದೇ ಇತ್ತ ಬಿಡಲು ಆಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದಲ್ಲಿ ತುಂಗಭದ್ರಾ ಹಿನ್ನೀರು ಸರಬರಾಜು ಇದ್ದು, ಕೆಲ ಭಾಗದಲ್ಲಿ ಕೊಳವೆಬಾವಿ ನೀರು ಸರಬರಾಜು ಆಗುತ್ತದೆ. ಕೆಲವೊಮ್ಮೆ ಕೆಲ ಕೊಳವೆಬಾವಿಗಳಿಂದ ಮಿಶ್ರಿತ ನೀರನ್ನು ಸರಬರಾಜು ಮಾಡಲಾಗುತ್ತದೆ.
ಆರೋಗ್ಯಕ್ಕೆ ತುತ್ತು: ನಾಲ್ಕೈದು ದಿನಗಳಿಂದ ಸರಬರಾಜು ಆಗುತ್ತಿರುವ ತುಂಗಭದ್ರೆ ಹಿನ್ನೀರು ತೆಳು ಬಟ್ಟೆಯಲ್ಲಿ ಸೋಸಿದರೆ ಮಣ್ಣು ಬರುತ್ತದೆ. ಉಳ್ಳ ಕೆಲವು ಜನರು ಇದೇ ನೀರನ್ನು ಶುದ್ಧೀಕರಿಸುವ ಫಿಲ್ಟರ್ ಅನ್ನು ಬಳಸುತ್ತಾರೆ. ಉಳಿದ ಬಡವರು ಶುದ್ಧಿಕರಿಸದೇ ನೀರನ್ನು ಕುಡಿಯುವಂತಾಗಿದೆ. ಈ ನೀರನ್ನು ಕುಡಿದ ಅನೇಕ ಜನರು ರೋಗಗಳಿಗೆ ತುತ್ತಾಗುತ್ತಿದ್ದಾರೆ.
ಆರೋಗ್ಯ ಕಾಪಾಡಲಿ: ಪಟ್ಟಣದ ಕೆಲವೊಂದು ವಾರ್ಡ್‌ನಲ್ಲಿ ನೀರು ಸರಬರಾಜು ಮಾಡುವ ಪೈಪ್‌ಗ್ಳು ಹೊಡೆದು ಹೋಗಿ ಸರಬರಾಜು ಆಗುವ ನೀರು ಕಲುಷಿತಗೊಂಡು ಜನರು ರೋಗಕ್ಕೆ ಈಡಾಗುವಂತಾಗಿದೆ. ಈಗಾಲಾದರೂ ಪಟ್ಟಣ ಪಂಚಾಯತ್ ನವರು ಪ್ರತಿಯೊಂದು ವಾರ್ಡ್‌ಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ನಾಗರಿಕರ ಆರೋಗ್ಯ ಕಾಪಾಡಬೇಕಿದೆ.
ಪಪಂನಿಂದ ಈಗಾಗಲೇ ಕೆಲವೊಂದು ವಾರ್ಡ್‌ಗಳಲ್ಲಿ ಘಟಕಗಳು ಸ್ಥಾಪಿತವಾಗಿವೆ. ಆ ಘಟಕಗಳಿಗೆ ಕುಡಿವ ನೀರು ಸರಬರಾಜು ಆಗಿಲ್ಲ. ಆದ್ದರಿಂದ ಬಿಸಿಲಿನ ಬೇಗೆ ಹಾಗೂ ಕಲುಷಿತ ನೀರಿನ ಪರಿಣಾಮ ಎದುರಿಸಬೇಕಾದ ಪರಿಸ್ಥಿತಿ ಉಂಟಾಗಿದೆ.
ಪಟ್ಟಣದಲ್ಲಿ ಬಹುತೇಕರು ಬಡವರಾಗಿದ್ದು, ಇಂತಹ ನೀರನ್ನು ಕುಡಿದು ರೋಗಕ್ಕೆ ತುತ್ತಾದರೆ ಏನು ಮಾಡಬೇಕು. ತಕ್ಷಣವೇ ಪಟ್ಟಣ ಪಂಚಾಯತ್ ಜನಪ್ರತಿನಿಧಿಗಳು ಹಾಗೂ ಶಾಸಕರು ಶುದ್ಧ ನೀರಿನ ಸರಬರಾಜಿಗೆ ಕ್ರಮ ಕೈಗೊಳ್ಳಬೇಕು.
ಶ್ಯಾಮ ಕೊಟ್ಟೂರು.
ತುಂಗಭದ್ರಾ ನದಿ ಹಿನ್ನೀರಿದ್ದು, ನೀರಿನ ಸರಬರಾಜಿನಲ್ಲಿ ವ್ಯತ್ಯಯ ಹಾಗೂ ಕಲುಷಿತಗೊಂಡಿದ್ದು, ಇದನ್ನು ಕೂಡಲೇ ನಾವು ಎರಡು ದಿನಗಳಲ್ಲಿ ಸರಿಪಡಿಸಿ ಶುದ್ಧ ನೀರನ್ನು ಸರಬರಾಜು ಮಾಡುತ್ತೇವೆ.
ಎಚ್.ಎಫ್. ಬಿದರಿ, ಮುಖ್ಯಾಧಿಕಾರಿ ಕೊಟ್ಟೂರು.
ರವಿಕುಮಾರ ಎಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad High Court: ಹಂಪಿ ನರಹರಿ ತೀರ್ಥರ ವೃಂದಾವನ ಪೂಜೆ ಯಥಾಸ್ಥಿತಿಗೆ
Bellary: ಐದು ವರ್ಷದ ಮಗುವಿನ ಅತ್ಯಾಚಾರ ನಡೆಸಿದ್ದ ಆರೋಪಿಗೆ ಗುಂಡೇಟು
ಮೀಟರ್ ಬಡ್ಡಿ ದಂಧೆಗೆ ಮನನೊಂದು ವಿಎಸ್‌ಕೆ ವಿವಿ ಅಟೆಂಡರ್ ಆತ್ಮಹತ್ಯೆ… ಪೊಲೀಸರಿಂದ ತನಿಖೆ
ಆಕಳುಗಳ ಕೆಚ್ಚಲು ಕೊಯ್ದ ಪ್ರಕರಣ; ಶಾಸಕ,ಉಸ್ತುವಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ
Makar Sankranti: ಹಂಪಿಗೆ ಹರಿದು ಬಂದ ಭಕ್ತ ಜನ ಸಾಗರ!