ಒಂದೇ ಕುಟುಂಬದ ಹತ್ತು ಜನರಿಗೆ ಕೋವಿಡ್-19 ಸೋಂಕು !
Team Udayavani, Apr 17, 2020, 1:20 PM IST
ಬಳ್ಳಾರಿ: ಜಿಲ್ಲೆಯ ಹೊಸಪೇಟೆ ನಗರದಲ್ಲಿ ಈಗಾಗಲೇ ಒಂದೇ ಕುಟುಂಬದ ಮೂವರಲ್ಲಿ ಪತ್ತೆಯಾಗಿದ್ದ ಕೋವಿಡ್-19 ವೈರಸ್ ಪಾಸಿಟಿವ್ ಇದೀಗ ಅದೇ ಕುಟುಂಬದ ಮತ್ತೆ ಏಳು ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ 13ಕ್ಕೆ ಏರಿಕೆಯಾಗಿದ್ದು, ಜಿಲ್ಲೆಯ ಜನರು ಬೆಚ್ಚಿಬಿದ್ದಿದ್ದಾರೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಎಸ್.ಆರ್.ನಗರದಲ್ಲಿನ ಒಂದೇ ಕುಟುಂಬದ ಮೂವರಲ್ಲಿ ಮಾರ್ಚ್ 30 ರಂದು ಕೋವಿಡ್-19 ವೈರಸ್ ಇರುವುದು ದೃಢಪಟ್ಟಿತ್ತು. ನಂತರ ಏ.4 ರಂದು ಇದೇ ಕುಟುಂಬದೊಂದಿಗೆ ಸಂಪರ್ಕ ಹೊಂದಿದ್ದ ವ್ಯಕ್ತಿಯೊಬ್ಬರಿಗೂ ವೈರಾಣು ಪತ್ತೆಯಾಗಿತ್ತು. ಇವರ ಸಂಬಂಧಿಕರಾದ 8 ಜನರನ್ನು ಹೊಸಪೇಟೆ ನಗರದ ಖಾಸಗಿ ಹೊಟೇಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಈ ಎಂಟು ಜನರ ಪೈಕಿ ಏಳು ಜನರಿಗೆ ಸೋಂಕು ಪಾಸಿಟಿವ್ ಇರುವುದು ಪತ್ತೆಯಾಗಿದ್ದು, ರಾಜ್ಯ ಸರ್ಕಾರ ಪ್ರಕಟಿಸಿದ ಶುಕ್ರವಾರದ ಬೆಳಗಿನ ಹೆಲ್ತ್ ಬುಲೆಟಿನ್ ಅಧಿಕೃತ ಪಡಿಸಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 13ಕ್ಕೆ ಏರಿಕೆಯಾದಂತಾಗಿದ್ದು,ಹೊಸಪೇಟೆ ನಗರದಲ್ಲೇ 11 ಜನರಿಗೆ ಕೋವಿಡ್-19 ಸೋಂಕು ತಗುಲಿದಂತಾಗಲಿದೆ.
ಹೊಸಪೇಟೆ ಎಸ್.ಆರ್.ನಗರದ ಒಂದೇ ಕುಟುಂಬದ ನಾಲ್ವರಿಗೆ ಈ ಸೋಂಕು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ಅದೇ ಕುಟುಂಬದ ಪ್ರಾಥಮಿಕ ಕಾಂಟ್ಯಾಕ್ಟ್ ಹೊಂದಿದ್ದ 25 ಮಂದಿಯನ್ನೂ ಸೇರಿದಂತೆ ಅಂದಾಜು 125 ಮಂದಿಯನ್ನ ಕಳೆದ ಹದಿನಾಲ್ಕು ದಿನಗಳಕಾಲ ಜಿಲ್ಲಾಡಳಿತ ಹೊಸಪೇಟೆ ಹೊಟೇಲ್ ವೊಂದರಲ್ಲಿ ಕ್ವಾರೈಂಟೀನ್ ಮಾಡಲಾಗಿತ್ತು. ಹನ್ನೆರಡನೇಯ ದಿನಕ್ಕೆ ಟೆಸ್ಟ್ ಮಾಡಿದಾಗ ಏಳು ಮಂದಿಯಲ್ಲಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಅಲ್ಲದೇ, ಹೊಸಪೇಟೆ ಎಸ್.ಆರ್.ನಗರದ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನಲೆಯಲ್ಲಿ ಕ್ರಮ ಸಂಖ್ಯೆ 89, 90, 91 ರೋಗಿಗಳನ್ನ ಜಿಲ್ಲಾಸ್ಪತ್ರೆಯ ಕೋವಿಡ್ – 19 ಐಶೋಲೇಷನ್ ವಾರ್ಡಿನಲ್ಲಿ ಇರಿಸಲಾಗಿದ್ದು, ಅವರೊಂದಿಗೆ ಹೊಂದಿರೊ ಪ್ರೈಮರಿ ಕಾಂಟ್ಯಾಕ್ಟ್ ಹೊಂದಿರೊ ಏಳು ಮಂದಿಯಲ್ಲಿ ವೈರಾಣು ಸೋಂಕು ಪತ್ತೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
MUST WATCH
ಹೊಸ ಸೇರ್ಪಡೆ
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.