ಮತ್ತೆ 24 ಜನರಿಗೆ ಕೋವಿಡ್ ; 220ಕ್ಕೇರಿಕೆಯಾದ ಸಂಖ್ಯೆ

ಹೊಸಪೇಟೆಯಲ್ಲಿ 20, ಬಳ್ಳಾರಿ 3, ಕೂಡ್ಲಿಗಿಯಲ್ಲಿ 1 ಸೋಂಕು ದೃಢ

Team Udayavani, Jun 16, 2020, 11:58 AM IST

ಮತ್ತೆ 24 ಜನರಿಗೆ ಕೋವಿಡ್ ; 220ಕ್ಕೇರಿಕೆಯಾದ ಸಂಖ್ಯೆ

ಕಂಪ್ಲಿ: ಪ್ರಭುಕ್ಯಾಂಪಿಗೆ ತಹಶೀಲ್ದಾರ್‌ ಎಂ. ರೇಣುಕಾ, ವೈದ್ಯಾಧಿಕಾರಿ ಡಾ| ಮಲ್ಲೇಶಪ್ಪ ಭೇಟಿ ನೀಡಿ ಪರಿಶೀಲಿಸಿದರು.

ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಮತ್ತೆ ಹೊಸದಾಗಿ 24 ಕೊರೊನಾ ಸೋಂಕು ಪತ್ತೆಯಾಗಿದೆ. ಇತ್ತೀಚೆಗಷ್ಟೇ  ಸೋಂಕಿನಿಂದ ಮುಕ್ತವಾಗಿದ್ದ ಹೊಸಪೇಟೆಯಲ್ಲಿ
ಜಿಂದಾಲ್‌ ಸಿಬ್ಬಂದಿ, ವಿವಿಧ ರಾಜ್ಯ, ಜಿಲ್ಲೆಗಳಿಂದ ವಾಪಸ್‌ ಬಂದವರು ಸೇರಿ ಹೊಸದಾಗಿ ಪುನಃ 20 ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 220ಕ್ಕೆ ಏರಿಕೆಯಾಗಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಜಿಲ್ಲಾ  ಧಿಕಾರಿ ಎಸ್‌.ಎಸ್‌.ನಕುಲ್‌ ಅವರು, 20 ಪ್ರಕರಣಗಳು ಹೊಸಪೇಟೆ ತಾಲೂಕಿಗೆ ಸಂಬಂಧಿ ಸಿದ್ದರೆ ಮೂರು ಪ್ರಕರಣ ಬಳ್ಳಾರಿ ತಾಲೂಕಿಗೆ ಸಂಬಂಧಿ ಸಿವೆ. ಉಳಿದ ಒಂದು ಪ್ರಕರಣ ಕೂಡ್ಲಿಗಿ ತಾಲೂಕಿಗೆ ಸಂಬಂಧಪಟ್ಟಿದೆ. ಹೊಸ 24 ಪ್ರಕರಣದಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ ಇದೀಗ 200ರ ಗಡಿ ದಾಟಿದೆ. ಇದುವರೆಗೆ 220 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಪೈಕಿ 55 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಹೊರಬಂದರೆ ಓರ್ವ ಸಾವಿಗೀಡಾಗಿದ್ದರು. ಹಾಲಿ 134 ಪ್ರಕರಣಗಳು ಸಕ್ರಿಯವಾಗಿವೆ. ಇಂದು ವರದಿಯಾದ ಪ್ರಕರಣಗಳ ಪೈಕಿ 7 ಪ್ರಕರಣಗಳು ಜಿಂದಾಲ್‌ಗೆ ಸಂಬಂಧಿಸಿದ್ದಾಗಿವೆ.

ಸೋಮವಾರ ಪತ್ತೆಯಾದ ಒಟ್ಟು 24 ಪ್ರಕರಣಗಳ ಪೈಕಿ ಬಳ್ಳಾರಿಯ 2, ಹೊಸಪೇಟೆ 1 ಸೇರಿ ಮೂರು ಐಎಲ್‌ಐ ಪ್ರಕರಣಗಳಾಗಿವೆ. ಹೊಸಪೇಟೆಯ
ಮೂವರು ಚಾಮರಾಜನಗರದಿಂದ, ಒಬ್ಬರು ಮಧ್ಯಪ್ರದೇಶ ರಾಜ್ಯದಿಂದ ವಾಪಸ್ಸಾಗಿದ್ದಾರೆ. 9 ಜನರಿಗೆ ಯಾರಿಂದ ಸೋಂಕು ಹರಡಿದೆ ಎಂಬುದು ಪತ್ತೆಯಾಗಿಲ್ಲ. ಹೊಸಪೇಟೆಯ ಒಬ್ಬರಿಗೆ ಪಿ.6687 ಸೋಂಕಿತರಿಂದ ಹರಡಿದೆ. ಇನ್ನು ಸೋಂಕಿತ 6 ಜಿಂದಾಲ್‌ ಸಿಬ್ಬಂದಿ ಪೈಕಿ ಒಬ್ಬರು ಬಳ್ಳಾರಿ, ಮತ್ತೂಬ್ಬರು ಕೂಡ್ಲಿಗಿ, ಉಳಿದ ನಾಲ್ವರು ಹೊಸಪೇಟೆಯವರಾಗಿದ್ದಾರೆ. ಸೋಂಕಿತರೆಲ್ಲರೂ ನಗರದ ಕೋವಿಡ್‌ (ಜಿಲ್ಲಾ) ಆಸ್ಪತ್ರೆ ಮತ್ತು ಸಂಡೂರಿನ ಸಂಜೀವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದವರು ತಿಳಿಸಿದ್ದಾರೆ.

ಮರಿಯಮ್ಮನಹಳ್ಳಿಯಲ್ಲಿ ಇಬ್ಬರಿಗೆ ಕೋವಿಡ್ ಸೋಂಕು ದೃಢ
ಮರಿಯಮ್ಮನಹಳ್ಳಿ: ಮರಿಯಮ್ಮನಹಳ್ಳಿ ಹೋಬಳಿಯಲ್ಲಿ ಮತ್ತೆ ಎರಡು ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಸಮೀಪದ ಹನುಮನಹಳ್ಳಿಯಲ್ಲಿ
ಒಬ್ಬರು ಹಾಗೂ ಡಣಾಪುರದಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿರುವುದಾಗಿ ಜಿಲ್ಲಾಡಳಿತ ಪ್ರಕಟಿಸಿದೆ. ಹನುಮನಹಳ್ಳಿಯ ಬಸಾಪುರದ ಸೋಂಕಿತ ವ್ಯಕ್ತಿಯು
ಜಿಂದಾಲ್‌ನಲ್ಲಿ ಕೆಲಸಮಾಡುತ್ತಿರುವುದಾಗಿ ತಿಳಿದು ಬಂದಿದೆ. ಡಣಾಪುರದಲ್ಲಿ ಲಾರಿ ಚಾಲಕರೊಬ್ಬರ ಪತ್ನಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು ಈ ಮಹಿಳೆಗೆ ಸೋಂಕು ಯಾವ ರೀತಿ ಹಬ್ಬಿದೆ ಎಂಬುದು ತಿಳಿದುಬಂದಿಲ್ಲ. ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಮರಿಯಮ್ಮನಹಳ್ಳಿ ನಾಡಕಚೇರಿ ಅಂದಾನಗೌಡ, ಗ್ರಾಮಲೆಕ್ಕಿಗರಾದ ಶಾರದ, ಪಿಎಸ್‌ಐ ಶಿವಕುಮಾರ್‌ ಸೋಂಕಿತರ ಪ್ರದೇಶಕ್ಕೆ ಭೇಟಿ ನೀಡಿ ನೂರು ಮೀಟರ್‌ ವ್ಯಾಪ್ತಿಯ ಪ್ರದೇಶವನ್ನು ಸೀಲ್‌ಡೌನ್‌ ಮಾಡಿದ್ದಾರೆ.

ಕಂಪ್ಲಿಯಲ್ಲಿ ಐವರಿಗೆ ಕೋವಿಡ್‌-19: ಜನತೆ ತಲ್ಲಣ
ಕಂಪ್ಲಿ: ತಾಲೂಕಿನಲ್ಲಿ ಸೋಮವಾರ ಒಂದೇ ದಿನ 5 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಕುಟುಂಬದ ಐದು ಜನರಿಗೆ ಡೆಡ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಇದರಿಂದ ಕಂಪ್ಲಿ ತಾಲ್ಲೂಕಿನ ಜನರ ತಲ್ಲಣಕ್ಕೆ ಕಾರಣವಾಗಿದೆ. ಇಲ್ಲಿನ ನಂ.10 ಮುದ್ದಾಪುರ ಗ್ರಾಪಂ ವ್ಯಾಪ್ತಿಗೆ ಒಳಪಡುವ ಪ್ರಭುಕ್ಯಾಂಪಿ (ಸಕ್ಕರೆ ಕಾರ್ಖಾನೆ ಬಳಿ)ನ ಮೂಲತ ನಿವಾಸಿ ಕುಟುಂಬದ ಐದು ಜನರಿಗೆ ಕೊರೊನಾ ವಕ್ಕರಿಸಿದೆ. ಮೂಲತ 36 ವರ್ಷದ ಪುರುಷ(ಪತಿ), 31 ವರ್ಷದ ಮಹಿಳೆ (ಪತ್ನಿ), 5 ವರ್ಷ ಬಾಲಕಿ ಮತ್ತು 3 ವರ್ಷದ ಬಾಲಕಿ(ಹೆಣ್ಮಕ್ಕಳು), 66 ವರ್ಷದ ಪುರುಷ(ಮಾವ)ನಿಗೆ ಸೋಂಕು ತುಗಲಿದೆ. ಇಲ್ಲಿನ ಪ್ರಭುಕ್ಯಾಂಪಿನ ಮೂಲತ ವ್ಯಕ್ತಿಯು ತಮ್ಮ ಕುಟುಂಬದೊಂದಿಗೆ ಸಂಡೂರು ತಾಲ್ಲೂಕಿನ ಕುರೇಕುಪ್ಪ ಪಟ್ಟಣದಲ್ಲಿ ಅಂಗಡಿ ನಡೆಸುತ್ತಿದ್ದನು. ಆದರೆ, ಇತ್ತೀಚೆಗೆ ಜಿಂದಾಲ್‌ನಲ್ಲಿ ಡೆಡ್ಲಿ ಕೋವಿಡ್ ವೈರಸ್‌ನ ರಣಕೇಕೆಗೆ ಬೆಚ್ಚಿಬಿದ್ದು, ಕಂಪ್ಲಿ ತಾಲ್ಲೂಕಿನ ಪ್ರಭುಕ್ಯಾಂಪಿಗೆ ಬಂದು ವಾಸವಾಗಿದ್ದಾನೆ. ಇಲ್ಲಿಗೆ ಬಂದ ತಕ್ಷಣ ಅಂದರೆ ಜೂ. 12ರಂದು ಕಂಪ್ಲಿ ಸರ್ಕಾರಿ ಆಸ್ಪತ್ರೆಯ ಕೋವಿಡ್ ಫಿವರ್‌ ಕ್ಲಿನಿಕ್‌ನಲ್ಲಿ ಗಂಟಲು ಮತ್ತು ಮೂಗಿನ ಸ್ಲಾಬ್‌ ಸಂಗ್ರಹಿಸಿದ ನಂತರ ಜಿಂದಾಲ್‌ನ ಸಂಜೀವಿನಿ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ಗಾಗಿ ಕಳುಹಿಸಲಾಯಿತ್ತು. ಆದರೆ, ಈಗ ಐದು ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಕೊರೊನಾ ಸೋಂಕು ತಗುಲಿದ ಐವರು ಜಿಂದಾಲ್‌ನ ಸಂಜೀವಿನಿ ಆಸ್ಪತ್ರೆಯಲ್ಲೇ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್‌, ಆರೋಗ್ಯ ಮತ್ತು ಪೊಲೀಸ್‌ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಭುಕ್ಯಾಂಪ್‌ನಲ್ಲಿ ಸೋಂಕು ನಾಶಕ ಔಷಧ ಸಿಂಪಡಣೆ ಮಾಡಲು ಸೂಚಿಸಿದರು. ತಹಶೀಲ್ದಾರ್‌ ಎಂ.ರೇಣುಕಾ, ಉಪ ತಹಶೀಲ್ದಾರ್‌ ಬಿ. ರವೀಂದ್ರಕುಮಾರ್‌, ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ| ಮಲ್ಲೇಶಪ್ಪ, ಪಿಎಸ್‌ಐ ಮೌನೇಶ್‌ ಉ. ರಾಥೋಡ್‌, ಕಂದಾಯ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಮಾಲತೇಶ್‌ ದೇಶ್‌ಪಾಂಡೆ, ವಿಎಗಳಾದ ವೆಂಕಟೇಶ್‌, ಲಕ್ಷ್ಮಣನಾಯ್ಕ ಇದ್ದರು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Paddy 2

Kampli; ದರ ಕುಸಿತ: ಭತ್ತ ನೆಲಕ್ಕೆ ಚೆಲ್ಲಿ ರೈತರ ಪ್ರತಿಭಟನೆ

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

7

Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು

1-eqwqwewe

Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ

13-

Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.