ನರ್ಸಿಂಗ್ ಪರೀಕ್ಷಾರ್ಥಿಗಳಿಗೆ ಸೋಂಕು
Team Udayavani, Jan 19, 2022, 3:24 PM IST
ಬಳ್ಳಾರಿ: ನರ್ಸಿಂಗ್ ಪರೀಕ್ಷೆ ಬರೆಯಲೆಂದು ಉತ್ತರ ಭಾರತದಿಂದ ಈಚೆಗೆನಗರಕ್ಕೆ ಬಂದಿದ್ದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ 68 ಜನರಿಗೆ ಕೋವಿಡ್‌ಸೋಂಕು ದೃಢಪಟ್ಟಿದ್ದು, ಸಂಬಂಧಪಟ್ಟ ಕಾಲೇಜು, ಲಾಡ್ಜ್ಗಳ ವಿರುದ್ಧಇಲ್ಲಿನ ಪೊಲೀಸ್ ಠಾಣೆಗಳಲ್ಲಿ ಪ್ರಕರಣದಾಖಲಾಗಿದೆ.ಉತ್ತರ ಭಾರತದ ಹರ್ಯಾಣ, ಪಂಜಾಬ್,ಬಿಹಾರ್, ಕಲ್ಕತ್ತಾ, ಚಂಡೀಘಡ, ಗುಜರಾತ್‌ಸೇರಿ ವಿವಿಧ ರಾಜ್ಯಗಳಿಂದ ನರ್ಸಿಂಗ್‌ಪರೀಕ್ಷೆ ಬರೆಯಲೆಂದು ಜ. 16ರಂದುಭಾನುವಾರ ಬಳ್ಳಾರಿ ನಗರಕ್ಕೆ ಆಗಮಿಸಿದ್ದರು.
ನಗರದ ರೈಲು ನಿಲ್ದಾಣದಿಂದ ಲಾಡ್ಜ್ಗಳತ್ತಸಾಮಾಜಿಕ ಅಂತರವಿಲ್ಲದೇ ಗುಂಪುಗುಂಪಾಗಿತೆರಳುತ್ತಿದ್ದ ಇವರನ್ನು ಗಡಗಿ ಚನ್ನಪ್ಪ ವೃತ್ತದಲ್ಲಿ ಸಂಚಾರಿ ಪೊಲೀಸರು ತಡೆದು,ಎಲ್ಲಿಂದ ಬಂದಿದ್ದೀರಿ? ಬಂದಿರುವ ಉದ್ದೇಶವೇನು? ಕೋವಿಡ್ ಲಸಿಕೆಪಡೆದಿದ್ದೀರಾ? ನೆಗೆಟಿವ್ ರಿಪೋರ್ಟ್ ಇದೆಯಾ? ಎಂದೆಲ್ಲ ಪ್ರಶ್ನಿಸಿದ್ದಾರೆ.ಆಗ ಇವರ ಬಳಿ ಯಾವುದೇ ನೆಗೆಟಿವ್ ರಿಪೋರ್ಟ್ ಇಲ್ಲ. ಕೇವಲಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಕೋವಿಡ್ ಲಸಿಕೆ ಪಡೆದಿರುವವರದಿಯನ್ನು ಇಟ್ಟುಕೊಂಡಿದ್ದರು.ಇದರಿಂದ ಎಚ್ಚೆತ್ತುಕೊಂಡ ಜಿಲಾಡಳಿತ, ಆರೋಗ್ಯ ಇಲಾಖೆ ಕೂಡಲೇಸ್ಥಳಕ್ಕೆ ತಾಲೂಕು ಆರೋಗ್ಯಾ ಧಿಕಾರಿಗಳು ಭೇಟಿ ನೀಡಿ ಅವರೆಲ್ಲರನ್ನೂಕೋವಿಡ್ ಟೆಸ್ಟ್‌ಗೆ ಒಳಪಡಿಸಲಾಯಿತು.
ಪರಿಣಾಮ ಅವರಲ್ಲಿ 68ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು ಆತಂಕ ಮೂಡಿಸಿದೆ.ಕಾಲೇಜು, ಲಾಡ್ಜ್ಗಳ ವಿರುದ್ಧ ಪ್ರಕರಣ: ನರ್ಸಿಂಗ್ ಪರೀಕ್ಷೆ ಬರೆಯಲುಹೊರ ರಾಜ್ಯಗಳಿಂದ ಬಂದಿದ್ದ 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪರೀಕ್ಷೆಬರೆಯಲು ಪರೀûಾ ಕೇಂದ್ರಗಳು, ತಂಗಲು ಅವಕಾಶ ಮಾಡಿಕೊಟ್ಟ14 ಕಾಲೇಜು, 10 ಲಾಡ್ಜ್ಗಳ ವಿರುದ್ಧ ಜಿಲ್ಲಾ ಧಿಕಾರಿ ಪವನ್‌ಕುಮಾರ್‌ಮಾಲಪಾಟಿ ಸೂಚನೆ ಮೇರೆಗೆ ತಹಶೀಲ್ದಾರ್ ರೆಹಾನ್ ಪಾಶಾ ಅವರುವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ನೀಡಿದ್ದಾರೆ.
ಆದರೆ ಗಾಂ ಧಿನಗರ,ಕೌಲ್‌ಬಜಾರ್ ಮತ್ತು ಗ್ರಾಮೀಣ ಠಾಣೆಗಳಲ್ಲಿ ಮಾತ್ರ ಮರ್ಚೆಡ್ ರೆಸಿಡೆನ್ಸಿ,ವಿದ್ಯಾ ಕಂಫರ್ಟ್ಸ್, ವಿಷ್ಣುಪ್ರಿಯಾ ಲಾಡ್ಜ್, ಚಾಲುಕ್ಯ ಲಾಡ್ಜ್, ಬಿಡಿಡಿಎಸ್,ಅಮಲಾ ನಿವಾಸ್, ಮಾತಾ ಫಂಕ್ಷನ್ ಹಾಲ್ ಸೇರಿ ಆರು ಲಾಡ್ಜ್ಗಳು,ಇಂಡಿಯನ್ ನರ್ಸಿಂಗ್ ಕಾಲೇಜು, ಪೂಜಾ ಸ್ಕೂಲ್ ಆಫ್ ನರ್ಸಿಂಗ್, ನ್ಯೂಎರಾ ನರ್ಸಿಂಗ್ ಕಾಲೇಜು, ಕರ್ನಾಟಕ ನರ್ಸಿಂಗ್ ಕಾಲೇಜು, ಶರಭೇಶ್ವರನರ್ಸಿಂಗ್ ಕಾಲೇಜು, ಬೆಸ್ಟ್ ಸ್ಕೂಲ್ ಆಫ್ ನರ್ಸಿಂಗ್ ಸೇರಿ ಒಟ್ಟು ಏಳುಕಾಲೇಜುಗಳ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಎಸ್‌ಪಿ ಸೈದುಲುಅಡಾವತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆದರೆ, ಇನ್ನುಳಿದ ಲಾಡ್ಜ್,ಕಾಲೇಜುಗಳನ್ನು ಏಕೆ ಕೈಬಿಡಲಾಗಿದೆ ಎಂಬುದು ಸ್ಪಷ್ಟವಾಗಬೇಕಿ¨
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
MUST WATCH
ಹೊಸ ಸೇರ್ಪಡೆ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.