Bellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್ ದೂರು?
Team Udayavani, Sep 20, 2024, 6:50 AM IST
ಬಳ್ಳಾರಿ: ಜೈಲಿನಲ್ಲಿರುವ ದರ್ಶನ್ ಕೇಳುವ ಸೌಲಭ್ಯಗಳನ್ನು ನೀಡದ ಹಿನ್ನೆಲೆಯಲ್ಲಿ ಜೈಲಧಿಕಾರಿಗಳ ವಿರುದ್ಧ ದರ್ಶನ್ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಬಳ್ಳಾರಿ ಜೈಲಿನಲ್ಲಿ 23 ದಿನಗಳಿಂದ ಸೆರೆವಾಸದಲ್ಲಿರುವ ದರ್ಶನ್‌ಗೆ, ಈಗಾಗಲೇ ಹಲವು ಬೇಡಿಕೆ ಈಡೇರಿ ಸಲಾಗಿದೆ. ಇದೀಗ ಇನ್ನೂ ಕೆಲವನ್ನು ನೀಡುವಂತೆ ಜೈಲಧಿಕಾರಿಗಳ ಬಳಿ ಪುನಃ ಬೇಡಿಕೆ ಇಟ್ಟಿದ್ದಾರೆ. ಈ ಸೌಲಭ್ಯಗಳನ್ನು ನೀಡಬೇಕೋ ಬೇಡವೋ ಎಂಬ ಜಿಜ್ಞಾಸೆಯಲ್ಲಿ ಜೈಲಧಿಕಾರಿಗಳು ಇದ್ದಾರೆ.
ಆದರೆ, ಸೌಲಭ್ಯ ನೀಡದೆ ಜೈಲಧಿಕಾರಿಗಳು ಮಾನವ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸಿ ದರ್ಶನ್ ಪರ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಇದರಿಂದ ದರ್ಶನ್‌ಗೆ ಸೌಲಭ್ಯ ನೀಡುವಲ್ಲಿ ಜೈಲಧಿಕಾರಿ, ಸಿಬಂದಿ ಎಚ್ಚರಿಕೆಯ ನಡೆ ಇಡುತ್ತಿದ್ದಾರೆ.
ಆರೋಪಿ ದರ್ಶನ್ ಕೇಳಿದ್ದ ಎಲ್ಲ ಸೌಲಭ್ಯ ಕೊಟ್ಟರೆ ಇಲಾಖೆ, ಸರಕಾರದಿಂದ ತಲೆದಂಡವಾಗಲಿದೆ. ನೀಡದಿದ್ದಲ್ಲಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲು ಮುಂದಾಗಿರುವ ದರ್ಶನ್ ಕುಟುಂಬದ ಕೆಂಗಣ್ಣಿಗೆ ಗುರಿಯಾಗುವ ಆತಂಕ ಜೈಲಧಿಕಾರಿಗಳನ್ನು ಕಾಡುತ್ತಿದೆ. ಈ ನಡುವೆ ಈ ವಾರದಲ್ಲಿಯೇ ದರ್ಶನ್ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಮೊದಲ ಬಾರಿಗೆ ಜೈಲಿಗೆ ಬಂದ ತಾಯಿ ಮೀನಾ
ಬಳ್ಳಾರಿ: ಇಲ್ಲಿನ ಸೆಂಟ್ರಲ್ ಜೈಲಿನಲ್ಲಿರುವ ನಟ ದರ್ಶನ್‌ನನ್ನು ತಾಯಿ ಮೀನಾ ತೂಗುದೀಪ, ಅಕ್ಕ ದಿವ್ಯಾ, ಬಾವ ಮಂಜುನಾಥ, ಅಕ್ಕನ ಮಕ್ಕಳಾದ ರವಿಚಂದ್ರ, ಇಂದ್ರಕುಮಾರ್ ಸೇರಿ ಐವರು ಮೊದಲ ಬಾರಿಗೆ ಗುರುವಾರ ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದರು.
ಜೈಲಿನಲ್ಲಿರುವ ದರ್ಶನ್‌ನನ್ನು ಕಂಡ ತಾಯಿ ಮೀನಾ ತೂಗುದೀಪ ಸೇರಿ ಸಂಬಂ ಧಿಕರು ಭಾವುಕರಾಗಿದ್ದು, ದರ್ಶನ್ ಸಮಾಧಾನಪಡಿಸಿದರು.
ಕೆಲವು ದಿನಗಳಲ್ಲೇ ಜೈಲಿನಿಂದ ಹೊರಬರುವೆ ಎಂದು ಆಶಾಭಾವ ವ್ಯಕ್ತಪಡಿಸಿದ್ದಾರೆ. ಸುಮಾರು ಅರ್ಧ ಗಂಟೆಗಳ ಕಾಲ ಕುಟುಂಬಸ್ಥರೊಂದಿಗೆ ಮಾತನಾಡಿದರು. ತಾಯಿ ಮೀನಾ ಮೊದಲ ಬಾರಿಗೆ ದರ್ಶನ್ ನೋಡಲು ಬಂದಿದ್ದು, ಹಲವು ದಿನಗಳಿಂದ ತಾಯಿ ಬಂದಿಲ್ಲ ಎಂಬ ಕೊರಗು ದರ್ಶನ್‌ಗೆ ನೀಗಿದಂತಾಗಿದೆ. ಇದರಿಂದ ಸೆಲ್‌ಗೆ ವಾಪಸ್ ತೆರಳುವಾಗ ದರ್ಶನ್ ಮಂದಹಾಸ ಬೀರುತ್ತಲೇ ತೆರಳಿದರು.
ಬೆಡ್, ದಿಂಬು, ಚೇರ್‌ಗೆ ಬೇಡಿಕೆ
ದರ್ಶನ್‌ಗೆ ಟಿವಿ ಸೇರಿ ಹಲವು ಸೌಲಭ್ಯ ನೀಡಲಾಗಿದೆ. ಮಲಗಲು ಬೆಡ್, ದಿಂಬು, ಕೂರಲು ಕುರ್ಚಿ ನೀಡುವಂತೆ ಜೈಲ ಧಿಕಾರಿಗಳ ಬಳಿ ಬೇಡಿಕೆ ಇಟ್ಟಿದ್ದಾರೆ. ಆದರೆ, ಜೈಲ ಧಿಕಾರಿಗಳು ನ್ಯಾಯಾಲಯದಿಂದ ಅನುಮತಿ ಪಡೆದಲ್ಲಿ ಮಾತ್ರ ನೀಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್ಗೆ ಗೋಲ್ಡ್ ಸುರೇಶ್
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.