ದಸರಾ ಗೊಂಬೆಗಳಿಟ್ಟು ಪೂಜೆ
Team Udayavani, Oct 27, 2020, 4:49 PM IST
ಹೂವಿನಹಡಗಲಿ: ದಸರಾ ಗೊಂಬೆಗಳ ಪೂಜೆಯನ್ನು ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಗೊಂಬೆಗಳ ನಗರ ಕುಶಾಲನಗರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೆರವೇರಿಸಲಾಗುತ್ತದೆ.
ಆದರೆ ಉತ್ತರ ಕರ್ನಾಟಕದ ಭಾಗದಲ್ಲಿ ಗೊಂಬೆಗಳ ಪೂಜೆಗೆ ಅಷ್ಟೊಂದುಪ್ರಾತಿನಿಧ್ಯವಿಲ್ಲದಿದ್ದರೂ ಈಚೆಗೆ ಈ ಭಾಗದಲ್ಲಿಯೂ ದಸರಾ ಹಬ್ಬದ ಸಂಭ್ರಮದಲ್ಲಿ ಗೊಂಬೆಗಳನ್ನು ಕುಳ್ಳರಿಸಿ ಪೂಜೆ ಮಾಡಲಾಗುತ್ತಿದೆ. ಹಡಗಲಿ ಪಟ್ಟಣದಲ್ಲಿ ಆಯುಧ ಪೂಜೆ ಜೊತೆಯಲ್ಲಿ ಕೆಲವೊಂದು ಕಡೆ ಗೊಂಬೆಗಳನ್ನಿಟ್ಟು ಪೂಜೆ ಮಾಡಲಾಯಿತು. ಗೊಂಬೆಗಳು ನಮ್ಮ ಜೀವನದ ಅನುಭವಗಳನ್ನುಹಾಗೂ ದಿನನಿತ್ಯದ ಬದುಕಿನ ಚಟುವಟಿಕೆ ಬಿಂಬಿಸುವಂತಿರುತ್ತವೆ.
ನಮ್ಮ ಸಂಪ್ರದಾಯದ ಮದುವೆ,ಗ್ರಾಮೀಣ ಭಾಗದಲ್ಲಿನ ಜನಜೀವನದ ಮೇಲೆ ಬೆಳಕು ಚಲ್ಲುವಂತಾಗಿರುತ್ತವೆ. ನಿತ್ಯ ಜೀವನಕ್ಕೆ ಬೇಕಾಗುವ,ಮರ. ಬೀಸಣಿಕೆ. ಬೀಸುವ ಕಲ್ಲು, ಆಹಾರ ದಾನ್ಯಗಳನ್ನು ಸಂಗ್ರಹಿಸುವ ಬಳ್ಳ, ದೇವಸ್ಥಾನ, ಪ್ರಾರ್ಥನೆಮಾಡುವ ಭಕ್ತರ ಹಿಂಡು, ಹೀಗೆಹಲವಾರು ಬಗೆಯಲ್ಲಿನ ಮಾಹಿತಿ ಸಾರುತ್ತ ಹೋಗುತ್ತವೆ. ಮದುವೆ ಸಂಭ್ರಮದಲ್ಲಿ ಸಾಂಪ್ರದಾಯಿಕಆಚರಣೆಗಳನ್ನು ಒಳಗೊಂಡಂತೆ ಆವುಗಳ ಬಗ್ಗೆ ಮಾಹಿತಿ ನೀಡುವ ಗೊಂಬೆಗಳು ನಮ್ಮ ಪೂರ್ವಿಕರ ಇಡೀ ಜೀವನ ಶೈಲಿಯನ್ನು ಮುಂದಿನ ಜನಾಂಗಕ್ಕೆ ತಿಳಿಹೇಳುವಂತಹ ಮಾಹಿತಿ ತಿಳಿಸುವ ಗೊಂಬೆಗಳು, ಇವೆಲ್ಲವುಗಳನ್ನು ಸುಮಾರು 8-10 ದಿನಗಳ ಮುಂಚಿತವಾಗಿ ಗೊಂಬೆ ಪೂಜೆ ಮಾಡುವವರು ತಯಾರು ಮಾಡಿಕೊಳ್ಳುತ್ತಾರೆ. ಆಯುಧ ಪೂಜೆ ದಿನದಂದು ಕೈಗೊಳ್ಳುವ ಈ ಗೊಂಬೆ ಪೂಜೆ ನಿಜಕ್ಕೂ ನಮ್ಮ ಸಂಪ್ರದಾಯದ ಒಂದು ಅದ್ಭುತ ಚಿತ್ರಣವನ್ನು ಸೃಷ್ಟಿ ಮಾಡುತ್ತದೆ.
ಪುರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಟಿ. ರಾಮಮೂರ್ತಿ ಅವರ ಮಗಳು ರಷ್ಮಿ ಮಾತನಾಡಿ, ಈ ಗೊಂಬೆಗಳ ಪೂಜೆ ಕೈಗೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ. ಪ್ರತಿ ಗೊಂಬೆಯೂ ತನ್ನದೇ ಭಾವ-ಭಂಗಿ ಹೊಂದಿರುತ್ತದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಗೊಂಬೆಗಳನ್ನು ತಯಾರುಮಾಡಿ ಅವುಗಳನ್ನು ಪ್ರತಿಷ್ಠಾಪನೆ ಮಾಡಬೇಕಾಗುತ್ತದೆ ಎನ್ನುತ್ತಾಳೆ. ಗೊಂಬೆಗಳ ನಡುವೆ ಒಂದು ಗಂಡು- ಹೆಣ್ಣು ಜೋಡಿಯಾಗಿ ದೊಡ್ಡದಾದ ಗೊಂಬೆಗಳನ್ನು ಪ್ರತಿಷ್ಠಾಪನೆ ಮಾಡಲಾಗಿರುತ್ತದೆ. ಇದನ್ನು ಪಟ್ಟದ ಗೊಂಬೆ ಎನ್ನುತ್ತಾರೆ ಎಂದು ಮಾಹಿತಿ ನೀಡಿದಳು. ಒಟ್ಟಾರೆಯಾಗಿ ದಸರಾ ಹಬ್ಬದ ಜೊತೆಗೆ ಈ ಗೊಂಬೆಗಳ ಹಬ್ಬವೂ ಸಹ ತನ್ನದೇ ಆದ ವಿಶೇಷತೆ ಪಡೆದುಕೊಂಡು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
Ballari; ಮೃ*ತ ಬಾಣಂತಿಯರ ಮನೆಗೆ ಸಚಿವ ದಿನೇಶ್ ಗುಂಡೂರಾವ್ ಭೇಟಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.