ಸಂವಿಧಾನದ ಮೌಲ್ಯದಡಿ ಪ್ರಜಾಪ್ರಭುತ್ವ ಮುನ್ನಡೆ
ಕೆರೆ ಅಭಿವೃದ್ಧಿ ಹಲವಾರು ಉಚಿತ ಪಡಿತರ ಕಿಟ್ ವಿತರಣೆ ಇವು ನನ್ನ ಸಾಧನೆಗಳು
Team Udayavani, Aug 16, 2022, 5:44 PM IST
ಸಂಡೂರು: ಸಂವಿಧಾನದ ಮೌಲ್ಯಗಳಿಂದ ದೇಶದಲ್ಲಿ ಪ್ರಜಾಪ್ರಭುತ್ವದಲ್ಲಿ ನಡೆಸಬೇಕಾಗಿದೆ. ಶಿಕ್ಷಣ ಆರೋಗ್ಯ ರಸ್ತೆ, ಕಾರ್ಖಾನೆಗಳು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ಶಾಸಕ ಈ. ತುಕಾರಾಂ ನುಡಿದರು.
ಅವರು ಶ್ರೀ ಛತ್ರಪತಿ ಶಿವಾಜಿ ವಿದ್ಯಮಂದಿರದಲ್ಲಿ ಏರ್ಪಡಿಸಿದ್ದ 76ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜವಂದನೆ ಸ್ವೀಕರಿಸಿ ಮಾತನಾಡಿದರು. ಕ್ಷೇತ್ರದ ಪ್ರಗತಿಯ ಪರ್ವಕ್ಕೆ ನಾಂದಿ ಹಾಡಿದ್ದು, ಉತ್ತಮ ಶಿಕ್ಷಣದ ಪ್ರಗತಿಗೆ ಪ್ರೌಢಶಾಲೆಗಳು, ಐಟಿಐ ಕಾಲೇಜ್ ಮೊರಾರ್ಜಿ ವಸತಿ ಶಾಲೆ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಆದರ್ಶ ವಿದ್ಯಾಲಯ ನಂದಿಹಳ್ಳಿ, ಸ್ನಾತಕೋತ್ತರ ಕೇಂದ್ರಗಳ ಪೂರ್ಣಾಭಿವೃದ್ಧಿ ಪದವಿ ಕಾಲೇಜು ಸ್ಥಾಪನೆ, ಮೂಲಭೂತ ಸೌಲಭ್ಯಗಳ ದಾಖಲೆ, ತಾಲೂಕಿನ ಪೂರ್ಣ ರಸ್ತೆಗಳ ಪ್ರಗತಿ, ಕೊರೊನಾ ಮಹಾಮಾರಿ ನಿಯಂತ್ರಣಕ್ಕೆ ಆಸ್ಪತ್ರೆ, ಪೂರ್ಣ ಪ್ರಗತಿ ದೇಶದಲ್ಲಿಯೇ ಪ್ರಥಮ ಬಾರಿಗೆ ಚಕ್ರದ ಮೇಲೆ ಆಸ್ಪತ್ರೆ, ತಾಲೂಕಿನ ಎಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ, ಸಂಡೂರಿನ ಶಿವಪುರ ಕೆರೆ ಅಭಿವೃದ್ಧಿ ಹಲವಾರು ಉಚಿತ ಪಡಿತರ ಕಿಟ್ ವಿತರಣೆ ಇವು ನನ್ನ ಸಾಧನೆಗಳು ಎಂದರು.
ಧ್ವಜಾರೋಹಣ ನೆರವೇರಿಸಿ ತಹಶೀಲ್ದಾರ್ ಕೆ.ಎಂ. ಗುರುಬಸವರಾಜ ಸ್ವಾತಂತ್ರ್ಯ ಪೂರ್ವದ ಚರಿತ್ರೆಯನ್ನ ಎಳೆ ಎಳೆಯಾಗಿ ಬಿಚ್ಚಿಟ್ಟರು. ಸಂಗೀತ ಶಿಕ್ಷಕಿ ಗೀತಾ ನಾಡಗೀತೆ, ರೈತಗೀತೆ, ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬೇವೂರು ಮೈಲೇಶ್ ಸ್ವಾಗತಿಸಿದರು. ಬನ್ನಿಹಟ್ಟಿ ಗ್ರಾಮದ ಆಂಗ್ಲ ಉಪನ್ಯಾಸಕ ಪ್ರದೀಪ್ ಕುಮಾರ ನಿರೂಪಿಸಿದರು.
ಈ ಸಂದರ್ಭದಲ್ಲಿ ವೃತ್ತ ನಿರೀಕ್ಷಕ ಹಾಲೇಶ್, ಇಸಿಒಗಳಾದ ಬಸವರಾಜ, ಪಾಲಾಕ್ಷಪ್ಪ, ಪುರಸಭೆ ಅಧ್ಯಕ್ಷೆ, ಉಪಾಧ್ಯಕ್ಷೆ ಅನಿತಾ ವಸಂತ ಕುಮಾರ, ಈರೇಶ ಶಿಂಧೆ, ನಾಡೋಜ ವಿ.ಟಿ. ಕಾಳೆ, ಪುರಸಭಾ ಸದಸ್ಯ ಹನುಮೇಶ, ನಾಮ ನಿರ್ದೇಶಕ ದೇವೆಂದ್ರಪ್ಪ, ರವಿಕಾಂತ ಭೋಸ್ಲೆ, ಎನ್.ಕೆ. ವೆಂಕಟೇಶ್, ಪ್ರೇಮ ಮೂರ್ತಿ, ಖಾಜಾ ಮೈನುದ್ದೀನ್, ಇಒ ಬಿ.ಎಂ. ದ್ವಾರಕೇಶ, ವಾಲ್ಮೀಕಿ ಸಮಾಜದ ಮುಖಂಡ ವಸಂತ ಕುಮಾರ ಇದ್ದರು. ಈ ಸಂದರ್ಭದಲ್ಲಿ ಶಾಸಕರು ಫಲಾನುಭವಿಗಳಿಗೆ 42 ಬೈಕ್‌ಗಳನ್ನು ವಿತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
Kampli; ದರ ಕುಸಿತ: ಭತ್ತ ನೆಲಕ್ಕೆ ಚೆಲ್ಲಿ ರೈತರ ಪ್ರತಿಭಟನೆ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
MUST WATCH
ಹೊಸ ಸೇರ್ಪಡೆ
Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!
Raichur: ರಾತ್ರೋರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Kadaba: ವೃದ್ದ ದಂಪತಿಗಳ ಮನೆ ದ್ವಂಸ ಪ್ರಕರಣ; ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಪ್ರತಿಭಟನೆ
UV Fusion: ಹೃದಯದಲ್ಲಿ ಬಾಲ್ಯದ ಮಿಡಿತ
Hit & Run: ಐಷಾರಾಮಿ ಕಾರಿಗೆ ಕ್ಯಾಮರಾಮ್ಯಾನ್ ಬಲಿ; 100 ಮೀ ದೂರದಲ್ಲಿ ಪತ್ತೆಯಾಯಿತು ಮೃತದೇಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.