ಸೇವೆ ಮಾಡದಿದ್ದರೆ ರಾಜಕೀಯಕ್ಕೆ ಬರಬಾರದು
3.50.ಲಕ್ಷರೂ ವೆಚ್ಚದ ಸ್ನಾನಘಟ್ಟ, ಮೆಟ್ಟಿಲು ನಿರ್ಮಾಣ
Team Udayavani, May 23, 2022, 3:17 PM IST
ಕಂಪ್ಲಿ: ಬಡಜನರ, ಸಾರ್ವಜನಿಕರ ಹಾಗೂ ಮತದಾರರ ಸೇವೆ ಮಾಡದಿದ್ದರೆ ರಾಜಕೀಯಕ್ಕೆ ಬರಬಾರದು ಎಂದು ಮಾಜಿ ಶಾಸಕ, ಕೆಪಿಸಿಸಿ ಮಾಜಿ ಉಪಾಧ್ಯಕ್ಷ ನಾರಾ ಸೂರ್ಯನಾರಾಯಣರೆಡ್ಡಿ ಅಭಿಪ್ರಾಯ ಪಟ್ಟರು.
ಅವರು ಕೋಟೆ ನದಿ ತೀರದಲ್ಲಿ ತಮ್ಮ ಸ್ವಂತ ಹಣದಿಂದ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿರುವ 3.50. ಲಕ್ಷರೂ ವೆಚ್ಚದ ಸ್ನಾನಘಟ್ಟ, ಮೆಟ್ಟಿಲು ಮತ್ತು 18ನೇ ವಾರ್ಡಿನಲ್ಲಿ ಮುಸ್ಲಿಂರಿಗಾಗಿ ನಿರ್ಮಿಸಿರುವ 3ಲಕ್ಷರೂ ವೆಚ್ಚದ ಮದರಸಾ ಭವನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಜನರು ಸಾರ್ವಜನಿಕರ ಸೇವೆಗಾಗಿ ಆಯ್ಕೆ ಮಾಡಿರುತ್ತಾರೆ. ಆದರೆ ಅವರ ಸೇವೆ, ಸಹಾಯ ಮಾಡದಿದ್ದರೆ ಜನಪ್ರತಿನಿಧಿಗಳಾಗಿ ಆಯ್ಕೆಯಾಗಿ ಮಾಡುವುದಾದರೂ ಏಕೆ? ಜನರ ಸೇವೆ ಮಾಡದಿದ್ದರೆ ರಾಜಕಾರಣಕ್ಕೆ ಬರಬಾರದು ಎಂದರು.
ಶ್ರೀ ರಾಘವೇಂದ್ರಸ್ವಾಮಿಗಳ ಅನುಗ್ರಹದಿಂದ ಆರ್ಥಿಕವಾಗಿ ಚೆನ್ನಾಗಿದ್ದೇನೆ. ಸ್ವಾಮೀಜಿಗಳು ತಮಗೆ ನ್ಯಾಯವಾದ ಮಾರ್ಗದಲ್ಲಿ ದುಡಿ, ಜೀವನಕ್ಕೆ ಬೇಕಾಗುವಷ್ಟು ಇಟ್ಟುಕೊಂದು ಉಳಿದದ್ದನ್ನು ಅಗತ್ಯವಿರುವವರಿಗೆ ದಾನ ಮಾಡು ಎಂದು ಆರ್ಶೀವದಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ತಮ್ಮಿಂದಾದ ಸಹಾಯವನ್ನು ಸಾರ್ವಜನಿಕರಿಗೆ ಮಾಡುತ್ತಿದ್ದೇನೆ. ಇದರಲ್ಲಿ ರಾಜಕೀಯವಾಗಲಿ, ಸ್ವಾರ್ಥವಾಗಲಿ ಇಲ್ಲ. ಕಳೆದ ಕೆಲ ತಿಂಗಳುಗಳ ಹಿಂದೆ ಕಂಪ್ಲಿಗೆ ಬಂದಾಗ ನದಿ ತೀರಕ್ಕೆ ಆಗಮಿಸಿದ್ದೆ, ಆಗ ನದಿತೀರದಲ್ಲಿ ಮಹಿಳೆಯರಿಗೆ, ವೃದ್ಧರಿಗೆ ತೊಂದರೆಯಾಗುವುದನ್ನು ಗಮನಿಸಿದ್ದೆ, ಜೊತೆಗೆ 18ನೇ ವಾರ್ಡಿನಲ್ಲಿ ಮುಸ್ಲಿಂರ ಮದರಸಾ ಭವನ ಶಿಥಿಲಗೊಂಡಿದ್ದನ್ನು ವೀಕ್ಷಿಸಿದ್ದೆ ಅವರ ಅನುಕೂಲಕ್ಕಾಗಿ ಇವುಗಳನ್ನು ನಿರ್ಮಿಸಿಕೊಟ್ಟಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಕೆ. ಶ್ರೀನಿವಾಸರಾವು, ಪುರಸಭೆ ಮಾಜಿ ಅಧ್ಯಕ್ಷ ಎಂ. ಸುಧೀರ್, ಸದಸ್ಯರಾದ ಬಟ್ಟಾ ಪ್ರಸಾದ್, ಕೆ.ಎಸ್. ಚಾಂದ್ ಬಾಷಾ, ಲಡ್ಡು ಹೊನ್ನೂರವಲಿ, ಎಂ. ಉಸ್ಮಾನ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಇಟಗಿ ಬಸವರಾಜಗೌಡ, ಮುಖಂಡರಾದ ಬಿ.ನಾರಾಯಣಪ್ಪ, ವೆಂಕನಗೌಡ, ಹೊಸಕೋಟೆ ಜಗದೀಶಗೌಡ, ಕರಿಬಸವನಗೌಡ, ಎಲ್. ರಾಮಾನಾಯ್ಡು, ಕೇಶವರೆಡ್ಡಿ, ಸುರೇಶರೆಡ್ಡಿ, ಅಕ್ಕಿ ಜಿಲಾನ್, ರಾಮಕೃಷ್ಣ ಕಂಬಳಿ, ಸತ್ಯಪ್ಪ, ಶ್ರೀನಿವಾಸ್, ದಮ್ಮೂರು ವೀರೇಶ್, ಆರ್.ಪಿ. ಶಶಿಕುಮಾರ್, ಮುಸ್ಲಿಂ ಮುಖಂಡರಾದ ಹಾಜಿ ಜಿಯಾಉದ್ದೀನ್, ನವಾಬ್, ಮಹ್ಮದ್ ಗೌಸ್, ಇಸೂಫ್, ಇಸ್ಮಾಯಿಲ್, ನಿಸಾರ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.