ಹಂಪಿ ಉತ್ಸವಕ್ಕೆ ಎದುರಾಗಲಿದೆಯೇ ಚುನಾವಣಾ ವಿಘ್ನ
Team Udayavani, Dec 4, 2018, 6:00 AM IST
ಬಳ್ಳಾರಿ: ಬರ ಎದುರಾಗಿರುವ ಹಿನ್ನೆಲೆಯಲ್ಲಿರದ್ದು ಗೊಂಡಿರುವ ವಿಶ್ವವಿಖ್ಯಾತ ಹಂಪಿ ಉತ್ಸವ ಆಚರಣೆಗೆ ಈಗ ಮತ್ತೂಂದು ವಿಘ್ನ ಎದುರಾಗಿದೆ. ಒಂದು ವೇಳೆ ಸ್ಥಳೀಯ ಸಂಸ್ಥೆ ಚುನಾವಣೆ ಘೋಷಣೆಯಾದಲ್ಲಿ ಈ ವರ್ಷ ಉತ್ಸವ ನಡೆಯೋದೇ ಅನುಮಾನ.
ಬರ ಎದುರಾಗಿದ್ದರಿಂದ ಉತ್ಸವ ಬೇಡ ಎಂದ ಸರಕಾರ ಈಗ ಕಲಾವಿದರ, ಸಂಘ-ಸಂಸ್ಥೆಗಳ ಒತ್ತಡಕ್ಕೆ ಮಣಿದು ಉತ್ಸವ ಆಚರಿಸುವ ಬಗ್ಗೆ ಸ್ಪಷ್ಟ ನಿರ್ಣಯ ಕೈಗೊಳ್ಳದಿದ್ದರೂ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆಯೇ ಎಂಬ ಅನುಮಾನವೂ ಮೂಡಿದೆ. ಸ್ಥಳೀಯ ಸಂಸ್ಥೆ ಚುನಾವಣೆ ದಿನಾಂಕ ಘೋಷಣೆಯಾಗುವುದನ್ನೇ ಕಾಯುತ್ತಿರುವ ಸರಕಾರ ಹಂಪಿ ಉತ್ಸವ ಆಚರಣೆಗೆ ದಿನಾಂಕ ನಿಗದಿಪಡಿಸುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಪ್ರಸಕ್ತ ವರ್ಷ ಹಂಪಿ ಉತ್ಸವ ರದ್ದುಗೊಳಿಸಿ ಮುಂದಿನ ವರ್ಷ ಆಚರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ ಬಳಿಕ ಜಿಲ್ಲೆಯಾದ್ಯಂತ ವಿರೋಧ ವ್ಯಕ್ತವಾಗಿತ್ತು. ಕಸಾಪ, ಸಂಘ-ಸಂಸ್ಥೆಗಳು, ಹಿರಿಯ ಕಲಾವಿದರು ಸೇರಿ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಸ್ಥಳೀಯ ಸಂಸದರಿಗೂ ಮನವಿ ಸಲ್ಲಿಸಿ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಿದ್ದವು. ಒತ್ತಡಕ್ಕೆ ಮಣಿದಿದ್ದ ಸರ್ಕಾರ ನಿರ್ಧಾರ ಬದಲಿಸಿತ್ತು. ಆದರೆ, ಸ್ಥಳೀಯ ಸಂಸ್ಥೆಗಳಿಗೆ ಯಾವಾಗ ಬೇಕಾದರೂ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಯಿದೆ. ಸದ್ಯ ಉತ್ಸವ ಆಚರಣೆಗಾಗಿ ನಡೆಯುತ್ತಿರುವ ಹೋರಾಟಗಳನ್ನು ತಣಿಸಲು ರಾಜ್ಯ ಸರ್ಕಾರ ಹಂಪಿ ಉತ್ಸವ ಆಚರಿಸುವುದಾಗಿ ಹೇಳಿದಂತಿದ್ದು, ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಮತ್ತೂಮ್ಮೆ ಉತ್ಸವವನ್ನು ಮುಂದೂಡಬಹುದೆನೋ ಎಂಬ ಅನುಮಾನ ಜಿಲ್ಲೆಯ ಕಲಾವಿದರನ್ನು ಕಾಡುತ್ತಿದೆ. ಜನವರಿ 5, 6ರಂದು 2 ದಿನ, ಕೇವಲ ಎರಡು
ವೇದಿಕೆಗಳಲ್ಲಿ ಸರಳವಾಗಿ ಉತ್ಸವ ಆಚರಿಸಲಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ, ಜ.4, 5, 6 ಮೂರು ದಿನಗಳ ಕಾಲ ಧಾರವಾಡದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಅದೇ ದಿನಗಳಲ್ಲಿ ಹಂಪಿ ಉತ್ಸವ ಆಚರಿಸಬಹುದೇ ಎಂಬ ಅನುಮಾನವೂ ಜನರನ್ನು ಕಾಡುತ್ತಿದೆ.
ಸ್ಥಳೀಯ ಸಂಸ್ಥೆ ಚುನಾವಣೆ: ಇನ್ನು ರಾಜ್ಯದಲ್ಲಿ ಬಾಕಿ ಉಳಿದಿರುವ 6 ಮಹಾನಗರ ಪಾಲಿಕೆ ಸೇರಿ ಒಟ್ಟು 101 ಸ್ಥಳೀಯ ಸಂಸ್ಥೆಗಳಿಗೆ ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆ ನಡೆಸಲು ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು
ನೇಮಿಸಿ ಡಿ.15ರೊಳಗಾಗಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಅಲ್ಲದೇ, 2019ರಲ್ಲಿ ಲೋಕ ಸಭೆಗೆ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಮತದಾರರ ಕರಡು ಪ್ರತಿಯನ್ನು ಘೋಷಣೆ ಮಾಡಿದ್ದು, ಜ.15 ರಂದು ಅಧಿಕೃತಗೊಳ್ಳುವ ಸಾಧ್ಯತೆಯಿದೆ. ಹಾಗಾಗಿ ಸ್ಥಳೀಯ ಸಂಸ್ಥೆಗಳಿಗೆ ಯಾವಾಗ ಬೇಕಾದರೂ ಚುನಾ ವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆಯಿದೆ. ಇದನ್ನೆಲ್ಲ ಗಮನಿಸಿರುವ ರಾಜ್ಯ
ಸರ್ಕಾರ, ಜಿಲ್ಲಾಡಳಿತ ಸದ್ಯ ಜಿಲ್ಲೆಯಲ್ಲಿ ಎದ್ದಿರುವ ಹೋರಾಟದ ಕಾವು ತಣಿಸುವ ಸಲುವಾಗಿ ಹಂಪಿ ಉತ್ಸವವನ್ನು ಆಚರಿಸುವುದಾಗಿ ಹೇಳುವ ಮೂಲಕ ಕಲಾವಿದರ ಮೂಗಿಗೆ ತುಪ್ಪ ಸವರಲು ಮುಂದಾಗಿದೆ ಎಂದು ಜಿಲ್ಲೆಯ ಪ್ರಜ್ಞಾವಂತ ನಾಗರಿಕರು,
ಕಲಾವಿದರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.
ಸರಳ ಆಚರಣೆ: ಹಂಪಿ ಉತ್ಸವ ಆಚರಣೆಗೆ ಸಂಬಂಧಿಸಿದಂತೆ ಸಿಎಂ ಕುಮಾರಸ್ವಾಮಿ, ಸಚಿವ ಡಿ.ಕೆ. ಶಿವಕುಮಾರ್ ಉತ್ಸವಕ್ಕೆ ತಗಲುವ ವೆಚ್ಚದ ಬಗ್ಗೆ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ಮೇಲಾಗಿ ಅದ್ದೂರಿಯಾಗಿ 3 ದಿನ
ಆಚರಿಸಲಾಗುತ್ತಿದ್ದ ಉತ್ಸವವನ್ನು 2 ದಿನ ಸರಳವಾಗಿ ಆಚರಿಸುವುದು ಸರ್ಕಾರದ ಉದ್ದೇಶ ಎನ್ನಲಾಗಿದೆ. ಜನವರಿಯಲ್ಲೇ ಎದುರಾಗಿದ್ದ ವಿಘ್ನ ಹಂಪಿ ಉತ್ಸವವನ್ನು ಈವರೆಗೂ ಮೂರು ಬಾರಿ 2001, 2010, 2011ರಲ್ಲಿ ಜನವರಿ ತಿಂಗಳಲ್ಲಿ ಆಚರಿಸಲಾಗಿದೆ. ಈ ಪೈಕಿ ಎರಡು ಬಾರಿ ಉತ್ಸವ ಆರಂಭಗೊಳ್ಳಬೇಕಿದ್ದ ದಿನದಂದೇ ವಿಘ್ನಗಳು ಎದುರಾಗಿವೆ. 2001ರಲ್ಲಿ
ಜನವರಿ 26, 27, 28ರಂದು ಉತ್ಸವ ಆಚರಿಸಲು ನಿರ್ಧರಿಸಲಾಗಿತ್ತು. ಆದರೆ ಜ.26 ರಂದೇ ಹೊಸ ಪೇಟೆಯ ಅಂದಿನ ತಾಪಂ ಅಧ್ಯಕ್ಷರ ಹತ್ಯೆ ನಡೆದಿದ್ದರಿಂದ ಉತ್ಸವ ರದ್ದುಗೊಂಡಿತ್ತು. ಬಳಿಕ 2010ರಲ್ಲಿ ಜ.26,27,28 ರಂದು ಹಂಪಿ ಉತ್ಸವ ಬದಲಿಗೆ ಮೊದಲ
ಬಾರಿಗೆ ಶ್ರೀಕೃಷ್ಣದೇವರಾಯರ 500ನೇ ಪಟ್ಟಾಭಿಷೇಕದ ಹೆಸರಲ್ಲಿ ಉತ್ಸವ ಆಚರಿಸಲು ಎಲ್ಲಾ ಸಿದ್ಧತೆ ಮಾಡಲಾಗಿತ್ತು. ಆದರೆ, ಜ.26ರಂದೇ ಬಳ್ಳಾರಿಯ ಗಾಂಧಿನಗರದಲ್ಲಿನ ಬೃಹತ್ ಅಪಾರ್ಟ್‌ಮೆಂಟ್ ಕುಸಿದು 29 ಕಾರ್ಮಿಕರು ಸಾವಿಗೀಡಾಗಿದ್ದರು.
ವೆಂಕೋಬಿ ಸಂಗನಕಲ್ಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.