ಮಾದರಿಯಾದ ಅಗ್ನಿಶಾಮಕ ದಳ ಸಿಬ್ಬಂದಿ ಹಸಿರು ಪ್ರೇಮ
ನಿರುಪಯುಕ್ತ ಪ್ಲಾಸ್ಟಿಕ್ ಗ್ಲಾಸ್‌ನಲ್ಲಿ ಸಸಿ ಪ್ಲಾಂಟೇಷನ್ | ಖರ್ಚು-ವೆಚ್ಚಕಿಲ್ಲ ಅವಕಾಶ | ಹಿರಿಯ ಅಧಿಕಾರಿಗಳ ಪ್ರೋತ್ಸಾಹ
Team Udayavani, Oct 16, 2020, 6:05 PM IST
ಸಿರುಗುಪ್ಪ: ನಗರದಲ್ಲಿ ಕಾರ್ಯನಿರ್ವಹಿಸುವ ಅಗ್ನಿಶಾಮಕ ದಳದ ಸಿಬ್ಬಂದಿಯು ಯಾವುದೇ ದುಡ್ಡಿನ ಖರ್ಚು ವೆಚ್ಚವಿಲ್ಲದೆ ತಮ್ಮ ಠಾಣೆಯಲ್ಲಿ ಗಿಡಮರಗಳನ್ನು ಪೋಷಿಸುತ್ತಿದ್ದು, ಠಾಣೆಯಸುತ್ತಮುತ್ತ ಅನೇಕ ರೀತಿಯ ಗಿಡಮರಗಳು ನಳನಳಿಸುತ್ತಿವೆ.
ಪ್ಲಾಸ್ಟಿಕ್ ಲೋಟಗಳು, ಇರುವೆ ಹುತ್ತಿನ ಮಣ್ಣು, ಪಾರಿವಾಳ ಗೊಬ್ಬರ ಮತ್ತು ತಮ್ಮಲ್ಲಿ ದೊರೆಯುವ ಪ್ಲಾಂಟೇಷನ್ ಗಿಡಗಳನ್ನು ಪ್ಲಾಸ್ಟಿಕ್ ಬಾಟಲ್‌ನಲ್ಲಿ ಬೆಳೆಸಿ ಠಾಣೆಯ ಆವರಣದಲ್ಲಿ ನೆಡುವ ಕಾರ್ಯವನ್ನು ಇಲ್ಲಿನ ಸಿಬ್ಬಂದಿ ಮಾಡಿ ಸ್ಥಳೀಯರಮೆಚ್ಚುಗೆಗೆ ಕಾರಣರಾಗಿದ್ದಾರೆ. ಮದರ್ ಟ್ರೀ, ಕುಟ್ರನ್, ದಾಸವಾಳ, ಕ್ಯಾಟ್‌ಐ, ಪಪ್ಪಾಯ, ಕಣಗಲ, ಬಾದಾಮಿ,ನುಗ್ಗೆ ಮತ್ತು ಉದ್ಯಾನವನದ ಅಲಂಕಾರಿಕ ಬಳ್ಳಿಗಳನ್ನು ನಿರುಪಯುಕ್ತ ಪ್ಲಾಸ್ಟಿಕ್ ಲೋಟಗಳಲ್ಲಿಕರಿ ಇರುವೆಗಳು ಭೂಮಿಯಿಂದ ಹೊರಹಾಕಿದ ಮಣ್ಣು ಮತ್ತು ಪಾರಿವಾಳಗಳು ಹಾಕಿದ ಹಿಕ್ಕೆಯ ಗೊಬ್ಬರವನ್ನು ಮಣ್ಣಿನೊಂದಿಗೆ ಬೆರೆಸಿ ತುಂಬಿವಿವಿಧ ಜಾತಿಯ ಗಿಡ ಮತ್ತು ಬಳ್ಳಿಗಳನ್ನು ಇಲ್ಲಿನ ಸಿಬ್ಬಂದಿಯು ಕಾಳಜಿಯಿಂದ ಬೆಳೆಸಲು ಮುಂದಾಗಿದ್ದಾರೆ.
ತಮ್ಮಲ್ಲಿಯೇ ಬೆಳೆದ ಅಲಂಕಾರಿಕ ಬಳ್ಳಿಯನ್ನು ಅಗ್ನಿಶಾಮಕ ಠಾಣೆಯ ರಸ್ತೆಯ ಎರಡೂ ಬದಿಗೆ ಬೆಳೆಸಿದ್ದು, ನೋಡಲು ಸುಂದರವಾಗಿ ಕಾಣುತ್ತಿದೆ. ಅಲ್ಲದೆ ವಿವಿಧ ಜಾತಿಯ ಸಸಿಗಳನ್ನು ಬೆಳೆಸಿ ತಮ್ಮ ಕಚೇರಿಯ ಆವರಣದಲ್ಲಿಯೇನೆಟ್ಟು ಬೆಳೆಸುತ್ತಿದ್ದಾರೆ. ಇದರಿಂದಾಗಿ ಠಾಣೆಯ ಆವರಣವು ಹಸಿರುಮಯವಾಗಿ ವಿವಿಧ ಜಾತಿಯಗಿಡಮರಗಳಿಂದ ಕಂಗೊಳಿಸುತ್ತಿದ್ದು, ಅನೇಕಜಾತಿಯ ಪಕ್ಷಿಗಳು ಗಿಡಮರಗಳಲ್ಲಿ ತಮ್ಮ ವಾಸಸ್ಥಾನ ಮಾಡಿಕೊಂಡಿವೆ. ಸಿಬ್ಬಂದಿ ಎಚ್.ಆರ್.ಶೇಕ್ಷಾವಲಿ ಮತ್ತು ಸಹಾಯಕ ಸಿಬ್ಬಂದಿ ಕಚೇರಿ ಆವರಣವನ್ನು ಹಸರೀಕರಣ ಮಾಡಲು ಮುಂದಾಗಿದ್ದು, ಖರ್ಚು ವೆಚ್ಚವಿಲ್ಲದೆ ತಮ್ಮಲ್ಲಿ ದೊರೆಯುವ ವಸ್ತುಗಳನ್ನು ಉಪಯೋಗಿಸಿಕೊಂಡು ತಮ್ಮ ಠಾಣೆಯ ಆವರಣದಲ್ಲಿರುವ ಸಸಿಗಳನ್ನು ಕಸಿ ಮಾಡಿ ಬೆಳೆಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಕೆಲಸವಿಲ್ಲದ ಸಂದರ್ಭದಲ್ಲಿ ಗಿಡಮರಗಳನ್ನು ಯಾವುದೇ ವೆಚ್ಚವಿಲ್ಲದೆ ಸ್ಥಳೀಯವಾಗಿ ಸಿಗುವ ವಸ್ತುಗಳನ್ನು ಬಳಸಿ ಬೆಳೆಸುತ್ತಿದ್ದೇವೆ.ಇದರಿಂದ ಠಾಣೆಯ ಆವರಣ ಹಸಿರಿನಿಂದ ಕಂಗೊಳಿಸುತ್ತಿದೆ ಎಂದು ಇದಕ್ಕೆ ಸಹಾಯಕ ಠಾಣಾ ಧಿಕಾರಿ ಶರಣಪ್ಪರ ಸಹಕಾರ ಇದೆ. – ಎಚ್.ಆರ್. ಶೇಕ್ಷಾವಲಿ, ಅಗ್ನಿಶಾಮಕ ಸಿಬ್ಬಂದಿ.
-ಆರ್.ಬಸವರೆಡ್ಡಿ ಕರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.