![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jan 11, 2022, 2:06 PM IST
ಕುರುಗೋಡು: ತಾಲೂಕು ಸಮೀಪದ ಕರ್ಚೆಡು ಗ್ರಾಮದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಛೇರಿ, ಮೆ :ಮಾರುತಿ ಇನಾಸ್ಟಕ್ಚರ್ ಮತ್ತು ಡೆವಲಪರ್ಸ್ ಇವರು ವೇದಾವತಿ (ಹಗರಿ ) ನದಿ ತೀರದಲ್ಲಿರುವ ಕರ್ಚೆಡು ಮರಳು ಗಣಿಗಾರಿಕೆ ವಲಯ ಬಿ ಎಲ್ ವೈ – ಓ ಎಸ್ ಬಿ -13ಸರ್ವೇ ನಂಬರ್ 191 ಒಟ್ಟು 25 ಎಕರೆ ಪ್ರದೇಶ ದಲ್ಲಿ ಪ್ರತಿ ವರ್ಷ ಕ್ಕೆ 99000 ಟನ್ ಸಾಮರ್ಥ್ಯ ದ ನದಿ ಮರಳು ಗಣಿ ಗಾರಿಕೆ ಮಾಡುವ ಉದ್ದೇಶಕ್ಕಾಗಿ ಯೋಜನಾ ಪ್ರದೇಶ ದಲ್ಲಿ ಗ್ರಾಮದಲ್ಲಿ ವಾಸವಾಗಿರುವ ಪರಿಸರಾಸಕ್ತರ ನಿವಾಸಿಗಳು ಪರಿಸರಾಸಕ್ತರ ಗುಂಪುಗಳು ಮತ್ತು ಈ ಯೋಜನೆ ಯಿಂದ ತೊಂದರೆ ಒಳಗಾಗಬಹುದಾದ ಸಾರ್ವಜನಿಕರಿಂದ ಸಲಹೆ ಸೂಚನೆ, ಅನಿಸಿಕೆ, ಟೀಕೆ ಟಿಪ್ಪಣಿ ಹಾಗೂ ಆಹವಾಲು ಗಳನ್ನು ಪರಿಸರ ಸಾರ್ವಜನಿಕ ಸಮಿತಿಯ ಮುಖ್ಯಸ್ಥರಾದ ಅಪಾರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪರಿಸರ ಸಾರ್ವಜನಿಕ ಅಲಿಕೆ ಸಭೆ ಯನ್ನು ನಡೆಸಲಾಯಿತು.
ಈ ಸಭೆಯಲ್ಲಿ ಕರ್ಚೆಡು ಗ್ರಾಮದ ಬಹುತೇಕ ರೈತರು ಹಾಗೂ ಪ್ರಜ್ಞಾವಂತರು ಗ್ರಾಮದಲ್ಲಿ ಹರಿಯುವ ವೇದಾವತಿ ನದಿಯ ತೀರದಲ್ಲಿ ಗಣಿಗಾರಿಕೆ ನಡೆಸುವುದರಿಂದ ಬಸರಕೋಡು, ಕರ್ಚೆಡು, ಹಡ್ಲಿಗಿ ಗ್ರಾಮಗಳು ಅಭಿವೃದ್ಧಿ ಯಲ್ಲಿ ಹಿಂದುಳಿದ ಗ್ರಾಮಗಳಾಗಿದ್ದು ಇದರಿಂದ ಅಭಿವೃದ್ಧಿಯ ಪತದತ್ತ ನಡೆಯುವ ಸನ್ನಿವೇಶ ಇದ್ದು, ಗಣಿಗಾರಿಕೆ ಟೆಂಡರ್ ಪಡೆಯುವವರು ಗ್ರಾಮಗಳ ಅಭಿವೃದ್ಧಿ ಕಡೆಗೆ 25 ರಷ್ಟು ಒತ್ತು ನೀಡಬೇಕು ಎಂದು ಅಭಿಪ್ರಾಯ ಹಂಚಿಕೊಂಡರು.
ಇನ್ನೂ ಹಲವು ರೈತರು ಹಾಗೂ ಗ್ರಾಮಸ್ಥರು ನದಿ ತೀರದಲ್ಲಿ ಗಣಿಗಾರಿಕೆ ನಡೆಸುವುದರಿಂದ ಗ್ರಾಮದಲ್ಲಿ ಅಂತರ್ ಜಲ ಮಟ್ಟ ಕುಸಿತ ಗೊಳ್ಳುತ್ತದೆ, ಕುಡಿಯುವ ಶುದ್ಧ ನೀರಿಗೂ ಅಭಾವ ಉಂಟಾಗಲಿದೆ ಅಲ್ಲದೆ ಗ್ರಾಮದ ಬಹುತೇಕ ರೈತರು ಕಾಲುವೆ ನೀರಿನ ಅಭಾವದಿಂದ ಬೆಳೆ ಬೆಳೆಯಲು ಮತ್ತು ಹೊಲ ಗದ್ದೆಗಳಿಗೆ ನೀರು ಉಣಿಸಲು ವೇದಾವತಿ ನದಿಗೆ ಗಂಗಾ ಕಲ್ಯಾಣ ಯೋಜನೆ ಹಾಗೂ ಮುಂತಾದ ಯೋಜನಡಿ ಪಂಪ್ ಸೆಟ್ ಗಳು ಅಳವಡಿಸಿ ಹಲವು ವಿವಿಧ ಬೆಳೆಗಳು ಬಿತ್ತನೆ ಮಾಡಿದ್ದಾರೆ.
ಇದರಿಂದ ಮುಂದಿನ ಕಡು ಬಡ ರೈತರಿಗೆ ತಮ್ಮ ಬೆಳೆ ಬೆಳೆಯಲು ತುಂಬಾ ತೊಂದ್ರೆ ಆಗುತ್ತದೆ ಆದ್ದರಿಂದ ಗಣಿ ಗಾರಿಕೆ ನಡೆಸದಂತೆ ವಿರೋಧ ವ್ಯಕ್ತ ಪಡಿಸುವುದರ ಜೊತೆಗೆ ಲಿಖಿತವಾಗಿ ಮನವಿ ಸಲ್ಲಿಸಿದರು.
ಇನ್ನೂ ಮೂರು ಗ್ರಾಮಗಳ ವ್ಯಾಪ್ತಿಗೆ ಒಳ ಪಡುವ ಬಸರಕೋಡು ಗ್ರಾಪಂಯ ಹಲವು ಸದಸ್ಯರು ಸರಕಾರ ನಿಯವಳಿಗಳ ಪ್ರಕಾರ ಅಧಿಕಾರಿಗಳು ಸರ್ವೇ ಮಾಡಿ ಸರಕಾರ ಭೂಮಿ ಯಲ್ಲಿ ಅವರು ಗಣಿ ಗಾರಿಕೆ ನಡೆಸಲು ಈ ಗಾಗಲೇ 2016 ರಲ್ಲಿ ಟೆಂಡರ್ ಅದ ಗಣಿ ಗಾರಿಕೆ ವಿಷಯ ಕ್ಕೆ ಸಂಬಂಧ ಪಟ್ಟಕ್ಕೆ ಸಲಹೆ ಸೂಚನೆ ಗಳು ಪಡಿಯಲು ಬಂದಿದ್ದಾರೆ ಇದರಿಂದ ಗ್ರಾಮಗಳ ಅಭಿವೃದ್ಧಿ ಮತ್ತು ಇತರೆ ಅಭಿವೃದ್ಧಿ ಗಳು ಗಲಿವೆ ಇದರಿಂದ ಅನುಕೂಲತೆಗಳು ಕೂಡ ಹೆಚ್ಚು ಎಂದು ಬಂದಂತಹ ಅಧಿಕಾರಿಗಳ ವಿಡಿಯೋ ಕನಪಾರೆನ್ಸ್ ನಲ್ಲಿ ಮಾತನಾಡಿದರು.
ಇದಕ್ಕೆ ಕೊನೆಯದಾಗಿ ಅಪಾರ ಜಿಲ್ಲಾಧಿಕಾರಿ ಮಂಜುನಾಥ ಮಾತನಾಡಿ, ಮರಳು ಗಾಣಿಗಾರಿಕೆ ಯನ್ನು ಕರ್ಚೆಡು ಗ್ರಾಮದಲ್ಲಿ ನಡೆಸಲು ಸರಕಾರ ನೀಡಿರುವ ಟೆಂಡರ್ ಪರಿಕ್ರಿಯೆ ಬಗ್ಗೆ ಅದರ ವ್ಯಾಪ್ತಿಯ ಜನರಿಂದ ಸಲಹೆ ಸೂಚನೆ ಗಳು ಪಡಿಯಲು ಸಭೆ ಹಮ್ಮಿಕೊಳ್ಳಲಾಗಿದ್ದು ಈ ಸಭೆ ಯಲ್ಲಿ ಬಂದ ಪರ ವಿರೋಧಗಳ ನ್ನು ಸರಕಾರದ ಗಮನಕ್ಕೆ ತರಲಾಗುವುದು ನಂತರ ಬಂದ ವರದಿಯ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಬಸರಕೋಡ ಗ್ರಾಪಂ ಸದಸ್ಯರು ಹಾಗೂ ಉಪಾಧ್ಯಕ್ಷರು ಮತ್ತು ಸುತ್ತ ಮುತ್ತಲಿನ ಗ್ರಾಮಗಳ ಮುಖಂಡರು, ಪ್ರಜ್ಞಾವಂತರು, ಬುದ್ದಿ ಜೀವಗಳು ಪಾಲ್ಗೊಂಡಿದ್ದರು.
Hosapete: ತುಂಬಿದ ಕೊಡ ತುಳುಕಿತಲೇ ಪರಾಕ್.. ಶ್ರೀಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ
Kampli: ಕಣವಿ ತಿಮ್ಮಾಪುರದಲ್ಲಿ ಶ್ರೀ ಕೃಷ್ಣದೇವರಾಯನ ಕಾಲದ ತೆಲುಗು ಶಾಸನ ಪತ್ತೆ
BJP: ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೆ ಎಲ್ಲರನ್ನೂ ಒಂದುಗೂಡಿಸುವೆ: ಬಿ.ಶ್ರೀರಾಮುಲು
Prayagraj: ಕುಂಭಮೇಳದಲ್ಲಿ ಶ್ರೀರಾಮುಲು ದಂಪತಿಯಿಂದ ಪುಣ್ಯಸ್ನಾನ
Siruguppa: ತಹಶೀಲ್ದಾರ್ ಗೆ ಬೆದರಿಕೆ ಪ್ರಕರಣ, ಕೇಸು ದಾಖಲು
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.