ತರಕಾರಿ ಮಾರುಕಟ್ಟೆಗೆ ಸೌಕರ್ಯ ಮರೀಚಿಕೆ
ಕೊಟ್ಟೂರು ತಾಲೂಕು ಆದ್ರೂ ತರಕಾರಿ ಮಾರ್ಕೆಟ್ ಇಲ್ಲ; ಕೆಸರು ಮಧ್ಯದಲ್ಲೇ ತರಕಾರಿ ಮಾರಾಟ
Team Udayavani, Jul 22, 2022, 4:58 PM IST
ಕೊಟ್ಟೂರು: ಪಟ್ಟಣದ ತೇರು ಬಯಲಿನಲ್ಲಿ ತರಕಾರಿ ಸಂತೆ ನಡೆಯುತ್ತಿದೆ. ಇಲ್ಲಿಗೆ ತಾಲೂಕಿನ ಸುತ್ತಮುತ್ತಲಿನ ರೈತರು ತಾವು ಬೆಳೆದ ತರಕಾರಿ ಮಾರಾಟ ಮಾಡಲು ಬರುತ್ತಾರೆ. ಆದರೆ ಸಮರ್ಪಕ ಸೌಕರ್ಯ ಇಲ್ಲದೆ ರೈತರು ಹಾಗೂ ಗ್ರಾಹಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದ ತೇರು ಬಯಲು ಪ್ರದೇಶದಲ್ಲಿರುವ ತರಕಾರಿ ಮಾರುಕಟ್ಟೆ ಮಳೆ ಬಂದರೆ ಸಾಕು ಈ ಪ್ರದೇಶವೆಲ್ಲ ಕೆಸರುಗದ್ದೆಯಂತೆ ಆಗುತ್ತದೆ. ರೈತರು ತಾವು ತಂದ ಬೆಳೆಯು ಸರಿಯಾದ ಬೆಲೆ ಇಲ್ಲದೆ ಒಂದು ಕಡೆ ಮತ್ತು ಕೆಸರು ಮಧ್ಯದಲ್ಲೇ ನಿಂತು ತಮ್ಮ ತರಕಾರಿ ಮಾರುವ ಸ್ಥಿತಿ ನಿರ್ಮಾಣವಾಗಿದೆ.
ವ್ಯಾಪಾರಸ್ಥರು ಮತ್ತು ರೈತರು ಬೀದಿ ವ್ಯಾಪಾರಿಗಳು ಗೋಳು ಕೇಳುವವರು ಯಾರು ಇಲ್ಲದಂತಾಗಿದೆ. ಪಟ್ಟಣ ಪಂಚಾಯತಿ ಒದಗಿಸಬೇಕಾದ ಕನಿಷ್ಟ ಮೂಲ ಸೌಕರ್ಯ ಸಹ ನೀಡುತ್ತಿಲ್ಲ. ಹೀಗಾದರೆ ನಮ್ಮ ಸಮಸ್ಯೆಗಳನ್ನು ಬಗೆಹರಿಸುವವರು ಯಾರು? ತರಕಾರಿ ಮಾರುಕಟ್ಟೆಗೆ ಸ್ಥಳ ನಿಯೋಜನೆ ಮಾಡಿಕೊಡುತ್ತೇವೆ ಎಂದು ಸ್ಥಳೀಯ ಶಾಸಕರು ಭರವಸೆ ನೀಡುತ್ತಾರೆ. ಇಲ್ಲಿತನಕ ಸೂಕ್ತ ತರಕಾರಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ಕೊಟ್ಟಿಲ್ಲ. ನಾವು ಪ್ರತಿದಿನ ನಿತ್ಯ ಕೆಸರು ಗದ್ದೆಯಲ್ಲಿ ಜೀವನ ಮಾಡುವ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ ತರಕಾರಿ ಮಾರಾಟಗಾರರು ಹಾಗೂ ರೈತರು.
ಖಾಸಗಿ ಬಸ್ ನಿಲ್ದಾಣ ಹಾಗೂ ಸಂತೆ ಮಾರುಕಟ್ಟೆ ಸೇರಿ ಒಂದೇ ಜಾಗದಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಮಳೆ ಬಂದರೆ ಈ ಪ್ರದೇಶವು ಕೆಸರು ಗದ್ದೆಯಂತೆ ಆಗುತ್ತದೆ. ತಮ್ಮ ತಮ್ಮ ಊರುಗಳಿಂದ ಬರುವ ಪ್ರಯಾಣಿಕರು ಕೆಸರಿನಲ್ಲೇ ಇಳಿದು ಕೆಸರನಲ್ಲೇ ಬಸ್ ಹತ್ತಬೇಕು. ಪಟ್ಟಣದ ಜನತೆಯು ಕೆಸರುಗದ್ದೆ ನೋಡಿ ತರಕಾರಿ ಕೊಂಡೊಯ್ಯಲು ಸಹ ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಒಬ್ಬ ಅಧಿಕಾರಿಗಳಾಗಲಿ, ಜನಪ್ರತಿನಿಧಿ ಗಳಾಗಲಿ ಗಮನ ಹರಿಸುತ್ತಿಲ್ಲ ಎಂದು ನಾಗರಿಕರು ದೂರಿದ್ದಾರೆ.
ಕೊಟ್ಟೂರು ತಾಲೂಕು ಆದ್ರೂ ತರಕಾರಿ ಮಾರುಕಟ್ಟೆಗೆ ಸೂಕ್ತ ಜಾಗವಿಲ್ಲ. ಪಟ್ಟಣಕ್ಕೆ ವಿವಿಧ ಹಳ್ಳಿಗಳ ರೈತರು ತಮ್ಮ ತಮ್ಮ ವಾಹನದಲ್ಲಿ ತರಕಾರಿ ಮಾರಾಟ ಮಾಡಲು ಬರುತ್ತಾರೆ. ಆದರೆ ಸಣ್ಣ ಮಳೆ ಬಂದರೆ ಸಾಕು ಕೆಸರಗದ್ದೆಯಂತೆಯಾಗಿ ಈ ಸಂತೆ ಮೈದಾನ ನೀರು ಕೆಸರು ಗದ್ದೆಯಲ್ಲಿ ಮುಳುಗಿರುತ್ತದೆ. ನಾವು ತಂದಿರುವಂತಹ ತರಕಾರಿಗಳನ್ನು ಕೊಂಡೊಯ್ಯಲು ಗ್ರಾಹಕರು ಸಹ ಹಿಂದೇಟು ಹಾಕುತ್ತಿದ್ದಾರೆ. ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳು ಸೂಕ್ತ ತರಕಾರಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ಕೊಡಬೇಕು. –ತರಕಾರಿ ಬೆಳೆಗಾರ.
ಸೂಕ್ತ ತರಕಾರಿ ಮಾರುಕಟ್ಟೆ ಕಲ್ಪಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆದಷ್ಟು ಬೇಗನೆ ತಾಲೂಕಲ್ಲಿ ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಿಕೊಡುತ್ತೇನೆ. –ಎಸ್.ಭೀಮನಾಯ್ಕ, ಶಾಸಕರು
-ರವಿಕುಮಾರ್ ಎಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ: ಜನಾರ್ದನ ರೆಡ್ಡಿ
ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.