ಭತ್ತಕ್ಕೆ ಸಿಗದ ಬೆಂಬಲ ಬೆಲೆ: ರೈತ ಕಂಗಾಲು

ಮಿಲ್‌ಗ‌ಳಿಗೆ ಮಾರಾಟ ಮಾಡಲು ಮುಂದಾದ ರೈತರು,ಕಟಾವು ಸಂದರ್ಭ ರೋಗ ಬಂದು ಬೆಳೆ ಹಾನಿ

Team Udayavani, Dec 18, 2020, 6:39 PM IST

ಭತ್ತಕ್ಕೆ ಸಿಗದ ಬೆಂಬಲ ಬೆಲೆ: ರೈತ ಕಂಗಾಲು

ಕುರುಗೋಡು: ರೈತರು ಬೆಳೆದ ಭತ್ತದ ಬೆಳೆಗಳಿಗೆ ಸೂಕ್ತವಾದ ಬೆಂಬಲ ಬೆಲೆ ಸಿಗದೆ ಕಟಾವು ಮಾಡಿದ ಭತ್ತಗಳು ಖರೀದಿಯಾಗದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ದಲ್ಲಾಳಿಗಳು ರೈತರು ಬೆಳೆದ ಬೆಳೆಗಳನ್ನು ಬಾಯಿಗೆ ಬಂದಾಂಗೆ ಕೇಳುವುದರಿಂದ ಭತ್ತಗಳನ್ನು ರಸ್ತೆಗಳ ಪಕ್ಕದಲ್ಲಿ ಹಾಕಿ ನಿತ್ಯ ಕಾರ್ಮಿಕರೊಂದಿಗೆ ಒಣಗಿಸಬೇಕಾಗಿದೆ. ಈಗಾಗಲೇ ನದಿ ಪಕ್ಕದ ರೈತರು ವರ್ಷದ ಮೊದಲನೇ ಬೆಳೆ ಕಟಾವು ಮಾಡಿ ಎರಡನೇಬೆಳೆ ಬೆಳೆಯುವುದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಕಾಲುವೆ ಭಾಗದ ರೈತರಿಗೆ ತಡವಾಗಿ ನೀರು ಸಿಕ್ಕ ಕಾರಣ ಸದ್ಯ ಈಗ ಭತ್ತದ ಬೆಳೆಗಳು ಕಟಾವಿಗೆ ಬಂದಿವೆ.

ಮಾರುಕಟ್ಟೆಯಲ್ಲಿ ಸೂಕ್ತವಾದ ಬೆಂಬಲಿತ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿಕೊಂಡು ಬೆಳೆಗೆ ವ್ಯಯಿಸಿದ ಹಣವನ್ನು ತೆಗೆದುಕೊಳ್ಳಲಾಗದ ಸ್ಥಿತಿಯಲ್ಲಿ ಮುಳುಗಿದ್ದಾರೆ. ಸ್ವತ ರೈತರೇ ಟ್ರ್ಯಾಕ್ಟರ್‌ಗಳನ್ನು ಬಾಡಿಗೆ ಮಾಡಿಕೊಂಡು ಅದರಲ್ಲಿ ಭತ್ತದ ಮೂಟೆಗಳನ್ನು ಹಾಕಿಕೊಂಡು ದೂರದ ತಾಲೂಕು, ಜಿಲ್ಲೆಗಳಿಗೆ ತೆರಳಿ ಮಿಲ್‌ಗ‌ಳಲ್ಲಿಮಾರಾಟ ಮಾಡಿಕೊಳ್ಳಲು ಮುಂದಾಗಿದ್ದಾರೆ. ಇನ್ನೂಕೆಲ ರೈತರು ಮುಂದಿನ ವರ್ಷ ಉತ್ತಮ ಬೆಲೆ ಸಿಕ್ಕಾಗಮಾರಾಟ ಮಾಡಿದ್ರಾಯ್ತು ಎಂಬ ಲೆಕ್ಕಾಚಾರದಲ್ಲಿ ತಮ್ಮ ತಮ್ಮ ಗೋದಾಮುಗಳಲ್ಲಿ ಭತ್ತಗಳನ್ನು ಸ್ಟಾಕ್‌ ಮಾಡಿಕೊಳ್ಳುತ್ತಿದ್ದಾರೆ.

ಪಟ್ಟಣದ ಸುತ್ತ ಬಹುತೇಕ ಕಲ್ಲುಕಂಭ, ಸೋಮಲಾಪುರ, ಎಮ್ಮಿಗನೂರು, ಒರಾÌಯಿ,ಗುತ್ತಿಗನೂರು, ಪಟ್ಟಣಶೇರುಗು, ಏಳುಬೆಂಚಿ, ಎಚ್‌.ವೀರಾಪುರ, ಸಿಂದಿಗೇರಿ, ಬೈಲೂರು ಸೇರಿದಂತೆ ಇತರೆಗ್ರಾಮಗಳ ಕಾಲುವೆ ಭಾಗದ ರೈತರು ತಡವಾಗಿ ಭತ್ತನಾಟಿ ಮಾಡಿದ್ದು, ಸದ್ಯ ಕಟಾವು ಮಾಡುತ್ತಿದ್ದಾರೆ.ಅದರೆ ಬೆಂಬಲಿತ ಬೆಲೆ ಇಲ್ಲದ ಕಾರಣ ರಸ್ತೆ ಪಕ್ಕದಲ್ಲೆಯೇ ರೈತರು ಬೆಳೆದ ಭತ್ತವು ರಾಶಿ ಗಟ್ಟಲೇ

ಹಾಗೇ ಇವೆ. ಇದರಲ್ಲಿ ಕೆಲ ರೈತರು ಮಿಲ್‌ಗ‌ಳಿಗೆತೆಗೆದುಕೊಂಡು ಹೋಗಿ ಮಾರಾಟ ಮಾಡಿದ್ರೆ ಇನ್ನೂಕೆಲ ರೈತರು ಸರಕಾರ ತೆರೆದ ಭತ್ತ ಖರೀದಿ ಕೇಂದ್ರಕ್ಕೆತೆರಳಿ ಕ್ವಿಂಟಲ್‌ಗೆ 1850 ರೂದಂತೆ ಮಾರಾಟ ಮಾಡುತ್ತಿದ್ದಾರೆ. ಕಳೆದ ವರ್ಷ ಆರ್‌.ಎನ್‌.ಆರ್‌ 1400ರಿಂದ 1500 ವರಗೆ ಬೆಲೆ ಸಿಕ್ಕಿದ್ದು, ಈ ವರ್ಷ1250ರಿಂದ 1300ವರೆಗೂ ಮಾತ್ರ ಬೆಲೆ ಸಿಕ್ಕಿದೆ.ನೆಲ್ಲೂರು ಸೋನಾ ಕಳೆದ ವರ್ಷ 1200 ಇದ್ರೆ ಈವರ್ಷ 1050ರಿಂದ 1100ವರೆಗೂ ಮಾತ್ರ ಇದ್ದು,ರೈತರನ್ನು ನಷ್ಟಕ್ಕೆ ತಂದೊಡ್ಡಿದೆ. ಆದರೂ ಈ ವರ್ಷ ನದಿ ದಂಡೆಯ ಹಾಗೂ ಕಾಲುವೆ ಭಾಗದ ರೈತರು ಬೆಳೆದ ಭತ್ತದ ಬೆಳೆಗೆ ಸೂಕ್ತವಾದ ಬೆಂಬಲಿತ ಬೆಲೆ ಸಿಗದೆ ತುಂಬ ನಷ್ಟದ ಹಾದಿ ಹಿಡಿದಿದ್ದಾರೆ. ಅದರಲ್ಲಿಕಟಾವಿಗೆ ಬಂದ ಸಮಯದಲ್ಲಿ ಭತ್ತಕ್ಕೆ ರೋಗ ಹರಡಿ ಇಳುವರಿ ಕುಂಠಿತಗೊಂಡು ಎಕರೆಗೆ 30ರಿಂದ 35 ಚೀಲದಂತೆ ಬೆಳೆದಿದ್ದಾರೆ. ಇದರಿಂದ ಬೆಳೆಗೆ ವ್ಯಯಿಸಿದ ಹಣ ತೆಗೆದುಕೊಳ್ಳದೆ ಸಲ ಹೊತ್ತು ಮರಳಿ ಬರುವಂತಾಗಿದೆ.

ಸರಕಾರ ತಾಲೂಕಿನಲ್ಲಿ ತೆರೆದಂಥ ಭತ್ತಖರೀದಿ ಕೇಂದ್ರದಲ್ಲಿ ಅತಿ ಹೆಚ್ಚು ಕ್ವಿಂಟಲ್‌ಭತ್ತವನ್ನು ಖರೀದಿ ಮಾಡಿಕೊಳ್ಳಬೇಕು. ಜೊತೆಗೆಸೂಕ್ತವಾದ ಬೆಂಬಲಿತ ಬೆಲೆ ನೀಡಬೇಕು.ಒಟ್ಟಾರೆ ತೆಲಂಗಾಣ ಮಾದರಿಯನ್ನು ಇಲ್ಲಿ ಜಾರಿಗೆ ತರಬೇಕು ಎಂದು ಈಗಾಗಲೇ ಕೃಷಿ ಮಂತ್ರಿಗಳಿಗೆ ಒತ್ತಾಯ ಮಾಡಿದ್ದೇವೆ. ಒಂದುವೇಳೆ ಜಾರಿಗೆ ತರದೆ ಇದ್ದಲ್ಲಿ ಉಗ್ರ ಹೋರಾಟ ಅನಿವಾರ್ಯ.- ದರೂರು ಪುರುಷೋತ್ತಮ ಗೌಡ, ತುಂಗಭದ್ರಾ ರೈತ ಸಂಘದ ಜಿಲ್ಲಾಧ್ಯಕ್ಷ

ಈ ವರ್ಷ ಪೂರ್ತಿ ಲಾಸ್‌ ಅಗೈತಿ ರೀ. ಬೆಳೆದ ಭತ್ತಕ್ಕೆ ಉತ್ತಮ ರೇಟ್‌ ಇಲ್ಲ. ಸರಕಾರ ತೆರೆದ ಭತ್ತ ಖರೀದಿ ಕೇಂದ್ರದಲ್ಲಿ ಕೂಡರೈತರಿಗೆ ದೊಡ್ಡ ಮೊಸ ರೀ. ಅಲ್ಲಿ ಸರಿಯಾಗಿರೈತರಿಗೆ ಅನುಕೂಲತೆ ಇಲ್ಲ. ಹಾಗಾಗಿ ಮಿಲ್‌ಗಳಿಗೋ ಅಥವಾ ಸ್ಥಳೀಯ ಧಣಿಗಳಿಗೆ ನಲ್ಲು ಕೊಡುತಿದೀವಿ. ಎಲ್ಲೂ ಕೊಟ್ರೂ ರೈತರಿಗೆ ಉಳಿತಾಯವಿಲ್ಲ ಸಾಹೇಬ್ರೆ. ಮಂಜುನಾಥ, ರವಿ,ಕೊಟ್ರೇಶ್‌ ಕಾಲುವೆ ಭಾಗದ ರೈತರು

 

ಸುಧಾಕರ್‌ ಮಣ್ಣೂರು

ಟಾಪ್ ನ್ಯೂಸ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Ambedkar row: Amit Shah gone mad, he should leave politics says Lalu Prasad Yadav

Ambedkar row: ಅಮಿತ್‌ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ

Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ

1-qewqe

Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ

1-lokkk

Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್‌

Ballari–Minister

BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

5-hunsur

Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.