ಕುರುಗೋಡು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ


Team Udayavani, Apr 19, 2022, 1:20 PM IST

ಕುರುಗೋಡು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

ಕುರುಗೋಡು: ಕೂಡಲೇ ರಾಜ್ಯ ಸರ್ಕಾರವು ಭತ್ತ ಖರೀದಿ ಕೇಂದ್ರ ತೆರೆಯುವಂತೆ ಹಾಗೂ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡುವಂತೆ ಪಟ್ಟಣದ ಕರ್ನಾಟಕ ರೈತ ಸಂಘ ಹಾಗೂ ನೂರಾರು ರೈತರು ಕುರುಗೋಡಿನ ಎಪಿಎಂಸಿ ಮುಂದುಗಡೆಯಿಂದ ಮುಖ್ಯ ವೃತ್ತದವರೆಗೆ ಬಂಡಿ, ಟ್ರ್ಯಾಕ್ಟರ್ ಮೂಲಕ ಆಗಮಿಸಿ ಮುಖ್ಯವೃತ್ತದಲ್ಲಿ ರಸ್ತೆಗೆ ಭತ್ತ ಸುರಿಯುವುದರ ಮುಖಾಂತರ ಪ್ರತಿಭಟನೆ ಮಾಡಿದರು.

ರಾಜ್ಯ ಸಮಿತಿ ಅಧ್ಯಕ್ಷರಾದ ಶರಣಪ್ಪ ಹಾಗೂ ಉಪಾಧ್ಯಕ್ಷ ಅಮರೇಶ ಮಾತನಾಡಿ ರಾಜ್ಯ ಸರ್ಕಾರವು ಬೆಲೆ ನಿಗದಿ ಮಾಡುವಂತೆ ನಾವುಗಳು ಕೂಡಾ ಬೆಲೆ ನಿಗದಿ ಕಾರ್ಯ ಮಾಡುತ್ತೇವೆ. ಬ್ಯಾಂಕ್ ಕೊಟ್ಟ ಸಾಲಕ್ಕೆ ಬೆಳೆದ ಬೆಳೆಯನ್ನು ಬ್ಯಾಂಕ್ ಮುಂದೆ ಹಾಕುವ ಕೆಲಸ ಮಾಡುತ್ತೇವೆ ಎಂದರು.

ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಕೃಷಿ ವಿಜ್ಞಾನಿಗಳು ಇದ್ದು, ಈ ತಿಂಗಳಲ್ಲಿ ಬಿತ್ತನೆ ಮಾಡಬೇಕು, ಈ ಔಷಧಿಯನ್ನು ಸಿಂಪಡಿಸಬೇಕೆಂದು ಹೇಳುತ್ತಾರೆ ಹೊರೆತು ಯಾವುದೇ ರೀತಿಯಿಂದ ರೈತರಿಗೆ ಮಾರ್ಗದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಯಾವೊಬ್ಬ ರೈತರು ಕೂಡಾ ಕೃಷಿ ವಿಜ್ಞಾನಿಗಳನ್ನು ನೋಡಿಲ್ಲ. ವಿಜ್ಞಾನಿಗಳು ಸಂಬಳವನ್ನು ತೆಗೆದುಕೊಂಡು ರೈತರಿಗೂ ತಮಗೂ ಯಾವುದೇ ಸಂಬಂಧವಿಲ್ಲದಂತೆ ಎ.ಸಿ.ರೂಂನಲ್ಲಿ ಆರಾಮಾಗಿ ಜೀವನ ಸಾಗಿಸುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯದ ಅಧಿಕಾರಿಗಳು ಕೃಷಿಗೆ ಒತ್ತು ನೀಡಬೇಕು, ರೈತರಿಗೆ ಗೌರವ ನೀಡಬೇಕು. ಅಧಿಕಾರಿಗಳೆಲ್ಲ ರೈತರು ಬೆಳೆದ ಬೆಳೆಯನ್ನೆ ತಿನ್ನಬೇಕೇ ಹೊರತು ಬಂಗಾರವಾಗಲಿ, ನೋಟುಗಳನ್ನಾಗಿ ತಿನ್ನಲು ಆಗದು. ಆದ್ದರಿಂದ ರೈತ ದೇಶದ ಬೆನ್ನೆಲುಬು ಅಂತಾರೆ ಅಂತವರಿಗೆ ಬೆನ್ನಿಗೆ ಚೂರಿ ಹಾಕುವ ಕೆಲಸ ಬಿಡಬೇಕು ಎಂದರು.

ಪ್ರತಿಭಟನೆಯನ್ನು ಉದ್ದೇಶಿಸಿ ಕುರುಗೋಡು ತಾಲೂಕು ಸಮಿತಿ ಅಧ್ಯಕ್ಷ ಕೆ.ಕಲ್ಗುಡೆಪ್ಪ ಮಾತನಾಡಿ ಕುರುಗೋಡಿನಲ್ಲಿ ಆದಷ್ಟು ಬೇಗನೇ ಭತ್ತ ಖರೀದಿ ಕೇಂದ್ರ ತೆರೆಯಬೇಕೆಂದು ಆಗ್ರಹಿಸಿದರು. ಜೊತೆಗೆ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನಿಗದಿ ಮಾಡಬೇಕೆಂದರು.

ಪ್ರತಿಭಟನೆಯಲ್ಲಿ ನವಕರ್ನಾಟಕ ಯುವಶಕ್ತಿಯ ವಿರುಪಾಕ್ಷಿ, ನಾರಾಯಣಿ ಯಡಿಗಿರಿ, ಕುರುಗೋಡಿನ ಮುಖಂಡ ಚಾನಾಳ್ ಅಮರೇಶ ಪ್ರತಿಭಟನೆಯಲ್ಲಿ ಭಾಗವಹಿಸಿ ರೈತರ ಸಂಘಕ್ಕೆ ಬೆಂಬಲ ಸೂಚಿಸಿದರು.

ಪ್ರತಿಭಟನಾ ಸ್ಥಳಕ್ಕೆ ಕುರುಗೋಡಿನ ತಹಶೀಲ್ದಾರ್ ಕೆ.ರಾಘವೇಂದ್ರರಾವ್ ಮತ್ತು ಪಿಎಸ್ಐ ಮಣಿಕಂಠ ಭೇಟಿ ನೀಡಿ ಮನವಿ ಪತ್ರ ಸ್ವೀಕರಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ಕೆ.ರಾಮಚಂದ್ರ, ಹನುಮಂತಪ್ಪ ನಾಯಕ, ತಾಲೂಕು ಸಮಿತಿಯ ಉಪಗೌರವಾಧ್ಯಕ್ಷರಾದ ಪಿ.ಮರಿಬಸಪ್ಪ, ಉಪಾಧ್ಯಕ್ಷ ಎಸ್.ಗುರು, ಪ್ರಧಾನ ಕಾರ್ಯದರ್ಶಿ ಕೆ.ಗಿರೀಶ್ ಗೌಡ, ಸಹಕಾರ್ಯದರ್ಶಿ ಎ.ಕರಿಬಸಪ್ಪ, ಖಜಾಂಚಿ ಎಂ.ಗಾದಿಲಿಂಗಪ್ಪ, ಕುರುಗೋಡು ತಾಲೂಕು ಯುವ ಘಟಕದ ಅಧ್ಯಕ್ಷ ಹೆಚ್.ಬಸವರಾಜ, ಉಪಾಧ್ಯಕ್ಷ ಮಂಜುನಾಥ, ಕಾರ್ಯದರ್ಶಿ ಎಸ್.ದೇವೇಂದ್ರಪ್ಪ, ವದ್ದಟ್ಟಿ ಗ್ರಾಮ ಘಟಕದ ಅಧ್ಯಕ್ಷ ಎಂ.ರಾಜಶೇಖರ, ಉಪಾಧ್ಯಕ್ಷರಾದ ಜಿ.ನಾಗರಾಜ, ಬಾದನಹಟ್ಟಿ ಗ್ರಾಮ ಘಟಕದ ಅಧ್ಯಕ್ಷರಾದ ಕುಮಾರಗೌಡ,  ಉಪಾಧ್ಯಕ್ಷರಾದ ಚಿದಾನಂದ, ಕಾರ್ಯದರ್ಶಿ ಜೀರು ಮಲ್ಲಪ್ಪ, ಸಹಕಾರ್ಯದರ್ಶಿ ನಾಯಕರ ರುದ್ರಪ್ಪ, ಸದಸ್ಯರಾದ ಎಸ್.ಬಸವ, ಎ.ಚಿದಾನಂದ, ಗೂಳ್ಯದ ಶಿವರಾಜ, ವಿಘ್ನೇಶ್ವರ, ಸೋಮೇಶ, ಹೂಗಾರ್ ತಿಮ್ಮಪ್ಪ ಇನ್ನಿತರರು ಸೇರಿದಂತೆ ಪಟ್ಟಣದ ಸುತ್ತ ಮುತ್ತಲಿನ ಗ್ರಾಮಗಳ ನೂರಾರು ರೈತರು ಭಾಗವಹಿಸಿದ್ದರು.

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು

1-eqwqwewe

Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ

13-

Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ

Sanduru-BJP-Cong-Candidates

Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ

Bellary-BYV

Covid Scam: ನ್ಯಾ.ಡಿ.ಕುನ್ಹಾ ವರದಿ ವಿಪಕ್ಷಗಳ ಬೆದರಿಸುವ ತಂತ್ರ: ಬಿ.ವೈ.ವಿಜಯೇಂದ್ರ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.