Kurugodu:ವಿದ್ಯುತ್ ಕೊರತೆ ನೀಗಿಸುವಂತೆ ಆಗ್ರಹಿಸಿ ರೈತರಿಂದ ಜೆಸ್ಕಾಂ ಸಿಬ್ಬಂದಿಗೆ ದಿಗ್ಭಂಧನ
Team Udayavani, Aug 26, 2023, 2:37 PM IST
ಕುರುಗೋಡು: ಸಮೀಪದ ಸಿರಿಗೇರಿ ಮತ್ತು ಗೆಣಿಕೆಹಾಳ್ ಭಾಗದ ಸೇರಿದಂತೆ ಸುಮಾರು ಹತ್ತಾರು ಹಳ್ಳಿಯ ರೈತರು ಆ.26ರ ಶನಿವಾರ ಕ್ಯಾದಿಗೆಹಾಳ್ ಕ್ರಾಸ್‌ನಲ್ಲಿ ಕೆಇಬಿ ಅಧಿಕಾರಿಗಳಿಗೆ ದಿಗ್ಭಂಧನ ಹಾಕಿದರು.
ಇದೆ ವೇಳೆ ಮಾತನಾಡಿದ ರೈತರು, ಕಳೆದ ಒಂದು ವಾರದಿಂದ ರೈತರನ್ನು ವಿದ್ಯುತ್ ಸಮಸ್ಯೆ ಕಾಡುತ್ತಿದ್ದು, ಬೆಳೆ ಒಣಗಿ ಹೋಗಿವೆ. ಈಗಾಗಲೇ ಮಳೆ ಇಲ್ಲದ ಕಾರಣ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಸಾಲ ಮಾಡಿದ ರೈತರ ಗತಿ ಏನು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿ ಜೆಸ್ಕಾಂ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರನ್ನು ತಡೆಗಟ್ಟಿ ಕೆಲಕಾಲ ದಿಗ್ಭಂಧನ ಹಾಕಿ ತಡೆಗಟ್ಟಿದರು.
ಸ್ಥಳಕ್ಕೆ ಆಗಮಿಸಿದ್ದ ಜೆಸ್ಕಾಂ ವಿಭಾಗ ನಿಯಂತ್ರಣಾಧಿಕಾರಿ ಶೇಕ್ಷಾವಲಿ ಕೂಡಲೇ ವಿದ್ಯುತ್ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಆದರೂ ಪಟ್ಟು ಬಿಡದ ರೈತರು ಇದು ತಾತ್ಕಾಲಿಕವಾಗಬಾರದು. ನಿರಂತರವಾಗಿ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಒದಗಿಸದಿದ್ದಲ್ಲಿ ಸಿರಿಗೇರಿ, ಕ್ಯಾದಿಗೆಹಾಳು, ಕೊಂಚಿಗೇರಿ, ಗೆಣಿಕೆಹಾಳು, ದಾಸಾಪುರ ಸೇರಿದಂತೆ ಸುಮಾರು ಹತ್ತಾರು ಹಳ್ಳಿಗಳ ರೈತರು ಕುರುಗೋಡು ಹಾಗೂ ಸಿರಿಗೇರಿ ಕ್ರಾಸ್‌ನ ಕೆಇಬಿ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದೆಂದು ಎಚ್ಚರಿಸಿದರು.
ಆ ಬಳಿಕ ಹೋರಾಟ ಹಿಂಪಡೆದುಕೊಂಡರು.
ಈ ಸಂಧರ್ಭದಲ್ಲಿ ಕ್ಯಾದಿಗೆಹಾಳಿನ ಮಾಜಿ ಗ್ರಾಪಂ ಅಧ್ಯಕ್ಷ ಶೇಖರ್, ರೈತ ಮುಖಂಡ ಮಾಸ್ತಿ ಪ್ರಕಾಶ್, ರಾಘವೇಂದ್ರ, ಗೋಪಾಲ ಕೃಷ್ಣ, ರಾರಾವಿ ವೆಂಕಟೇಶ, ಬಕಾಡೆ ಕೊಮಾರೆಪ್ಪ, ಬಿ.ದೊಡ್ಡಬಸಪ್ಪ, ಮಾಸ್ತಿ ದಾನಪ್ಪ, ದಾಸಾಪುರ ಕೃಷ್ಣಪ್ಪ, ಕೊಂಚಿಗೇರಿ ದಾಸಾಪುರ ದೊಡ್ಡಪ್ಪ, ಕೆಇಬಿ ಸಿಬ್ಬಂದಿ ವರ್ಗದ ತಿಮ್ಮಪ್ಪ, ವಸಂತ ಸೇರಿದಂತೆ ಸುಮಾರು ನೂರಾರು ಜನ ರೈತರು ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್
Ballary: ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಮನನೊಂದು ಪ್ರೇಮಿ ಆತ್ಮಹ*ತ್ಯೆ
Bellary: ಪ್ರಿಯಾಂಕ್ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ
MUST WATCH
ಹೊಸ ಸೇರ್ಪಡೆ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.