Fraud Case: ಲಾಭಾಂಶದ ಆಮಿಷ… ಮಹಿಳೆಗೆ ಆನ್ಲೈನ್ನಲ್ಲಿ 9.50 ಲಕ್ಷ ರೂ. ವಂಚನೆ
Team Udayavani, Jul 17, 2024, 10:52 PM IST
ಬಳ್ಳಾರಿ: ಆನ್ಲೈನ್ನಲ್ಲಿ ವಹಿವಾಟು ಮಾಡಿದರೆ ನಿತ್ಯ ಲಾಭಾಂಶ ನೀಡುವ ಆಮಿಷವೊಡ್ಡಿ ನಗರದ ಮಹಿಳೆಯೊಬ್ಬರಿಗೆ 9.50 ಲಕ್ಷ ರೂ. ವಂಚಿಸಲಾಗಿದೆ.
ಇತ್ತೀಚೆಗೆ ಅಪರಿಚತ ಸಂಖ್ಯೆಯಿಂದ ಮಹಿಳೆಗೆ ಕರೆ ಮಾಡಿದ್ದ ಭವಾನಿಶಂಕರ್ ಎಂಬಾತ ತಾನು ಹೇಳಿದಂತೆ ವಹಿವಾಟು ಮಾಡಿದರೆ ನಿತ್ಯವೂ ಶೇ 1ರಷ್ಟು ಲಾಭಾಂಶ ನೀಡುವುದಾಗಿ ಹೇಳಿದ್ದ. ಅದಕ್ಕಾಗಿ ಮಹಿಳೆಯನ್ನು ವಾಟ್ಸ್ಆ್ಯಪ್ ಗ್ರೂಪ್ವೊಂದಕ್ಕೆ ಸೇರಿಸಲಾಗಿತ್ತು. ಅದರಲ್ಲಿ ಹೇಳಿದಂತೆ ಮಹಿಳೆಯು ವಂಚಕರಿಗೆ ಹಂತ ಹಂತವಾಗಿ ವಿವಿಧ ಖಾತೆಗಳ ಮೂಲಕ ರೂ 9,50,099 ಹಣ ಸಂದಾಯ ಮಾಡಿದ್ದಾರೆ. ತಮಗೆ ವಂಚನೆಯಾಗಿರುವುದು ಮಹಿಳೆಗೆ ತಡವಾಗಿ ಗೊತ್ತಾಗಿದೆ.
ಈ ಹಿನ್ನೆಲೆಯಲ್ಲಿ ನಗರದ ಸೈಬರ್ ಕ್ರೈಂ ಠಾಣೆಗೆ ಮಹಿಳೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: Haveri: ಬಸ್ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಮಹಿಳೆ ಮೃತ್ಯು.. ಸಾರ್ವಜನಿಕರಿಂದ ಆಕ್ರೋಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.