ಗಾಂಧೀಜಿ ವ್ಯಕ್ತಿತ್ವ ಜಗತ್ತಿಗೇ ಮಾದರಿ
Team Udayavani, Oct 3, 2020, 5:07 PM IST
ಸಂಡೂರು: ಗಾಂಧೀಜಿ ವ್ಯಕ್ತಿತ್ವ ಜಗತ್ತಿಗೆ ಮಾದರಿಯಾಗಿದೆ ಎಂದು ವಿರಕ್ತಮಠದ ಪ್ರಭುಮಹಾಸ್ವಾಮಿಗಳು ತಿಳಿಸಿದರು. ಅವರು ವೀರಶೈವ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ಜಿಲ್ಲಾ ಜನಜಾಗೃತಿ ವೇದಿಕೆ ಸಹಯೋಗದಲ್ಲಿ ಗಾಂಧಿ ಸ್ಮೃತಿ ಕಾರ್ಯಕ್ರಮ, ಜನಮಂಗಳ ಕಾರ್ಯಕ್ರಮದಡಿ ವಿಶೇಷ ಚೇತನರಿಗೆ ಪರಿಕರ ವಿತರಣೆ, ಸೃಜನಶೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಗಾಂಧೀಜಿಯವರ ತತ್ವಗಳ ನಿಜವಾದ ಪಾಲನೆಯನ್ನು ಡಾ| ವೀರೇಂದ್ರ ಹೆಗ್ಗಡೆಯವರು ಅನುಸರಿಸುವ ಮೂಲಕ ರಾಮರಾಜ್ಯದ ಕನಸ್ಸುಗಳನ್ನು ನನಸು ಮಾಡುತ್ತಿದ್ದಾರೆ ಎಂದರು. ಧರ್ಮಸ್ಥಳ ಗಾಮಾಭಿವೃದ್ಧಿ ಸಂಸ್ಥೆ ಜಿಲ್ಲಾನಿರ್ದೇಶಕ ಚಂದ್ರಶೇಖರ ಶೆಟ್ಟಿ ಮಾತನಾಡಿ,ಡಾ| ವೀರೇಂದ್ರ ಹೆಗ್ಗಡೆಯವರು ದೇಶದಸಾಮಾನ್ಯ ಪ್ರಜೆಯೂ ಸಹ ಸರಿದಾರಿಯಲ್ಲಿ ಸಾಗುವ ಮೂಲಕ ಆರ್ಥಿಕ ಸ್ವಾತಂತ್ರ್ಯ ಪಡೆಯಲು ಸ್ವಾಸಹಾಯ ಸಂಘಗಳನ್ನು ಪ್ರಾರಂಭಿಸಿದರು ಎಂದರು. ಅತಿಥಿ ಜನಜಾಗೃತಿ ವೇದಿಕೆ ಸದಸ್ಯ ಬಂಡ್ರಿ ರವಿಕುಮಾರ್ ಗಾಂಧೀಜಿ ಹಾಗೂ ಶಾಸ್ತ್ರಿಯವರ ತತ್ವಗಳು ಆದರ್ಶನೀಯ ಎಂದರು.
ಬಸವರಾಜ ಬಣಕಾರ ವಿಶೇಷ ಉಪನ್ಯಾಸ ನೀಡಿದರು. ತಾಲೂಕು ಯೋಜನಾಧಿಕಾರಿ ಸ್ವಾಗತಿಸಿ ಯೋಜನೆಯ ಉದ್ದೇಶಗಳನ್ನು ತಿಳಿಸಿದರು. 25ಕ್ಕೂ ಹೆಚ್ಚು ಸ್ವ ಸಹಾಯ, ಸ್ತ್ರೀಶಕ್ತಿ ಸಂಘಗಳು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.