ಜಿಲ್ಲಾದ್ಯಂತ ಗಾಂಧೀಜಿ-ಶಾಸ್ತ್ರಿ ಜಯಂತಿ
Team Udayavani, Oct 3, 2017, 5:14 PM IST
ಬಳ್ಳಾರಿ: ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಸಂಯುಕ್ತ ಆಶ್ರಯದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಮಹಾತ್ಮ ಗಾಂಧಿ ಜಯಂತಿ
ಆಚರಿಸಲಾಯಿತು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಿರ್ಮಿಸಲಾಗಿದ್ದ ಕರ್ನಾಟಕದಲ್ಲಿ ಗಾಂಧೀಜಿ ಹೆಜ್ಜೆಗಳು
ಕುರಿತ ಛಾಯಾಚಿತ್ರ ಪ್ರದರ್ಶನಕ್ಕೆ ಬಳ್ಳಾರಿ ಉಪವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಚಾಲನೆ ನೀಡಿದರು.
ನಂತರ ಅವರು ರಾಜ್ಯದ ವಿವಿಧೆಡೆ ಗಾಂಧೀಜಿ ಸಂಚರಿಸಿದ ಚಿತ್ರಗಳು ಹಾಗೂ ಜಮಾಯಿಸಿದ ಜನಸಮೂಹ ಮತ್ತು ಅವರು ನೀಡುತ್ತಿದ್ದ ಸಂದೇಶಗಳು, ಬಳ್ಳಾರಿ ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ 1934ರ ಮಾ. 3ರಂದು ಆಯೋಜಿಸಲಾಗಿದ್ದ ಬೃಹತ್ ಹರಿಜನ ಸಮಾವೇಶ ಉದ್ಘಾಟಿಸಿ ಮಾತನಾಡಿರುವ ಛಾಯಾಚಿತ್ರಗಳು, ರಾಜ್ಯ ಸರ್ಕಾರ ಗಾಂಧೀಜಿ ಚಿಂತನೆಗಳು ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತಿರುವುದು ಮತ್ತು ಸಿಎಂ ಅವರ ಸಂದೇಶ ಹಾಗೂ
ಇನ್ನಿತರ ಅಪರೂಪದ ಗಾಂಧಿಜಿಯವರ ಛಾಯಾಚಿತ್ರಗಳನ್ನು ವೀಕ್ಷಿಸಿದರು.
ಈ ಛಾಯಾಚಿತ್ರಗಳ ಪ್ರದರ್ಶನ ಇನ್ನೂ ಎರಡು ದಿನಗಳ ಕಾಲ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಇರಲಿದೆ. ಸಾರ್ವಜನಿಕರು ಈ ಅಪರೂಪದ ಛಾಯಾಚಿತ್ರಗಳನ್ನು ವೀಕ್ಷಿಸುವಂತೆ ಜಿಲ್ಲಾ ವಾರ್ತಾಧಿಕಾರಿ ರಾಮಲಿಂಗಪ್ಪ ಬಿ.ಕೆ., ಮನವಿ ಮಾಡಿದ್ದಾರೆ.
ನಂತರ ಗಾಂಧಿಧೀಜಿ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ದೊಡ್ಡಬಸವ ಗವಾಯಿ ತಂಡ
ರಘುಪತಿ ರಾಘವ ರಾಜರಾಂ, ವೈಷ್ಣವ ಜನತೋ ತೇ ನಹಿ ಕಹಿಯೆರೆ ಸೇರಿದಂತೆ ವಿವಿಧ ಭಜನೆ ಹಾಡಿದರು. ಜಿಲ್ಲಾ ವಾರ್ತಾಧಿಕಾರಿ ರಾಮಲಿಂಗಪ್ಪ ಬಿ.ಕೆ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ ಹಾಗೂ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಇದ್ದರು.
ಹೂವಿನಹಡಗಲಿ: ಪರಿಸರ ಜಾಗೃತಿ ಕೊರತೆಯಿಂದ ಪ್ರಕೃತಿ ವಿಕೋಪಗಳು ಎದುರಾಗುತ್ತಿವೆ. ಹೀಗಾಗಿ ಪ್ರತಿಯೊಬ್ಬರು
ಪರಿಸರ ಕಾಳಜಿ ಹೊಂದಿ ಪ್ರಕೃತಿ ಸ್ವತ್ಛವಾಗಿಟ್ಟುಕೊಳ್ಳಬೇಕಾಗಿದೆ ಎಂದು ತಹಶೀಲ್ದಾರ್ ಕೆ. ರಾಘವೇಂದ್ರರಾವ ಹೇಳಿದರು.
ನಂದಿಹಳ್ಳಿ ಗ್ರಾಮದಲ್ಲಿ ರಾಷ್ಟ್ರಪತಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್‌ಬಹದ್ದೂರ ಶಾಸ್ತ್ರಿ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಸಸಿ ನಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯನ ಮಿತಿ ಮೀರಿದ ಆಸೆಯಿಂದಾಗಿ ಪ್ರಕೃತಿಯನ್ನು ಹಾಳು ಮಾಡುತ್ತಿದ್ದೇವೆ. ಗಿಡ ಮರಗಳನ್ನು ನಾಶ ಮಾಡುತ್ತಿದ್ದೇವೆ. ಇದರಿಂದಾಗಿ ಮಳೆ ಕಡಿಮೆಯಾಗುತ್ತಿದೆ. ಇದರಿಂದ ಮುಕ್ತಿ ಹೊಂದಬೇಕಾದಲ್ಲಿ ಗಿಡ, ಮರ ನೆಟ್ಟು ಪೋಷಣೆ ಮಾಡಬೇಕಾದ ಅಗತ್ಯವಿದೆ ಎಂದರು.
ವಲಯ ಅರಣ್ಯಾಧಿಕಾರಿ ರವೀಂದ್ರ ನಾಯ್ಕ ಮಾತನಾಡಿ, ಇಲಾಖೆಯಿಂದ ಸುಮಾರು 100 ಸಸಿಗಳನ್ನು ನಂದಿಹಳ್ಳಿ
ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನೆಡಲಾಗುವುದು. ಮರ ಗಿಡ ಬೆಳೆಸುವ ಆಸಕ್ತಿ ಇರುವವರಿಗೆ ಇಲಾಖೆ ಸೂಕ್ತ ಸಲಹೆ ಸಹಕಾರ ನೀಡಲಿದೆ ಎಂದರು.
ಜೆಸ್ಕಾಂ ಸಹಾಯಕ ಅಭಿಯಂತರ ಮಂತ್ರೋಡಿ ಶ್ರೀನಿವಾಸ, ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಚಂದ್ರಪ್ಪ, ನಂದಿಹಳ್ಳಿ ಗ್ರಾ.ಪಂ ಆಧ್ಯಕ್ಷ ಕಂಠಿ ವೀರೇಶ ಸೇರಿ ಇತರರು ಹಾಜರಿದ್ದರು.
ಪುರಸಭೆ ಸಿಬ್ಬಂದಿ ಹಾಗೂ ವಿವಿಧ ಸಂಘಟನೆ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್‌ಬಹದ್ದೂರು ಶಾಸ್ತ್ರಿ ಜಯಂತಿ ಪ್ರಯುಕ್ತ ಪುರಸಭೆ ಸಿಬ್ಬಂದಿ ಹಾಗೂ ವಿವಿಧ ಸಂಘಟನೆಗಳಿಂದ ಶ್ರಮದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ರೇಣುಕಾ ನಗರದಿಂದ ಪೆಟ್ರೋಲ್ ಬಂಕ್‌ವರೆಗಿನ ರಸ್ತೆ ಬದಿಯಲ್ಲಿ ಸ್ವತ್ಛತಾ ಆಂದೋಲನಾ ನಡೆಯಿತು.
ಶ್ರಮದಾನದಲ್ಲಿ ಮಲ್ಲಿಗೆ ಯೋಗ ಸಂಸ್ಥೆ, ಹೋಮ್‌ಗಾರ್ಡ್, ಜೆಸಿಐ, ಪುರಸಭೆ ಉಪಾಧ್ಯಕ್ಷ ಕೆ.ಎಸ್ ರಹಿಮಾನ್, ತಾಲೂಕು ವೈದ್ಯಾಧಿಕಾರಿ ಡಾ| ಶಿವಕುಮಾರ, ಪುರಸಭೆ ಸಿಬ್ಬಂದಿ ಶ್ರೀನಿವಾಸ, ಆರ್.ಐ ನಾಗರಾಜ, ಕೆ. ರಾಮಮೂರ್ತಿ ಹಾಗೂ ಇತರರು ಭಾಗವಹಿಸಿದ್ದರು.
ಹಗರಿಬೊಮ್ಮನಹಳ್ಳಿ: ಪಟ್ಟಣದ ಶ್ರೀ ಸ್ವಾಮಿ ವಿವೇಕಾನಂದ ಟ್ರಸ್ಟ್ ಪದಾಧಿಕಾರಿಗಳು ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ಪಟ್ಟಣದ ಸರಕಾರಿ ನೂರು ಹಾಸಿಗೆ ಆಸ್ಪತ್ರೆಯ ರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಣೆ ಮಾಡಿದರು.
ಟ್ರಸ್ಟ್‌ನ ಅಧ್ಯಕ್ಷ ಬಲ್ಲಾಹುಣಸಿ ರಾಮಣ್ಣ ಮಾತನಾಡಿ, ದೇಶಪ್ರೇಮ, ದೇಶಭಕ್ತಿ ಅಳವಡಿಸಿಕೊಂಡು ಸದೃಢ ಭಾರತ
ನಿರ್ಮಾಣ ಮಾಡಲು ಪ್ರತಿಯೊಬ್ಬರು ಕಂಕಣಬದ್ಧರಾಗಬೇಕು. ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಮಹಾತ್ಮ ಗಾಂಧಿ ಆದರ್ಶಗಳನ್ನು ಯುವಕರು ರೂಢಿಸಿಕೊಳ್ಳಬೇಕಾಗಿದೆ. ಸರಳತೆಯಲ್ಲಿ ಮನುಷ್ಯ ಸಂತೋಷವಾಗಿ ಇರುತ್ತಾನೆ
ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟ ಸರಳ ಸಜ್ಜನಿಕೆಯ ಗಾಂಧೀಜಿಯವರ ಸ್ಮರಣೆ ಅವಿಸ್ಮರಣೀಯ ಎಂದರು.
ಟ್ರಸ್ಟ್ ಉಪಾಧ್ಯಕ್ಷ ರಾಮಪ್ಪ ಮೇದಾರ, ಕಾರ್ಯದರ್ಶಿ ಜಿ. ಶಿವಕುಮಾರ, ಸಹಕಾರ್ಯದರ್ಶಿ ಗೋವಿಂದಪ್ಪ, ಖಜಾಂಚಿ ಎಂ.ಮರಿರಾಮಪ್ಪ, ಸದಸ್ಯರಾದ ಜಹಾಂಗೀರ, ಬಾಲಾಜಿ, ಮಹಮದ್, ರವಿ, ಎ.ರಮೇಶ, ಎಸ್.ಎನ್.ಗೋಗಿ, ಬಾಬಣ್ಣ, ಬಸವರಾಜರೆಡ್ಡಿ, ಕೇದಾರಸ್ವಾಮಿ, ಮೈಲಾರಪ್ಪ ಇದ್ದರು.
ಸಂಡೂರು: ಪಟ್ಟಣದ ಆದರ್ಶ ಸಮುದಾಯಭವನದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿಯನ್ನು ಮಹಾಲಕ್ಷ್ಮೀ
ಕುಶಲಕಲಾ ಕೇಂದ್ರದ ಕಾರ್ಮಿಕರು ಆಚರಿಸಿದರು.
ಸಂಡೂರಿನ ರಾಜಮನೆತನದ ಹಾಗೂ ಗ್ರಾಮೀಣಾಭಿವೃದ್ಧಿ ಮಾಜಿ ಸಚಿವ ದಿ|ಎಂ.ವೈ. ಘೋರ್ಪಡೆಯವರ ಹಿರಿಯ
ಸೊಸೆ ಸೂರ್ಯಪ್ರಭಾ ಘೋರ್ಪಡೆ ಅವರು ಗಾಂಧಿಧೀಜಿಯವರ ಮೂರ್ತಿಗೆ ಖಾದಿಯಿಂದ ನೇಯ್ದ ತ್ರಿವರ್ಣ ಬಣ್ಣದ ಹಾರವನ್ನು ಹಾಕಿದರು. ಸಂಡೂರಿನ ಕರಕುಶಲ ಕೇಂದ್ರದ ಕಾರ್ಮಿಕರು ಗಾಂಧಿ ಮೂರ್ತಿಗೆ ವಿಶೇಷ
ಪೂಜೆ ಸಲ್ಲಿಸಿದರು.
ಕೊಟ್ಟೂರು: ಮಹಾತ್ಮ ಗಾಂಧಿಧೀಜಿ ಕಂಡ ಸ್ವತ್ಛ ಭಾರತ ಕನಸನ್ನು ನನಸಾಗಿಸಲು ಎಲ್ಲರು ಸಂಕಲ್ಪ ಹೊಂದಬೇಕು ಎಂದು ಪಟ್ಟಣ ಪಂಚಾಯತ್ ಅಧ್ಯಕ್ಷ ಅನಿಲ ಹೊಸಮನಿ ಹೇಳಿದರು.
ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಗಾಂಧೀಜಿ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಮರಿಕೊಟ್ಟೂರೇಶ್ವರ
ದೇವಸ್ಥಾನದ ಹತ್ತಿರದಿಂದ ಹರಪನಹಳ್ಳಿ ರಸ್ತೆಯ ಎರಡು ಬದಿ ಸ್ವತ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವೀರಶೈವ ರುದ್ರಭೂಮಿಯಲ್ಲಿ ಗೊರ್ಲಿಶರಣಪ್ಪ ಸರಕಾರಿ ಪದವಿ ಪೂರ್ವ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು
ಸ್ಮಶಾನದಲ್ಲಿ ಬೆಳೆದಿದ್ದ ಗಿಡ್ಡಗಂಟಿಗಳನ್ನು ತೆಗೆದು ಹಾಕಿ ಸ್ವತ್ಛಗೊಳಿಸಿದರು. ಎನ್‌ಎಸ್‌ಎಸ್ ಅ ಧಿಕಾರಿ ಕೊಟ್ರೇಶ್ ಸಜ್ಜನ್ ಮಾತನಾಡಿದರು. ನಂತರ ಕೊಟ್ಟೂರೇಶ್ವರ ಕಾಲೇಜಿನ ಎನ್‌ಸಿಸಿ ವಿದ್ಯಾರ್ಥಿಗಳು ಸ್ವತಂತ್ರ ಹೋರಾಟಗಾರ ಕಲ್ಲಳ್ಳಿ ಅಬ್ಟಾಸ್ ಅವರ ಮನೆಗೆ ತೆರಳಿ ಶೌಚಾಲಯ ಗುಂಡಿ ತೆಗೆದು ಶೌಚಾಲಯ ನಿರ್ಮಿಸಿಕೊಟ್ಟರು. ಸ್ವತ್ಛತಾ ಅಭಿಯಾನದಲ್ಲಿ ಮುಖ್ಯಾಧಿಕಾರಿ ಎಚ್. ಎಫ್. ಬಿದರಿ, ಎನ್‌ಎಸ್‌ಎಸ್ ಅಧಿಕಾರಿ ಕೊಟ್ರೇಶ್ ಸಜ್ಜನ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್
Ballary: ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಮನನೊಂದು ಪ್ರೇಮಿ ಆತ್ಮಹ*ತ್ಯೆ
Bellary: ಪ್ರಿಯಾಂಕ್ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ: ಜನಾರ್ದನ ರೆಡ್ಡಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Commission: 60 ಪರ್ಸೆಂಟ್ ಕಮಿಷನ್: ಎಚ್‌ಡಿಕೆ ವಿರುದ್ಧ ಮುಗಿಬಿದ್ದ ಆಡಳಿತ ಪಕ್ಷ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.