ವಿರೂಪಾಪೂರಗಡ್ಡಿಗೆ ಅಧಿಕಾರಿಗಳ ಭೇಟಿ-ಸಮೀಕ್ಷೆ
ಅಕ್ರಮ ರೆಸಾರ್ಟ್ ತೆರವುಗೊಳಿಸುವಂತೆ ಫೆ. 11ರಂದು ಸುಪ್ರೀಂ ಆದೇಶ
Team Udayavani, Feb 14, 2020, 1:13 PM IST
ಗಂಗಾವತಿ: ವಿರೂಪಾಪೂರಗಡ್ಡಿಯ ಅಕ್ರಮ ರೆಸಾರ್ಟ್ ಗಳನ್ನು ತಿಂಗಳೊಳಗೆ ತೆರವುಗೊಳಿಸುವಂತೆ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಹಂಪಿ ಅಭಿವೃದ್ಧಿ ಪ್ರಾಧಿಕಾರ ಮತ್ತು ತಾಲೂಕು ಆಡಳಿತದ ಅಧಿಕಾರಿಗಳು ವಿರೂಪಾಪೂರಗಡ್ಡಿಗೆ ಗುರುವಾರ ಭೇಟಿ ನೀಡಿ ಸಮೀಕ್ಷೆ ನಡೆಸಿದರು.
ವಿರುಪಾಪೂರಗಡ್ಡಿಯಲ್ಲಿ ಜನತೆ ವಾಸವಾಗಿರುವ ಮನೆಗಳೆಷ್ಟು? ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುತ್ತಿರುವ ಮನೆಗಳೆಷ್ಟು? ಎನ್ನುವ ಮಾಹಿತಿ ಸಂಗ್ರಹಿಸಿದ್ದಾರೆ. ಈಗಾಗಲೇ ಸಾಣಾಪೂರ ಗ್ರಾಪಂ ವಿರೂಪಾಪೂರಗಡ್ಡಿಯಲ್ಲಿರುವ ರೆಸಾರ್ಟ್ ಹೊಟೇಲ್ ಮತ್ತು ವಸತಿ ಮನೆಗಳ ಸಮಗ್ರ ಮಾಹಿತಿ ನೀಡಿದ್ದರೂ ಸುಪ್ರೀಂಕೋರ್ಟ್ ತೀರ್ಪಿನ ನಂತರ ಪ್ರಾಧಿಕಾರ ಅ ಧಿಕಾರಿಗಳು ಪುನಃ ಸಮೀಕ್ಷೆ ನಡೆಸಿದ್ದಾರೆ.
ವಿರೂಪಾಪೂರಗಡ್ಡಿಯಲ್ಲಿ 60ಕ್ಕೂ ಹೆಚ್ಚು ರೆಸಾರ್ಟ್, ಹೊಟೇಲ್‌ಗಳಿವೆ. ಬಟ್ಟೆ, ಹಳೆಯ ಸಾಮಾನು, ತಂಪು ಪಾನೀಯ ಅಂಗಡಿ, ವಾಹನಗಳನ್ನು ಬಾಡಿಗೆ ಕೊಡುವುದು ಸೇರಿ 150ಕ್ಕೂ ಹೆಚ್ಚು ಸಣ್ಣಪುಟ್ಟ ವ್ಯವಹಾರ ಮಾಡುವ ಅಂಗಡಿ ಮುಂಗಟ್ಟುಗಳಿವೆ. ಪ್ರಾ ಧಿಕಾರದ ನೋಟಿಸ್ ಪ್ರಶ್ನಿಸಿ 15 ಜನ ರೆಸಾರ್ಟ್ ಮಾಲೀಕರು ಸುಪ್ರೀಂಕೋರ್ಟ್ಗೆ ಹಾಗೂ ಇಬ್ಬರು ಮಾಲೀಕರು ಹೈಕೋರ್ಟ್‌ಗೆ ಹೋಗಿದ್ದರು. ಫೆ.11ರಂದು ಸುಪ್ರೀಂಕೋರ್ಟ್ ರೆಸಾರ್ಟ್ ಮಾಲೀಕರ ಅರ್ಜಿ ತಿರಸ್ಕಾರ ಮಾಡಿ ಅಕ್ರಮ ರೆಸಾರ್ಟ್ ತೆರವುಗೊಳಿಸುವಂತೆ ಆದೇಶ ನೀಡಿತ್ತು.
ಡಂಗುರ ಮೂಲಕ ಮಾಹಿತಿ
ಸುಪ್ರೀಂಕೋರ್ಟ್ ಸೂಚನೆಯಂತೆ ವಿರೂಪಾಪೂರಗಡ್ಡಿಯಲ್ಲಿರುವ ಅಕ್ರಮ ರೆಸಾರ್ಟ್ ಸೇರಿ ವಾಣಿಜ್ಯ ವ್ಯವಹಾರ ನಡೆಸುವವರಿಗೆ ಕೋರ್ಟ್ ಆದೇಶ ಪ್ರತಿ ವಿತರಿಸಲಾಗುತ್ತದೆ. ರೆಸಾರ್ಟ್‌ಗಳಲ್ಲಿ ತಂಗಿರುವ ದೇಶ-ವಿದೇಶದ ಪ್ರವಾಸಿಗರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗುತ್ತದೆ. ರೆಸಾರ್ಟ್ಗಳಿಗೆ ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡಿಕೊಂಡಿರುವ ಪ್ರವಾಸಿಗರು ಬುಕಿಂಗ್ ಕ್ಯಾನ್ಸಲ್ ಮಾಡಲು ಸೂಚನೆ ನೀಡಲಾಗುತ್ತದೆ. ತೆರವು ಕಾರ್ಯ ಕುರಿತು ಡಂಗುರ ಹಾಕಿಸಿ, ರೆಸಾರ್ಟ್ ಮಾಲೀಕರಿಗೆ ತಮ್ಮ ಅಮೂಲ್ಯ ವಸ್ತುಗಳನ್ನು ಸುರಕ್ಷಿತವಾಗಿಟ್ಟುಕೊಳ್ಳುವಂತೆ ತಿಳಿಸಲಾಗುತ್ತದೆ.
ಎಲ್.ಡಿ. ಚಂದ್ರಕಾಂತ,
ತಹಶೀಲ್ದಾರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.