ಗಣಿನಾಡಲ್ಲಿದೆ ಮೂರು ಗೋಶಾಲೆ
ಎನ್‌ಜಿಒಗಳ ನೇತೃತ್ವದಲ್ಲಿ ನಿರ್ವಹಣೆ
Team Udayavani, Jan 11, 2021, 5:11 PM IST
ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಶತಮಾನದಂಚಿನಲ್ಲಿರುವ ಮೂರು ಗೋಶಾಲೆಗಳಿವೆ. ಎನ್‌ಜಿಒ ನೇತೃತ್ವದಲ್ಲಿ ನಡೆಯುತ್ತಿರುವ ಈ ಗೋಶಾಲೆಗಳಲ್ಲಿ ಗೋವುಗಳಿಗೆ ಶೆಡ್ ಸೇರಿ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಬಹುತೇಕ ಸಾರ್ವಜನಿಕರು ನೀಡುವ ದೇಣಿಗೆಯಿಂದಲೇ ನಿರ್ವಹಣೆ ಮಾಡಲಾಗುತ್ತಿದೆ.
ಜಿಲ್ಲೆಯ ಬಳ್ಳಾರಿ ನಗರದ ಅಂದ್ರಾಳ್ ರಸ್ತೆಯಲ್ಲಿ ಗೋ ರಕ್ಷಣಾ ಕೇಂದ್ರ, ಹೊಸಪೇಟೆಯ ಮಲಪನಗುಡಿಯಲ್ಲಿ ಮಹಾವೀರ್ ಜೈನ್ ಗೋಶಾಲೆ ಮತ್ತು ಜಿಲ್ಲೆಯ ಸಿರುಗುಪ್ಪದ ಹಳೇಕೋಟೆಯಲ್ಲಿ ಸ್ವಾಮೀಜಿಯೊಬ್ಬರು ತಮ್ಮ ಮಠದಲ್ಲೇ ಗೋವುಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಕೆಲವು ವಯಸ್ಸಾದ ಹಸುಗಳನ್ನು ರೈತರೇ ಗೋಶಾಲೆಯಲ್ಲಿ ಬಿಟ್ಟು ಹೋಗಿದ್ದರೆ ಇನ್ನು ಕೆಲವು ಹಸುಗಳನ್ನು ರಕ್ಷಣೆ ಮಾಡಿ ಶಾಲೆಗೆ ತರಲಾಗಿದೆ. ಇನ್ನು ಕೆಲವುಗಳನ್ನು ಕಸಾಯಿಖಾನೆಗೆ ಕೊಂಡೊಯ್ಯುವಾಗ ರಕ್ಷಣೆ ಮಾಡಿ ಇಲ್ಲಿಗೆ ತರಲಾಗಿದೆ. ಜತೆಗೆ ವಿವಿಧೆಡೆ ರಸ್ತೆ ಅಪಘಾತಗಳಲ್ಲಿ ಗಾಯಗೊಂಡಿದ್ದ ಹಸುಗಳನ್ನು ಸಹ ತಂದು ಚಿಕಿತ್ಸೆ ನೀಡಿ ರಕ್ಷಿಸುವುದರ ಜತೆಗೆ ಅವುಗಳಿಗೆ ಮೇವು, ಆಶ್ರಯ ಕಲ್ಪಿಸಿ ಪಾಲನೆ ಮಾಡಲಾಗುತ್ತಿದೆ.
ಗೋರಕ್ಷಣಾ ಕೇಂದ್ರ: ಬಳ್ಳಾರಿ ನಗರದ ಆಂದ್ರಾಳ್ ರಸ್ತೆಯಲ್ಲಿರುವ ಗೋ ರಕ್ಷಣಾ ಕೇಂದ್ರ ಶತಮಾನದ ಅಂಚಿನಲ್ಲಿದೆ. 1932ರಲ್ಲಿ ಸ್ಥಾಪನೆಯಾದ ಈ ಗೋ ರಕ್ಷಣಾ ಕೇಂದ್ರವನ್ನು ಸದ್ಯ ರಾಜಸ್ಥಾನ ಸಮಾಜದವರು ನಿರ್ವಹಿಸುತ್ತಿದ್ದಾರೆ. 3.5 ಎಕರೆ ವಿಸ್ತೀರ್ಣ ಹೊಂದಿರುವ ಈ ಕೇಂದ್ರದಲ್ಲಿ 450 ಹಸು, ಎತ್ತುಗಳು ಇವೆ. ಹಸುಗಳಿಗೆ ಶೆಡ್ ಗಳ ವ್ಯವಸ್ಥೆ ಮಾಡಲಾಗಿದ್ದು, ಕುಡಿಯಲು ನೀರು, ಮೇವಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ಹಸುಗಳಿಂದ ಒಂದು ಹನಿ ಹಾಲನ್ನೂ ಪಡೆಯದ ಕೇಂದ್ರದವರು ದಾನಿಗಳು ನೀಡುವ ದೇಣಿಗೆಯಲ್ಲೇ ಗೋಶಾಲೆ ನಿರ್ವಹಣೆ ಮಾಡಲಾಗುತ್ತಿದೆ. ಜನ್ಮದಿನ, ಮದುವೆ ದಿನ ಸೇರಿ ಇನ್ನಿತರೆ ವಿಶೇಷ ದಿನಗಳನ್ನು ಆಚರಿಸಿಕೊಳ್ಳುವವರು ತಮಗೆ ತೋಚಿದಷ್ಟು ಈ ಕೇಂದ್ರಕ್ಕೆ ಬೆಲ್ಲ, ಅಕ್ಕಿ, ಸಜ್ಜೆ, ಜೋಳ, ಹುಲ್ಲು ಇನ್ನಿತರೆ ಸಾಮಗ್ರಿಗಳನ್ನು ದೇಣಿಗೆ ನೀಡುತ್ತಾರೆ. ಇವುಗಳನ್ನೇ ಹಸುಗಳಿಗೆ ಆಹಾರವಾಗಿ ಬಳಸಲಾಗುತ್ತದೆ. ಹಸುಗಳ ಗೊಬ್ಬರವನ್ನು ಮಾತ್ರ ರೈತರಿಗೆ ಸುಗ್ಗಿವೇಳೆ ಮಾರಾಟ ಮಾಡಿ ಹಣ ಪಡೆಯದೆ ಬದಲಿಗೆ ಅವರಿಂದ ಮೇವು ಪಡೆದು ಕೇಂದ್ರದಲ್ಲಿ ಸಂಗ್ರಹಿಸಲಾಗುತ್ತದೆ. ಜತೆಗೆ ದಾನಿಗಳು ಸಹ ಮೇವನ್ನು ದಾನವಾಗಿ ನೀಡುತ್ತಾರೆ.
ಹಸುಗಳ ನಿರ್ವಹಣೆಗೆ ಕೇಂದ್ರದಲ್ಲಿ 15 ಜನ ಕೆಲಸ ಮಾಡುತ್ತಾರೆ. ಆದರೆ, ಈವರೆಗೂ ಸರ್ಕಾರದಿಂದ ಯಾವುದೇ ಅನುದಾನವನ್ನು ಪಡೆದಿಲ್ಲ ಎನ್ನುತ್ತಾರೆ ಕೇಂದ್ರದ ನಿರ್ವಾಹಕ ಸರೋಜ್ ಕುಮಾರ್. ಕೇಂದ್ರದಲ್ಲಿ ಗೋವುಗಳ ಆರೋಗ್ಯ ನೋಡಿಕೊಳ್ಳಲು 9 ಜನರ ಸ್ವಯಂಸೇವಕರ ತಂಡವಿದೆ. ಇವರು ಚಿಕಿತ್ಸೆ ನೀಡುವ ತರಬೇತಿಯನ್ನೂ ಪಡೆದಿದ್ದು, ಹಸುಗಳಿಗೆ ಯಾವುದೇ ಕಾಯಿಲೆ ಕಾಣಿಸಿಕೊಂಡರೂ, ಅಪಘಾತಗಳಲ್ಲಿ ಗಾಯಗೊಂಡರೂ ಮಾಹಿತಿ ದೊರೆತಲ್ಲಿ ಕೂಡಲೇ ಸ್ಥಳಕ್ಕೆ ತೆರಳಿ ಅವುಗಳನ್ನು ರಕ್ಷಣೆ ಮಾಡಿ ಕೇಂದ್ರಕ್ಕೆ ಕರೆಲಾಗುತ್ತದೆ.
ಮಹಾವೀರ್ ಜೈನ್ ಗೋಶಾಲೆ: ಜಿಲ್ಲೆಯ ಹೊಸಪೇಟೆ ತಾಲೂಕು ಮಲಪನಗುಡಿಯಲ್ಲಿ 12 ಎಕರೆ ಪ್ರದೇಶದಲ್ಲಿ ಮಹಾವೀರ್ ಜೈನ್ ಗೋಶಾಲೆಯಿದೆ. ಕಳೆದ 25 ವರ್ಷಗಳಿಂದ ಗೋವುಗಳ ಪಾಲನೆಯಲ್ಲಿ ತೊಡಗಿರುವ ಈ ಗೋಶಾಲೆಯಲ್ಲಿ ಸದ್ಯ 400 ಹಸುಗಳು ಇವೆ. ಇಲ್ಲಿಯೂ ವಿವಿಧೆಡೆ ರಕ್ಷಣೆ ಮಾಡಿದ್ದ ಗೋವುಗಳನ್ನು ತಂದು ಪಾಲನೆ ಮಾಡಲಾಗುತ್ತದೆ.
ರಕ್ಷಣಾ ಕಾರ್ಯದಲ್ಲಿ ದೊರೆತ ಎತ್ತುಗಳನ್ನು ಜಿಲ್ಲಾಧಿ ಕಾರಿಗಳ ಮಾರ್ಗದರ್ಶನದಲ್ಲಿ ಬಡ ರೈತರಿಗೆ ನೀಡಲಾಗಿದೆ. ತೌಡು, ಹಿಂಡಿ, ಮೇವನ್ನು ನೀಡಲಾಗುತ್ತಿದೆ. ಜತೆಗೆ ಗೋಶಾಲೆಯಲ್ಲೇ ಮೇವನ್ನು ಬೆಳೆಸಲಾಗುತ್ತಿದೆ. ಪ್ರತ್ಯೇಕ ವೈದ್ಯರ ತಂಡವಿದ್ದು, ಪ್ರತಿದಿನ ಹಸುಗಳ ಆರೋಗ್ಯ ತಪಾಸಣೆ ಮಾಡಲಾಗುತ್ತದೆ ಎಂದು ಗೋಶಾಲೆಯ ಮುಖ್ಯಸ್ಥ ಸುರೇಶ್ ಹೇಳುತ್ತಾರೆ.
ಸರ್ಕಾರದಿಂದ ಅನುದಾನ: ಹೊಸಪೇಟೆಯ ಮಹಾವೀರ್ ಜೈನ್ ಗೋಶಾಲೆ ಮತ್ತು ಹಳೆಕೋಟೆ ಮಠದಲ್ಲಿನ ಗೋಶಾಲೆಗೆ ಕಳೆದ ಎರಡೂ ಮೂರು ವರ್ಷಗಳಿಂದ ಸರ್ಕಾರದ ಪಾಂಜರಪೋಳ ಯೋಜನೆಯಡಿ ಅನುದಾನ ನೀಡಲಾಗುತ್ತಿದೆ. 125ರಿಂದ 300ರವರೆಗೆ ಹಸುಗಳು ಇದ್ದ ಗೋಶಾಲೆಗಳಿಗೆ ಸರ್ಕಾರದಿಂದ ಅನುದಾನ ನೀಡಲು ಅವಕಾಶವಿದೆ. ಅದರಂತೆ ಪ್ರತಿ ಹಸುಗೆ ದಿನಕ್ಕೆ 17.50 ರೂ.ಗಳನ್ನು ಎರಡು ಗೋಶಾಲೆಗಳಿಗೂ ಎರಡು ವರ್ಷಗಳಿಂದ ನೀಡಲಾಗುತ್ತಿದೆ. ಬಳ್ಳಾರಿ ಜಿಲ್ಲೆಯಲ್ಲಿ ಸರ್ಕಾರದ ಗೋಶಾಲೆಗಳಿಲ್ಲ. ಖಾಸಗಿ ಎನ್‌ಜಿಒ ಸಹಯೋಗದಲ್ಲಿ ಮೂರು ಗೋಶಾಲೆಗಳು ಇವೆ. ಬಳ್ಳಾರಿಯ ಗೋರಕ್ಷಣಾ ಕೇಂದ್ರವನ್ನು ಹೊರತುಪಡಿಸಿ, ಹೊಸಪೇಟೆ ಮತ್ತು ಹಳೆಕೋಟೆಯಲ್ಲಿನ ಗೋಶಾಲೆಗಳಿಗೆ ಎರಡು ವರ್ಷಗಳಿಂದ ಅನುದಾನ ನೀಡಲಾಗುತ್ತಿದೆ. ಗೋಶಾಲೆಗಳಲ್ಲಿ ಅಗತ್ಯ ಮೂಲಸೌಲಭ್ಯಗಳು ಇವೆ.
ಶ್ರೀನಿವಾಸ್, ಸಹಾಯಕ ನಿರ್ದೇಶಕರು, ಪಶುಸಂಗೋಪನಾ ಇಲಾಖೆ, ಬಳ್ಳಾರಿ
ವೆಂಕೋಬಿ ಸಂಗನಕಲ್ಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.